ಯುಕೆಪಿ ನ್ಯಾಯಾಧಿಕರಣ-2 ಸಂತ್ರಸ್ತರಿಗಾಗಿ ಹೋರಾಟ

UKP Tribunal-2 Fight for Victims

ಮುಧೋಳ: ನಾನು ಹಾಗೂ ಮಾಜಿ ಮುಖ್ಯಮಂತ್ರಿಯೂ ಆದ ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಕರೆದು ಇಪತ್ತು ಗ್ರಾಮಗಳ ಯುಕೆಪಿ-2 ಸಂತ್ರಸ್ತರ ಒಂದು ಲಕ್ಷ ಎಕರೆ ಜಮೀನಿಗೆ ಪರಿಹಾರ ಕೊಡಿಸಲು ಹೋರಾಟ ಮಾಡಲು ತೀರ್ಮಾನ ಮಾಡುತ್ತೇವೆ ಎಂದರು.

ನೀರಾವರಿಗಾಗಿ ಬಿಜೆಪಿ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿತ್ತು. ಸಿದ್ದರಾಮಯ್ಯ ಸರ್ಕಾರ ಕೃಷ್ಣಾ ಕಣಿವೆಯ ಕಾಮಗಾರಿಗೆ ಒಂದು ರೂ. ಬಿಡುಗಡೆ ಮಾಡಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಗೋಳು ಕೇಳುವವರಿಲ್ಲದಂತಾಗಿದೆ ಎಂದು ಭಾನುವಾರ ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಾಗಲಕೋಟೆಯಲ್ಲಿ ನಡೆದ ಹೋರಾಟದಲ್ಲಿ ಸಂಬಂಧಪಟ್ಟ ಮಂತ್ರಿಗಳು ಬಂದು ಮಾತನಾಡದೆ ಕಾಂಗ್ರೆಸ್ ಪಕ್ಷದ ಸಂತ್ರಸ್ತರ ಬಾಯಿಯಿಂದ ಹೇಳಿಸಿ ಹೋರಾಟಗಾರರ ಬಾಯಿ ಮುಚ್ಚಿಸಿದ್ದು ಸೊಚನೀಯ ಸಂಗತಿ ಎಂದರು.

ಬಿಜೆಪಿಯಲ್ಲಿ ಜಗಳವಿಲ್ಲ: ಎಲ್ಲ ಪಕ್ಷಗಳಂತೆ ನಮ್ಮ ಪಕ್ಷದಲ್ಲಿಯೂ ಸಹ ಕೆಲವರಲ್ಲಿ ಅರೆಮನಸ್ಸು ಇದ್ದು ಅದನ್ನು ಪ್ರಪಂಚದ ದೊಡ್ಡ ಪಕ್ಷ ಎನಿಸಿಕೊಂಡ ಬಿಜೆಪಿಯ ಹೈಕಮಾಂಡ್ ಯಾವ ರೀತಿ ಬಗೆ ಹರಿಸಬೇಕೆಂಬ ಶಕ್ತಿಯೂ ಅದಕ್ಕಿದೆ. ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ನಾನು ಸಿದ್ಧಾಂತದ ಹಾಗೂ ಪಕ್ಷದ ಪರವಾಗಿ ಕಾರ್ಯ ಮಾಡುತ್ತೇನೆ. ಯಾರೇ ಅಧಕ್ಷರಾದರೂ ಅವರಿಗೆ ನನ್ನ ಪಕ್ಷ ವಹಿಸಿದ ಜವಾಬ್ದಾರಿಯಂತೆ ಕಾರ್ಯ ಮಾಡುತ್ತೇನೆ ಎಂದು ಕಾರಜೋಳ ಹೇಳಿದರು.

ತಾಲೂಕಿನಲ್ಲಿ ನಯಾಪೈಸೆ ಕೆಲಸವಾಗಿಲ್ಲ: ಮುಧೋಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇಲ್ಲಿಯವರೆಗೆ ಒಂದು ನಯಾಪೈಸೆ ಅಭಿವೃದ್ಧಿ ಕಾರ್ಯವಾಗಿಲ್ಲ ನಮ್ಮ ಅವಧಿಯಲ್ಲಿ ನಡೆದ ಕಾಮಗಾರಿಯನ್ನು ಮುಂದುವರಿಸಲು ಸಹ ಹಣ ಇಲ್ಲ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಈ ಕಾರಣಕ್ಕಾಗಿ ರಾಜ್ಯದಲ್ಲಿ ಗುತ್ತಿಗೆದಾರರ ಆತ್ಮಹತ್ಯೆ ನತಡೆಯಲು ಐವತ್ತುಸಾವಿರ ಕೋಟಿ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಹೇಳಿದರು. ಮುಂದಿನ ಪೀಳಿಗೆಗೆ ನದಿ ಇರಲ್ಲ: ಮುಧೋಳ ತಾಲೂಕಿನಲ್ಲಿ ಯಾವುದೇ ಅಂಜಿಕೆ ಇರದೆ ನಿರಂತರವಾಗಿ ಮರಳು ಮಾಫಿಯಾ ನಡೆಯುತ್ತಿದ್ದರೂ ಸಂಬಂಧಿಸಿದವರು ಕಣ್ಮುಚ್ಚಿ ಕುಳಿತಿದ್ದು, ಆಯಾ ಗ್ರಾಮಸ್ಥರು ಎಚ್ಚೆತ್ತುಕೊಂಡು ಮುಂದಿನ ನಮ್ಮ ಪೀಳಿಗೆಗೆ ನದಿ ಉಳಿಯಬೇಕಾದರೆ ಮರಳು ಮಾಫಿಯಾ ನಡೆಯದಂತೆ ತಡೆಯಬೇಕು. ಇಲ್ಲದಿದ್ದರೆ ಮುಂದಿನ ಜನಾಂಗ ನಕಾಶೆಯಲ್ಲಿ ನದಿ ನೋಡುವಂತಾಗುತ್ತದೆ ಎಂದರು.

ರನ್ನ ಉತ್ಸವಕ್ಕೆ ಹಣ ತೆಗೆದುಕೊಂಡಿದ್ದರೆ ನನ್ನ ಕೈ ಕತ್ತರಿಸಲಿ: ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡಿದ ಮೈಸೂರು ದಸರಾದ ಮಾದರಿಯಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಅಂದರೆ ಮುಧೋಳದಲ್ಲಿ ರಾಜ್ಯದ ಕವಿಚಕ್ರವರ್ತಿ ಎನಿಸಿಕೊಂಡ ರನ್ನನ ಹೆಸರಲ್ಲಿ ಮಾಡಲು ನಿರ್ಧಾರ ಮಾಡಿ ಆರಂಭಿಸಲಾಗಿತ್ತು. ರನ್ನ ಉತ್ಸವವಾಗಲಿ ಅಥವಾ ಮುಧೋಳದಲ್ಲಿ ನಡೆದ 64ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕಾಗಲಿ ನಾವು ಯಾರ ಬಳಿಯೂ ಹಣ ಸಂಗ್ರಹ ಮಾಡಿಲ್ಲ. ಸಾಂಸ್ಕೃತಿಕ ಉತ್ಸವಕ್ಕೆ ಹಣ ಕೇಳಿದ್ದೇವೆ ಎಂದು ಹೇಳಿದ್ದರೆ ಕೇಳಿದವರ ನಾಲಿಗೆ, ನಾನು ತೆಗೆದುಕೊಂಡಿದ್ದರೆ ನನ್ನ ಕೈ ಕತ್ತರಿಸಲಿ ಎಂದು ಸಂಸದ ಗೋವಿಂದ ಕಾರಜೋಳ ಖಾರವಾಗಿ ಹೇಳಿದರು.

ನನ್ನ ಅವಧಿಯಲ್ಲಿ ರನ್ನ ಉತ್ಸವ ಮಾಡಿದಾಗ ಮನೆಮನೆಗೆ ಹೋಗಿ ಆಮಂತ್ರಣ ಕೊಟ್ಟು ಮೂರು ದಿನ ಹಗಲು ರಾತ್ರಿ ಊಟ ಮಾಡಿಸಿ ಮನೆಗೆ ಬೀಳ್ಕೊಟ್ಟ ಸರ್ಕಾರ ನಮ್ಮದು. ಮುಧೋಳದಲ್ಲಿ ರನ್ನ ಉತ್ಸವ ನಡೆಯುತ್ತಿದ್ದು, ಅದು ಸೂಸೂತ್ರವಾಗಿ ನಡೆಯಲಿ ಎಂದು ಹೇಳಿದರು.
ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಸಂಗಣಗೌಡ ಕಾತರಕಿ, ಕೆಎಮ್‌ಎಫ್ ನಿರ್ದೇಶಕ ವಿವೇಕಾನಂದಗೌಡ ಪಾಟೀಲ್, ಮಾಜಿ ಬಿಜೆಪಿ ಅಧ್ಯಕ್ಷ ಕೆ.ಆರ್. ಮಾಚಪ್ಪನವರ, ಹನಮಂತ ತುಳಸಿಗೇರಿ, ನಗರಸಭೆ ಮಾಜಿ ಅಧ್ಯಕ್ಷ ಗುರುಪಾದ ಕುಳಲಿ, ಡಾ.ರವಿ ನಂದಗಾಂವ, ಅನಂತರಾವ್ ಘೋರ್ಪಡೆ, ಸೋನಾಪಿ ಕುಲಕರ್ಣಿ,ಸದಾಶಿವ ತೇಲಿ,ಗೌಡಣ್ಣ ಪಾಟೀಲ್, ತುಷಾರ ಭೂಪಳೆ ಇದ್ದರು.

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…