ಯುವಪೀಳಿಗೆಗೆ ಸಂಪ್ರದಾಯಗಳ ಮಾಹಿತಿ ಅಗತ್ಯ

ಸಾಗರ: ಸಾಂಪ್ರದಾಯಿಕ ದಿನಾಚರಣೆಗಳು ನಾಮ್ೇವಸ್ಥೆ ಆಗಬಾರದು. ಅವುಗಳ ಪ್ರಾಮುಖ್ಯತೆಯನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ ಎಂದು ಮೋಹನ್ ಪೈ ತಿಳಿಸಿದರು.

ಹೆಗ್ಗೋಡು ಕೇಡಲಸರದ ಕಾಕಾಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂಪ್ರದಾಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಪ್ರದಾಯಗಳ ಬಗ್ಗೆ ನಮ್ಮಲ್ಲಿ ಮೊದಲು ಹೆಮ್ಮೆ ಇರಬೇಕು. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಂಪ್ರದಾಯಗಳಿವೆ. ಆದರೆ ಯುವ ಪೀಳಿಗೆಗೆ ಅದರ ಬಗ್ಗೆ ಯಾವುದೆ ಮಾಹಿತಿ ಇಲ್ಲ. ಅವುಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅರಿತುಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ಶಾಲಾಕಾಲೇಜಿನಲ್ಲಿ ಆಯೋಜಿಸುವುದು ಅಗತ್ಯ ಎಂದರು.

ಸಂಪ್ರದಾಯದ ಹಾಡುಗಳು, ಹಸೆ, ಸುಗ್ಗಿ ಪದ, ಹಬ್ಬಹರಿದಿನಗಳಲ್ಲಿ ನಡೆಸುವ ಕೆಲವು ವಿಶೇಷ ಆಚರಣೆಗಳಿಗೆ ಧಾರ್ವಿುಕತೆಯ ಜತೆಗೆ ವೈಜ್ಞಾನಿಕ ಹಿನ್ನೆಲೆಯೂ ಇರುತ್ತದೆ. ಇದರ ಬಗ್ಗೆ ಪಠ್ಯಗಳಲ್ಲಿ ನಮಗೆ ಯಾವುದೆ ಮಾಹಿತಿ ಸಿಗುವುದಿಲ್ಲ. ಇದನ್ನು ತಿಳಿದವರು, ತಿಳಿಯದವರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು. ಪ್ರಾಚಾರ್ಯ ಎ.ಎಸ್.ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಪೈ, ವಾಸು, ವಸುಂಧರಾ, ಸುರೇಶ್, ಎಚ್.ಎಂ.ಮಂಗಳಾ ಇತರರಿದ್ದರು.