ಯುಗಾದಿಗೆ ರವಿಚಂದ್ರನ್​ಶಿವಣ್ಣ ಮುಖಾಮುಖಿ

‘ಕ್ರೇಜಿ ಸ್ಟಾರ್’ ರವಿಚಂದ್ರನ್ ಮತ್ತು ‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್ ಅಭಿನಯದ ಸಿನಿಮಾಗಳು ಒಂದೇ ದಿನ ಮುಖಾಮುಖಿ ಆಗೋದಕ್ಕೆ ಸಿದ್ಧವಾಗಿವೆ. ಹೌದು, ರವಿಚಂದ್ರನ್ ಅವರ ‘ದಶರಥ’ ಹಾಗೂ ಶಿವಣ್ಣ ಅಂಧನಾಗಿ ನಟಿಸಿರುವ ‘ಕವಚ’ ಚಿತ್ರಗಳು ಯುಗಾದಿ ಹಬ್ಬದ ಪ್ರಯುಕ್ತ ಏ.5ರಂದು ರಾಜ್ಯಾದ್ಯಂತ ತೆರೆಗೆ ಬರಲಿವೆ ಎನ್ನಲಾಗುತ್ತಿದೆ. ಹಬ್ಬದ ಸಮಯದಲ್ಲಿ ಸ್ಟಾರ್ ನಟರಿಬ್ಬರ ಸಿನಿಮಾಗಳು ಬಿಡುಗಡೆಯಾದರೆ ಅಭಿಮಾನಿಗಳಿಗೆ ಡಬಲ್ ಧಮಾಕಾ ಎನ್ನಬಹುದು. ಸರಿಯಾಗಿ ಒಂದು ವರ್ಷದ ಹಿಂದೆ ‘ಕ್ರೇಜಿ ಸ್ಟಾರ್’ ಅಭಿನಯದ ‘ಬಕಾಸುರ’ ತೆರೆಗೆ ಬಂದಿತ್ತು. ಈಗ ದಶರಥನ ಅವತಾರವೆತ್ತಿದ್ದಾರೆ. ಈ ಚಿತ್ರಕ್ಕೆ ಎಂ.ಎಸ್. ರಮೇಶ್ ನಿರ್ದೇಶನ ಮಾಡಿದ್ದರೆ, ಜಿವಿಆರ್ ವಾಸು ಆಕ್ಷನ್-ಕಟ್​ನಲ್ಲಿ ‘ಕವಚ’ ಸಿದ್ಧಗೊಂಡಿದೆ.