ಯುಧಿಷ್ಠಿರನ ವೈರಾಗ್ಯದ ನುಡಿಗಳು

Latest News

ಸಾಲ ಮರುಪಾವತಿಸದ ಮಹಿಳೆಯರ ಮನೆಗೆ ಬೀಗ ಜಡಿದ ಹಣಕಾಸು ಸಂಸ್ಥೆ: ಛಾವಣಿ ಏರಿ ಮನೆ ಪ್ರವೇಶಿಸುತ್ತಿರುವ ಮಹಿಳೆಯರು

ಮೈಸೂರು: ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಗ್ರಾಮಶಕ್ತಿ ಮೈಕ್ರೋ ಫೈನಾನ್ಸ್​ ಸಂಸ್ಥೆ ಇಬ್ಬರು ಬಡ ಮಹಿಳೆಯರ ಮನೆಗೆ ಬೀಗ ಜಡಿದಿದೆ. ಪಡೆದಿದ್ದ ಸಾಲದ ಎರಡು...

ಕುರಿಯ ಡಬಲ್ ಮರ್ಡರ್ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸಿದ ಪುತ್ತೂರು ಪೊಲೀಸರು

ಪುತ್ತೂರು: ಕುರಿಯ ಗ್ರಾಮದ ಅಜಲಾಡಿಯಲ್ಲಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದ ಜೋಡಿ ಕೊಲೆ ಕೃತ್ಯದ ಆರೋಪಿಯನ್ನು ಕೇವಲ 24 ಗಂಟೆಯಲ್ಲಿ ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ...

ಮಾಜಿ ಸಿಎಂ ಸಿದ್ದು ವಿರುದ್ಧ ಗುಡುಗಿದ ಸಿಎಂ ಬಿಎಸ್​ವೈ ಸಂಸದೆ ಸುಮಲತಾ ಬೆಂಬಲ ಕುರಿತು ಹೇಳಿದ್ದು ಹೀಗೆ…

ಬೆಂಗಳೂರು: ಉಪಚುನಾವಣೆಯ ಕದನ ದಿನೇ ದಿನೇ ಕುತೂಹಲ ಕೆರಳಿಸುತ್ತಿದೆ. ಹಾಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತಿನ ಚಾಟಿ...

ಶಾಸಕ ತನ್ವೀರ್​ ಸೇಠ್​ಗೆ ಭದ್ರತೆ ಹೆಚ್ಚಳ ಮಾಡಿದ ಸರ್ಕಾರ: 24 ತಾಸು 3 ಪಾಳಿಗಳಲ್ಲಿ ಗನ್​ಮ್ಯಾನ್​ ಭದ್ರತೆ

ಮೈಸೂರು: ತೀವ್ರ ಹಲ್ಲೆ ಹಿನ್ನೆಲೆಯಲ್ಲಿ ಶಾಸಕ ತನ್ವೀರ್​ ಸೇಠ್​ಗೆ ಒದಗಿಸಿದ್ದ ಭದ್ರತೆಯನ್ನು ಮೂರುಪಟ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದಿನದ 24 ತಾಸು...

ಸಿನಿಮಾದಂತೆ ರಾಜಕೀಯದಲ್ಲೂ ಮೋಡಿ ಮಾಡಲು ರಜಿನಿ-ಕಮಲ್​ ಸಜ್ಜು: ತ.ನಾಡು ಪಾಲಿಟಿಕ್ಸ್​ ಬಗ್ಗೆ ಮಹತ್ತರ ಸುಳಿವು ನೀಡಿದ ನಟದ್ವಯರು!

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುವ ಮುನ್ಸೂಚನೆ ಕಾಣುತ್ತಿದೆ. ಅದಕ್ಕೆ ಕಾರಣ ನಟನೆಯಿಂದ ರಾಜಕೀಯಕ್ಕೂ ಹೊರಳಿರುವ ರಜನಿಕಾಂತ್​ ಮತ್ತು ಕಮಲ್​ ಹಾಸನ್​ ಎಂಬುದೇ...

ದೇವರ್ಷಿ ನಾರದರು ಯುಧಿಷ್ಠಿರನಿಗೆ ಕರ್ಣನ ಪೂರ್ವ ಇತಿಹಾಸವನ್ನು ಹೇಳುತ್ತಿದ್ದರಷ್ಟೆ. ಆ ಮಾತನ್ನು ಮುಂದುವರಿಸತೊಡಗಿದರು. ‘ಯುಧಿಷ್ಠಿರ! ಕರ್ಣನು ತನ್ನ ಶಸ್ತ್ರಚಾತುರ್ಯ, ಪ್ರಾವೀಣ್ಯತೆಯಿಂದಲೇ ಲೋಕವಿಖ್ಯಾತನಾದನು. ಹಾಗಿರುತ್ತಿದ್ದಾಗ ಒಂದು ದಿನ ದೇವರಾಜನಾದ ಇಂದ್ರನು ಪಾಂಡವರೆನಿಸಿರುವ ನಿಮ್ಮ ಹಿತದ ಮುಂದಾಲೋಚನೆ ಹೊಂದಿದವನಾಗಿ ಮಾಯಾರೂಪ ಧರಿಸಿ ಕರ್ಣನೆದುರು ಬಂದನು. ಅವನ ಬಳಿ ದಾನ ಬೇಡಿ, ಹುಟ್ಟಿದಾಗಿನಿಂದಲೇ ಬಂದಿದ್ದ ಕವಚ ಕುಂಡಲಗಳನ್ನು ತನ್ನ ವಶಕ್ಕೆ ಪಡೆದು ಅವನ ಗುಪ್ತ ಸಾಮರ್ಥ್ಯವನ್ನೇ ಕಸಿದುಕೊಂಡನು. ಕರ್ಣನ ಅವಸಾನಕ್ಕೆ ಅದೊಂದು ಪ್ರಬಲ ಕಾರಣವಾಯಿತು.

ಕರ್ಣನ ಮೃತ್ಯುವು ಘಟಿಸಲು ವಿಧಿಯು ಕಾರಣಗಳನ್ನು ಹೆಣೆದಿತ್ತು. ಒಂದು – ಅಗ್ನಿಹೋತ್ರಿ ವಿಪ್ರನು ನೀಡಿದ ಶಾಪ; ಎರಡನೆಯದು – ಮಾತೆ ಕುಂತಿಗೆ ಸ್ವಯಂ ಅವನೇ, ‘ನಿನಗೆ ಐದು ಮಕ್ಕಳು ಇರುವಂತೆ ರಕ್ಷಿಸುವೆ’ ಎಂದು ಅಭಯದ ವಚನವಿತ್ತುದು; ಮೂರನೆಯದು – ಇಂದ್ರನಿಗೆ ದಾನವಿತ್ತು ತನ್ನ ಭದ್ರ ಕವಚ ಕುಂಡಲರಹಿತವಾದುದು; ನಾಲ್ಕನೆಯದು – ಭೀಷ್ಮನು ಕರ್ಣನನ್ನು ಅರ್ಧರಥಿಯೆಂದು ಶ್ರೇಷ್ಠರೆಲ್ಲರ ಸಮ್ಮುಖದಲ್ಲಿ ಘೊಷಿಸಿ ಅವನ ಆತ್ಮಬಲ ಕುಗ್ಗಿಸಿದ್ದು; ಐದನೆಯದು – ಮದ್ರೇಶ ಶಲ್ಯನು ಹಿತವಂತನಾಗಿದ್ದುಕೊಂಡೇ ರಣರಂಗದಲ್ಲಿ ಕರ್ಣನನ್ನು ಪುನಃ ಪುನಃ ನಿಂದಿಸಿ, ಹೀಯಾಳಿಸಿ ಅವನ ಆತ್ಮಸ್ಥೈರ್ಯವನ್ನು ಕುಗ್ಗಿಸಿರುವುದು ಹಾಗೂ ಆರನೆಯದು – ಪಾಂಡವರ ಪಕ್ಷದಲ್ಲಿದ್ದ ಶ್ರೀಕೃಷ್ಣ ಭಗವಾನನು ರೂಪಿಸಿದ್ದ ವಿಧ ವಿಧವಾದ ಯುದ್ಧತಂತ್ರಗಳು ಕರ್ಣನಿಗೆ ಪ್ರತಿಕೂಲವಾಗಿ ಪರಿಣಮಿಸುತ್ತಿದ್ದುದು. ಇವೆಲ್ಲವೂ ವಿಧಿಯೇ ಒಡ್ಡಿದ ಪ್ರತಿಕೂಲತೆಗಳಾಗಿದ್ದರೆ, ಇನ್ನೊಂದೆಡೆಯಲ್ಲಿ ಕರ್ಣನಿಗೆ ಪ್ರತಿಸ್ಪರ್ಧಿ ಹಾಗೂ ಅವನ ಏಕಮಾತ್ರ ಸಮಬಲನೂ ಆಗಿದ್ದ ಅರ್ಜುನನು ಕರ್ಣನನ್ನು ಮೀರಿಸುವ ಶಸ್ತ್ರಬಲ, ಸಾರಥ್ಯಬಲ ಹೊಂದಿರುವುದು ಮುಖ್ಯವಾಯಿತು.

ಅರ್ಜುನನು ರುದ್ರದೇವ ಶಿವ, ದೇವರಾಜ ಇಂದ್ರ, ಯಮ, ವರುಣ, ಕುಬೇರ, ದ್ರೋಣಾಚಾರ್ಯ ಹಾಗೂ ಆಚಾರ್ಯ ಕೃಪ ಇವರೆಲ್ಲರುಗಳಿಂದಲೂ ಕರ್ಣನನ್ನೂ ಮೀರಿದ ದಿವ್ಯಾಸ್ತ್ರಗಳನ್ನು ಪಡೆದುಕೊಂಡು ಏಕೈಕ ಶಸ್ತ್ರಾಸ್ತ್ರ ಬಲವುಳ್ಳವನಾಗಿದ್ದನು. ಹೀಗೆಲ್ಲ ಅನನ್ಯತೆ ಇದ್ದುದರಿಂದಲೇ ಘಟಿಸಿದ ಯುದ್ಧದಲ್ಲಿ ಸೂರ್ಯಸದೃಶನೇ ಆಗಿದ್ದ ಕರ್ಣನನ್ನು ವಧಿಸಲು ಅವನು ಸಮರ್ಥನಾದನು. ಕರ್ಣನು ಕುಂತಿದೇವಿಗೆ ನೀಡಿದ ವಚನ ಹುಸಿಯಾಗದಂತೆ ನೀವು ಪಂಚಪಾಂಡವರು ಹಾಗೆಯೇ ಉಳಿದುಕೊಂಡಿರುವಿರಿ. ಇವೆಲ್ಲ ವಿಧಿಯ ನಿರ್ಣಯ. ನೀನು ಶೋಕಿಸುತ್ತಿರುವುದು ಯುಕ್ತವಲ್ಲ…’ – ಹೀಗೆಲ್ಲ ನಾರದರು ಸಮಾಧಾನ ಮಾಡಿದರೂ ಯುಧಿಷ್ಠಿರನಲ್ಲಿ ಉಂಟಾದ ಅಂತರಂಗದ ಕ್ಷೆೊಭೆಯು ಶಮನವಾಗಲಿಲ್ಲ. ಶೋಕಮಗ್ನನಾಗಿ ಚಿತ್ತಭ್ರಾಂತಿಗೊಳಗಾದಂತಿದ್ದ ಅವನ ಮನಃಸ್ಥಿತಿಯನ್ನು ಕಾಣುತ್ತಿದ್ದ ಕುಂತಿಯು ಪುನಃ ವಿವೇಕದ ನುಡಿಗಳನ್ನಾಡಿ ಅವನನ್ನು ಸಮಚಿತ್ತನನ್ನಾಗಿಸಲು ಪ್ರಯತ್ನ ಮಾಡಿದಳು.

‘ಸೂರ್ಯದೇವ ಹಾಗೂ ನಾನು ಸ್ನೇಹದ ಮಾರ್ಗ ತೋರಿ ಕರ್ಣನನ್ನು ನಿಮ್ಮೊಂದಿಗೆ ಸೇರಿಸಿ ಒಂದಾಗಿಸಲು ಹಂಬಲಿಸಿದೆವು. ಆದರೆ ಸಫಲರಾಗಲಿಲ್ಲ. ಅವನು ಕಾಲದ ವಶನಾಗಿ ವೈರತ್ವವನ್ನೇ ಸ್ವೀಕರಿಸಿ ಪ್ರತಿಕಾರ ಭಾವವನ್ನು ಹೊಂದಿದನು. ದುರ್ಯೋಧನನ ಪಕ್ಷವನ್ನು ಸೇರಿ ನಿಮ್ಮ ವಿರುದ್ಧ ವಿಪರೀತ ಕಾರ್ಯವೆಸಗತೊಡಗಿದನು. ನಾನು ಕೂಡ ಅವನನ್ನು ಉಪೇಕ್ಷಿಸಿಬಿಟ್ಟೆನು. ನೀನು ಅವನ ವಿಚಾರ ತೊರೆದುಬಿಡು’ – ಹೀಗೆಂದು ಮಾತೆ ಕುಂತಿಯು ಸಮಾಧಾನ ಮಾಡಿದಳು.

ಆದರೆ ಯುಧಿಷ್ಠಿರನ ಚಿತ್ತವು ಸಮತ್ವಕ್ಕೆ ಬರದಾಯಿತು. ಕರ್ಣನನ್ನೇ ಧ್ಯಾನಿಸುತ್ತ, ಉದ್ಗಾರಗೈಯ್ಯುತ್ತ ಶೋಕಿಸುತ್ತಿದ್ದನು. ‘ಕರ್ಣನು ನಮ್ಮದೇ ಸಹೋದರನು, ನನಗೂ ಜ್ಯೇಷ್ಠನು ಎಂಬುದು ಮುಂಚೆಯೇ ಅರಿವಾಗಿದ್ದರೆ ಅವನನ್ನು ಕೊಲ್ಲುವ ಕಾರ್ಯ ಘಟಿಸುತ್ತಲೇ ಇರಲಿಲ್ಲ’ ಎಂದೆಲ್ಲ ಕನಲಿದನು. ‘ಈ ಲೋಕದಲ್ಲಿಯ ಸ್ತ್ರೀಯರು ತಮ್ಮ ಮನಸ್ಸಿನಲ್ಲಿ ಗೋಪ್ಯವಿಚಾರವನ್ನು ಇಟ್ಟುಕೊಳ್ಳುವ ಹಾಗಾಗದಿರಲಿ’ ಎಂದು ತನ್ನ ಪೂವೋಕ್ತ ನುಡಿಯನ್ನೇ ಪುನಃ ಉಚ್ಚರಿಸಿ ಶಪಿಸಿದನು. ಕರ್ಣನದೇ ಸ್ಮರಣೆಯಲ್ಲಿ ಅಶ್ರುಧಾರೆ ಸುರಿಸತೊಡಗಿದನು.

‘ಪುತ್ರ ಪೌತ್ರ ಬಂಧು ಮಿತ್ರರನ್ನು ಮೃತ್ಯುವಶಗೈದು ಗಳಿಸಿರುವ ಈ ವಿಜಯದ ರಾಜಭೋಗ ನನಗೆ ಬೇಕಾಗಿಲ್ಲ. ವೃಷ್ಣಿ, ಸೃಂಜಯರೆಡೆಯಲ್ಲಿ ಭಿಕ್ಷೆ ಬೇಡಿಯಾದರೂ ಬದುಕುವುದೇ ಹಿತವಾಗಿತ್ತು. ಈ ಯುದ್ಧ ಮಾಡಬಾರದಿತ್ತು. ಈಗಿನ ಈ ಪಾಪದ ಸುಖಭೋಗವನ್ನು ಅನುಭವಿಸಲಾರೆ. ಎಲ್ಲ ಮೋಹವನ್ನು ತೊರೆದು ವಿರಕ್ತಮಾರ್ಗವನ್ನು (ವಾನಪ್ರಸ್ಥ, ಸಂನ್ಯಾಸಮಾರ್ಗ) ಹಿಡಿದು ತೆರಳುವೆನು’ ಎಂಬ ಯುಧಿಷ್ಠಿರನ ಕಠೋರ ನಿರ್ಣಯದ ನುಡಿಯನ್ನು ಕೇಳಿ ಅಲ್ಲಿದ್ದವರೆಲ್ಲರ ಮನಸ್ಸು ಒಮ್ಮೆ ಝುುಲ್ಲೆಂದಿತು.

(ಲೇಖಕರು ಹಿರಿಯ ಪತ್ರಕರ್ತರು, ಸಾಹಿತಿ)

(ನಾಳೆ, ಯೋಗವಾಸಿಷ್ಠ ಗ್ರಂಥವನ್ನು ಕುರಿತಾದ ಸ್ವರ್ಣವಲ್ಲೀ ಸ್ವಾಮೀಜಿಯವರ ಅಂಕಣ ‘ಯೋಗವಾಸಿಷ್ಠ’)

- Advertisement -

Stay connected

278,614FansLike
572FollowersFollow
610,000SubscribersSubscribe

ವಿಡಿಯೋ ನ್ಯೂಸ್

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬಳಸಿದ ಪರಿಸರಸ್ನೇಹಿ ಕಾರು...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​ ಪಿಸಿ ThinkPadX1: ಚೀನಾದಲ್ಲಿ ಲೆನೊವೊ ಟೆಕ್...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ ಬಿರ್ಲಾರ ಕೋಪಕ್ಕೆ ಕಾರಣವಾದ ರಾಣಿ ಮುಖರ್ಜಿ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇಗುಲದ ಗರ್ಭಗುಡಿ ಓಪನ್​: 2...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ ಲತಾ ಮಂಗೇಶ್ಕರ್​ ಆರೋಗ್ಯದ ವದಂತಿಗಳಿಗೆ ಕಿವಿಗೊಡಬೇಡಿ:...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...