More

  ಯುವ ಜನಾಂಗದಲ್ಲಿ ಆತ್ಮವಿಶ್ವಾಸವಿರಲಿ

  ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ಸಮಾಜದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಗುರುತಿಸಿ ಪ್ರೋತ್ಸಾಹಿಸುವವರಿಗೂ ಕೊರತೆ ಇಲ್ಲ. ಆದರೂ ನಿರೀಕ್ಷಿತ ಸಾಧನೆ ಕಾಣುತ್ತಿಲ್ಲ. ನಮ್ಮ ಯುವ ಜನಾಂಗದಲ್ಲಿ ಆತ್ಮವಿಶ್ವಾಸವಿರಬೇಕು ಎಂದು ತುಮಕೂರು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಕೆ. ಸಲಹೆ ನೀಡಿದರು.

  ಪಟ್ಟಣದ ರಾಘವೇಂದ್ರ ಮಠದಲ್ಲಿ ಸ್ಥಳೀಯ ಆರ್ಯ- ಈಡಿಗ- ನಾಮಧಾರಿ – ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

  ಕೇವಲ ಓದುವುದಷ್ಟೇ ಅಲ್ಲ. ಬದಲಾಗುವ ಕಾಲಘಟ್ಟಕ್ಕೆ ಹೊಂದಿಕೊಳ್ಳು ವುದೇ ಬುದ್ದಿಶಕ್ತಿ. ಕಷ್ಟಪಟ್ಟು ಓದಿದರೆ ಸಾಕಾಗುವುದಿಲ್ಲ. ಇಷ್ಟಪಟ್ಟು ಓದಬೇಕು. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಸೂಕ್ತ ಸಮಯದಲ್ಲಿ ಮಾಡಬೇಕು. ನಮ್ಮ ಸಣ್ಣ ಸಣ್ಣ ಆಸೆಗಳನ್ನು ಬದಿಗೆ ಸರಿಸಬೇಕು. ಅದಕ್ಕೆ ಪೂರಕವಾಗುವಂತೆ ಪಾಲಕರು ಮನೆಯ ವಾತಾವರಣ ಇಟ್ಟುಕೊಳ್ಳಬೇಕು. ಅಂದಾಗ ಸಾಧನೆ ಸಾಧ್ಯ ಎಂದು ಹೇಳಿದರು.

  ಸಂಘದ ಅಧ್ಯಕ್ಷ ಜಿ.ಐ. ನಾಯ್ಕ ಗೋಳಗೋಡ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ದೇವರಾಜ್ ಆರ್., ತಾಲೂಕು ನಾಮಧಾರಿ ಸಂಘದ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್, ಎಪಿಎಂಸಿ ಅಧ್ಯಕ್ಷ ಕೆ.ಜಿ. ನಾಗರಾಜ, ರಾಜೇಶ ಆರ್. ನಾಯ್ಕ, ಡಾ. ಲಕ್ಷ್ಮೀಕಾಂತ ನಾಯ್ಕ, ನಾಗರಾಜ ನಾಯ್ಕ ಬೇಡ್ಕಣಿ, ಸುಮಂಗಲಾ ನಾಯ್ಕ, ಇತರರು ಇದ್ದರು.

  ಚನ್ನಬಸಪ್ಪ ಕೆ., ತಾಲೂಕು ಸಹಾಯಕ ಕೃಷಿ ನಿರ್ದೇಶಕ ದೇವರಾಜ್ ಆರ್., ಯು.ಡಿ. ನಾಯ್ಕ, ಉಮೇಶ ಟಪಾಲ್ ಅವರನ್ನು ಸನ್ಮಾನಿಸಲಾಯಿತು.

  ಸಂಘದ ಕಾರ್ಯದರ್ಶಿ ಆರ್.ಆರ್. ನಾಯ್ಕ ಸ್ವಾಗತಿಸಿದರು. ಎಂ.ಕೆ. ನಾಯ್ಕ ಕಡಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಜಿ. ನಾಯ್ಕ ವಂದಿಸಿದರು. ಗಣೇಶ ಪೂಜಾರಿ, ಪರುಶುರಾಮ ನಾಯ್ಕ ನಿರ್ವಹಿಸಿದರು.

  See also  ಭಯ ಬಿಟ್ಟು ಚುಚ್ಚುಮದ್ದು ಪಡೆಯಿರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts