ಯೋಗದಿಂದ ರೋಗಮುಕ್ತ ಸಮಾಜ

blank

ಕಲಬುರಗಿ: ಯೋಗ ಶಿಕ್ಷಕರ ವಾಣಿ ಶುದ್ಧವಾಗಿ ಇರಬೇಕು. ಯೋಗವೂ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಶಕ್ತಿ ವೃದ್ಧಿಸುತ್ತದೆ. ಅಲ್ಲದೆ ಸದೃಢ, ಸಂಸ್ಕಾರವಂತ ಸಮಾಜ ನಿರ್ಮಾಣಕ್ಕೆ ಯೋಗ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದು ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಹೇಳಿದರು.
ನಗರದ ಹೊರವಲಯದ ಆಳಂದ ರಸ್ತೆಯಲ್ಲಿನ ಬಿಜಾಸ್ಪುರ್ ರೆಸ್ಟಾರೆಂಟ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಪತಂಜಲಿ ಯೋಗ ಸಮಿತಿಯಿಂದ ಹಮ್ಮಿಕೊಂಡ ಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭ, ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಡಿ, ಪತಂಜಲಿ ಯೋಗ ಪೀಠವೂ ವಿಶ್ವಕ್ಕೆ ಮಾದರಿ ಆಗಿದೆ. ಅದಕ್ಕೆ ತಕ್ಕಂತೆ ಯೋಗ ಶಿಕ್ಷಕರು ಯೋಗದ ಶಕ್ತಿಯನ್ನು ಜನರಿಗೆ ತಲುಪಿಸಿ, ಸ್ವಸ್ಥ ಸಮಾಜ ನಿರ್ಮಿಸಲು ಶ್ರಮಿಸಬೇಕು ಎಂದು ಹೇಳಿದರು.
ಭಾರತ್ ಸ್ವಾಭಿಮಾನದ ಜಿಲ್ಲಾಧ್ಯಕ್ಷ ಶಿವಾನಂದ ಸಾಲಿಮಠ ಮಾತನಾಡಿ, ಒಂದು ತಿಂಗಳ ಯೋಗ ತರಬೇತಿ ಶಿಬಿರದಲ್ಲಿ ೧೫೦ಕ್ಕೂ ಹೆಚ್ಚು ಜನ ಯೋಗಾಭ್ಯಾಸ ಮಾಡಿದ್ದಾರೆ. ಎಲ್ಲರೂ ಸಮರ್ಥ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸಿ, ಎಲ್ಲೆಡೆ ಆರೋಗ್ಯ ಭಾಗ್ಯವನ್ನು ಒದಗಿಸಬೇಕು ಎಂದು ಹೇಳಿದರು.
ಯೋಗ ಶಿಕ್ಷಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪತಂಜಲಿ ಯೋಗ ಸಮಿತಿ ಅಧ್ಯP್ಷÀ ಎಚ್.ಸುಭಾಶ್ಚಂದ್ರ, ಉಷಾ ಭಗತ್, ಆರ್.ಪಿ.ಬೀಜಾಸ್ಪುರ, ಶರಣಬಸಪ್ಪ ಹೀರಾ, ಅಶೋಕ ಗುತ್ತೇದಾರ, ಉಮೇಶ ಶೆಟ್ಟಿ, ಪ್ರಶಾಂತ ಬಿಜಾಸ್ಪೂರ್, ಮಂಜುಳಾ ತಡಿಬಿಡಿಮಠ, ಅಶೋಕ ಪಾಟೀಲ್, ಘನಶಾಮ ಗುತ್ತೇದಾರ, ಕೆಮಸಿಂಗ್ ಪವಾರ, ನಿಂಗಣ್ಣ ವಿಶ್ವಕರ್ಮ, ಶರಣು ಉದನೂರ, ಜಯಶ್ರೀ ಹರವಾಳ, ಲಲಿತಾ ಭೂತಪೂರ, ಲಲಿತಾ ಜೀವಣಗಿ ಇತರರಿದ್ದರು.

Share This Article

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…

ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips

ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…

ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…