Tuesday, 11th December 2018  

Vijayavani

Breaking News

ಯುವಭಾರತ ಬದಲಾವಣೆಯ ಮಾರುತ

Friday, 12.01.2018, 3:06 AM       No Comments

ಯುವಜನರ ಶಕ್ತಿಸಾಮರ್ಥ್ಯಗಳ ಬಗ್ಗೆ ಅಪಾರವಾದ ನಂಬಿಕೆ ಹೊಂದಿದ್ದರು ಸ್ವಾಮಿ ವಿವೇಕಾನಂದರು. ಯುವಪೀಳಿಗೆಯ ರೋಲ್ ಮಾಡೆಲ್ ಆದ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಯುವಶಕ್ತಿಯಿಂದ ದೇಶಕಟ್ಟುವ ಈ ದಾರ್ಶನಿಕನ ಕನಸನ್ನು ನನಸು ಮಾಡುವ ಹೊಣೆಗಾರಿಕೆ ಭಾರತೀಯರ ಮೇಲಿದೆ. ತಾನು ಜಾಗತಿಕ ಸೂಪರ್ ಪವರ್ ಎಂದು ಬೀಗುವ ಅಮೆರಿಕದ ಒಟ್ಟು ಜನಸಂಖ್ಯೆಗಿಂತ ನಮ್ಮಲ್ಲಿನ ಯುವಜನರ ಪ್ರಮಾಣ ಹೆಚ್ಚು. ಈ ಸಂಪನ್ಮೂಲವನ್ನು ಸೂಕ್ತವಾಗಿ ಬಳಸಿಕೊಂಡು ಭಾರತವನ್ನು ಬಲಿಷ್ಠವಾಗಿ ಕಟ್ಟುವ ಕಾರ್ಯಕ್ಕೆ ಕೈಜೋಡಿಸುವುದೇ ವಿವೇಕಾನಂದರಿಗೆ ನೀಡಬಹುದಾದ ಉಡುಗೊರೆ.

ವಿವೇಕ ವಾಣಿ

ಎದ್ದೇಳು! ನಿರ್ಭೀತನಾಗು! ಬಲಾಢ್ಯನಾಗು! ಎಲ್ಲ ಹೊಣೆಗಾರಿಕೆಯನ್ನೂ ನಿನ್ನ ಹೆಗಲಮೇಲೆ ಹೊತ್ತುಕೋ. ನಿನ್ನ ಭವಿಷ್ಯದ ನಿರ್ವಪಕ ನೀನೇ ಎಂಬುದನ್ನು ತಿಳಿದಿರು. ನಿನಗೆ ಅಗತ್ಯವಿರುವ ಎಲ್ಲ ಶಕ್ತಿ-ಸಾಮರ್ಥ್ಯಗಳೂ ನಿನ್ನೊಳಗೇ ಇವೆ. ಆದ್ದರಿಂದ ನಿನ್ನ ಭವಿಷ್ಯ ನೀನೇ ರೂಪಿಸಿಕೋ.

ವಿಜಯವಾಣಿ ಕಳಕಳಿ

# ವ್ಯವಸ್ಥೆಯ ಅಪಸವ್ಯಗಳ ವಿರುದ್ಧ ದನಿಯೆತ್ತುವ ಯುವಕರ ಬಿಸಿರಕ್ತ, ಸಾತ್ವಿಕ ಆಕ್ರೋಶ ದೇಶದಲ್ಲಿನ ಭ್ರಷ್ಟಾಚಾರ, ಅಕ್ರಮಗಳಿಗೆ ಕಡಿವಾಣ ಹಾಕಲು ಬಳಕೆಯಾದಲ್ಲಿ ಭವ್ಯ ಭಾರತ ನಿರ್ಮಾಣ ಕನಸು ನನಸಾಗುವುದು ಕಷ್ಟವೇನಲ್ಲ

# ಯುವಕರು ಸಿಡಿದೆದ್ದರೆ ವ್ಯವಸ್ಥೆಯಲ್ಲಿ ಬದಲಾವಣೆ ತರಬಲ್ಲರು ಎಂಬುದಕ್ಕೆ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರದ ಘಟನಾವಳಿಗಳೇ ಸಾಕ್ಷಿ. ಯುವಶಕ್ತಿಯ ಆಗ್ರಹಕ್ಕೆ ಮಣಿದ ಸರ್ಕಾರ ಮಹಿಳಾ ದೌರ್ಜನ್ಯ ಕಾನೂನುಗಳಿಗೆ ಬಲತುಂಬಿತು. ಸರ್ಕಾರದ ಮಾತುಕೇಳಿಸದ ಯುವಸಮೂಹಕ್ಕೆ ಸಮಾಜ ಬದಲಿಸುವ ಶಕ್ತಿಯೂ ಇದೆ.

# ಕಳೆದ ಲೋಕಸಭೆ ಚುನಾವಣೆಯಲ್ಲಿ 26-35 ವಯೋಮಾನದ ಮತದಾರರ ಪೈಕಿ ಶೇ.41 ಮಂದಿ ಎನ್​ಡಿಎಗೆ ಮತಹಾಕಿದ್ದಾರೆ. ತಮಗೆ ಏನು ಬೇಕೆಂಬುದನ್ನು ಹೇಳಬಲ್ಲ ಯುವಜನರು ಉತ್ತಮ ಸಮಾಜ ನಿರ್ವಣಕ್ಕೂ ಯೋಗದಾನ ನೀಡಬಹುದು.

# ತಂತ್ರಜ್ಞಾನ ಪರಿಣತ ಯುವಜನರು ಈ ಜ್ಞಾನವನ್ನು ಜನರ ದೈನಂದಿನ ಬದುಕನ್ನು ಇನ್ನಷ್ಟು ಸುಗಮಗೊಳಿಸುವ ಆವಿಷ್ಕಾರಗಳಿಗೆ ತೊಡಗಿಸಬಹುದು.

ಯುವ ಸ್ವಾರಸ್ಯ

# ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.65 ಜನತೆ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು

# ಭಾರತದಲ್ಲಿ ಇರುವ ಯುವಕರ ಸಂಖ್ಯೆ (14-35 ವಯೋಮಾನ) 78 ಕೋಟಿ

# ದೇಶದ 132 ಕೋಟಿ ಜನರಲ್ಲಿ ಶೇ. ಶೇ.50 ಜನ 25 ವರ್ಷಕ್ಕಿಂತ ಕಡಿಮೆ ವಯೋಮಾನದವರು

# ದೇಶದಲ್ಲಿ ಮೂವರಲ್ಲಿ ಇಬ್ಬರು 35 ವರ್ಷಕ್ಕಿಂತ ಕಡಿಮೆ ವಯೋಮಾನದವರು

ಮೂರು ದೇಶಗಳ ಜನಸಂಖ್ಯೆಗೆ ನಮ್ಮ ಯುವಸಂಖ್ಯೆ ಸಮ

ಭಾರತದಲ್ಲಿರುವ ಯುವಕರ ಸಂಖ್ಯೆ(78 ಕೋಟಿ )ಅಮೆರಿಕ, ಇಂಡೋನೇಷ್ಯಾ ಹಾಗೂ ಬ್ರೆಜಿಲ್​ನ ಒಟ್ಟು ಜನಸಂಖ್ಯೆಗೆ ಸಮ. ಅಮೆರಿಕದ ಜನಸಂಖ್ಯೆ 32 ಕೋಟಿಯಾದರೆ, ಇಂಡೋನೇಷ್ಯಾ 26 ಕೋಟಿ, ಬ್ರೆಜಿಲ್ 20 ಕೋಟಿ ಜನಸಂಖ್ಯೆ ಹೊಂದಿವೆ.

ಸೆಲ್ಪಿ ವಿಥ್ ವಿವೇಕಾನಂದ

ವಿವೇಕಾನಂದ ಜನ್ಮದಿನ ಅಂಗವಾಗಿ ವಿಜಯವಾಣಿ ಸೆಲ್ಪಿ ವಿಥ್ ವಿವೇಕಾನಂದ ಚಿತ್ರಗಳನ್ನು ಆಹ್ವಾನಿಸಿತ್ತು. ರಾಜ್ಯಾದ್ಯಂತ ಸಾವಿರಾರು ಓದುಗರು ವಿವೇಕಾನಂದರ ಪ್ರತಿಮೆ, ಕೃತಿ, ಪೋಸ್ಟರ್, ದೇವರ ಮನೆಯಲ್ಲಿರುವ ವಿವೇಕಾನಂದರ ವಿಗ್ರಹ, ಗೋಡೆಯ ಮೇಲೆ ಚಿತ್ರಿಸಿದ ಚಿತ್ರಗಳ ಹಿನ್ನೆಲೆಯಲ್ಲಿ ಸೆಲ್ಪಿ ತೆಗೆದು ಕಳಿಸಿದ್ದರು. ಇಂಥ ಕೆಲವು ಆಯ್ದ, ಅತ್ಯುತ್ತಮ ಚಿತ್ರಗಳನ್ನು ಪ್ರಕಟಿಸಲಾಗಿದೆ.

Leave a Reply

Your email address will not be published. Required fields are marked *

Back To Top