ಯೋಧರನ್ನು ಗೌರವಿಸುವ ಕಾರ್ಯವಾಗಲಿ

ಅಂಕೋಲಾ: ದೇಶದ ಗಡಿ ಕಾಯುವ, ದೇಶಕ್ಕಾಗಿ ಯುದ್ಧ ಭೂಮಿಯಲ್ಲಿ ಹೋರಾಡುವ, ಪ್ರಕೃತಿ ವಿಕೋಪದಂತಹ ಆಪತ್ಕಾಲದಲ್ಲಿ ಜನರ ಪ್ರಾಣ ರಕ್ಷಣೆಗೆ ಧಾವಿಸುವ ಯೋಧರನ್ನು ಗೌರವಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.


ಅಂಕೋಲಾ ಮತ್ತು ಕಾರವಾರ ತಾಲೂಕಿನ ಮಂಡಳದ ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ಪಟ್ಟಣದ ಶ್ರೀ ಶಾಂತಾದುರ್ಗಾ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಇದೇ ವೇಳೆ ಶಿರೂರು ದುರಂತ ಅತ್ಯಂತ ನೋವು ತಂದಿದೆ. ಭಾರತೀಯ ಸೈನ್ಯ ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿದೆ. ನಾಪತ್ತೆಯಾದವರು ಬಹು ಬೇಗ ಪತ್ತೆಯಾಗಲಿ ಎಂದರು.


ನಿವೃತ್ತ ಯೋಧ ಉಮಾಕಾಂತ ಲಕ್ಷ್ಮಣ ನಾಯ್ಕ, ಆನಂದು ಎಚ್. ಗಾಂವಕರ ಮತ್ತು ಗಿರೀಶ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ಹಾಗೂ ಕರಾವಳಿ ಕಾವಲು ಪಡೆಯ ಬೋಟ್ ಕ್ಯಾಪ್ಟನ್ ಆನಂದು ಗಾಂವಕರ ಮಾತನಾಡಿ, ಯೋಧರು ಯಾರೇ ಇರಲಿ ಅವರನ್ನು ಗೌರವಿಸುವ ಕೆಲಸ ನಡೆಯಲಿ. ಸೈನಿಕರ ಮೇಲೆ ಅಭಿಮಾನ ಮೂಡಲಿ. ದೇಶದ ಪ್ರತಿ ಯುವಕರಲ್ಲಿ ದೇಶ ಪ್ರೇಮ ಹೆಚ್ಚಾಗಲಿ ಎಂದರು.


ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಧ್ಯಮ ಪ್ರಭಾರಿ ಜಗದೀಶ ನಾಯಕ ಮೊಗಟಾ, ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೋದ ನಾಯ್ಕ ಮಾತನಾಡಿದರು.
ಯುವ ಮೋರ್ಚಾ ಅಧ್ಯಕ್ಷ ನಿಲೇಶ ನಾಯ್ಕ, ಮಂಡಲದ ಮಾಜಿ ಅಧ್ಯಕ್ಷ ಸಂಜಯ ನಾಯ್ಕ, ಪ್ರಕೋಷ್ಠ ಸಹ ಸಂಚಾಲಕ ರಾಘವೇಂದ್ರ ಭಟ್, ನಿಲೇಶ ನಾಯ್ಕ, ಪುರಸಭೆ ಸದಸ್ಯ ಶ್ರೀಧರ ನಾಯ್ಕ, ಬೊಬ್ರು ವಾಡ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ನಾಯ್ಕ, ಕಾರವಾರ ಬಿಜೆಪಿ ನಗರ ಅಧ್ಯಕ್ಷ ನಾಗೇಶ ಕುರ್ಡೆಕರ, ಗ್ರಾಮೀಣ ಅಧ್ಯಕ್ಷ ಸುಭಾಸ ಗುನಗಿ ಇದ್ದರು.

Let it be an act of honoring the warriors



Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…