ಯುವಪಡೆ ಸ್ಫೂರ್ತಿಯ ಚಿಲುಮೆಗಳಾಗಿ

ವಿಜಯವಾಣಿ ಸುದ್ದಿಜಾಲ ಕಕ್ಕೇರಾ
ಯುವಕ ಯುವತಿಯರು ಸದಾ ಸ್ಫೂರ್ತಿಯ ಚಿಲುಮೆಗಳಾಗಿ ರಾಷ್ಟ್ರದ ಪ್ರಗತಿಯಲ್ಲಿ ಸದಾ ಜಾಗೃತರಾಗಬೇಕು ಎಂದು ಯುವ ಸ್ಪಂದನ ಕೇಂದ್ರದ ತಾಲೂಕು ಸಂಚಾಲಕ ದಯಾನಂದ ಮಠ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಜೀವನ ಕೌಶಲ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಯುವ ಸ್ಪಂದನದಿಂದ ಒಂದು ಉತ್ತಮ ಸಮಾಜ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.

ಮುಖ್ಯವಾಗಿ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಆರೋಗ್ಯ, ಸಕರಾತ್ಮಕ ಚಿಂತನೆ, ವ್ಯಸನಗಳ ನಿರ್ವಹಿಸುವಿಕೆ, ತಂದೆ ತಾಯಿಯ ಜತೆಗಿನ, ಅಂತರಪೀಳಿಗೆಯ, ವೈವಾಹಿಕ ಸಂಬಂಧಗಳು, ಗುರಿ ನಿರ್ವಹಿಸುವಿಕೆ, ಏಕಾಗ್ರತೆ ಸೇರಿ ಹ;ವು ಅವಶ್ಯಕ ವಿಷಯಗಳ ಬಗ್ಗೆ ಯುವಜನತೆಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುವುದು ಯುವ ಸ್ಪಂದನದ ಮುಖ್ಯ ಗುರಿಯಾಗಿದೆ ಎಂದರು.

ಪ್ರಾಚಾರ್ಯ ಭೀಮಣ್ಣ ಬೋಸಗಿ ಮಾತನಾಡಿ, ಇಂದಿನ ಯುವಪೀಳಿಗೆ ಮಧ್ಯಪಾನ, ಧೂಮಪಾನ, ಮೊಬೈಲ್, ಬೈಕ್ನಂತಹ, ಮೋಜುಮಸ್ತಿ ಕಡೆಗೆ ಗಮನಹರಿಸದೇ, ಉಪನ್ಯಾಸಕರ ಮಾರ್ಗದರ್ಶನದಲ್ಲಿ ಕಠಿಣ ಅಧ್ಯಯನ ನಡೆಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಯುವ ಸ್ಪಂದನ ಕೇಂದ್ರದ ಮುಖ್ಯಸ್ಥರು ಕಾಲೇಜು ವಿದ್ಯಾಥರ್ಿಗಳಿಗೆ ಪ್ರಾಯೋಗಿಕವಾಗಿ ಹಲವು ಚಟುವಟಿಕೆಗಳನ್ನು ತೋರ್ಪಡಿಸಲಾಯಿತು. ಪ್ರಮುಖರಾ ಗುಂಡಪ್ಪ ಸೊಲ್ಲಾಪುರ, ಲಕ್ಷ್ಮಣ ಲಿಂಗದಳ್ಳಿ, ಅಶೋಕ ಕೋಳೂರ್, ಸಹೀದಾಬೇಗಂ, ಹುಚ್ಚೇಶ್ವರಿ, ರಮೇಶ ಯಮನೂರ, ರಾಮಲಿಂಗನಾಯಕ ಕಾಲೇಜು ವಿದ್ಯಾಥರ್ಿಗಳಿದ್ದರು.