ಯಾರಿಗೂ ಬೇಕಾಗಿಲ್ಲ ಸಂಚಾರ ಸುರಕ್ಷೆ!

Latest News

ಎನ್​ಆರ್​ಸಿ ದೇಶಕ್ಕೆ ವಿಸ್ತರಣೆ: ಸಂಸತ್ತಿನಲ್ಲಿ ಅಮಿತ್ ಷಾ ಘೋಷಣೆ

ನವದೆಹಲಿ:ದೇಶಾದ್ಯಂತ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್​ಆರ್​ಸಿ) ನಡೆಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿ, ದೇಶಾದ್ಯಂತ ಎನ್​ಆರ್​ಸಿ ನಡೆಸಲು...

ನಷ್ಟ ಕಡಿಮೆ ಮಾಡಿದರೆ ಲಾಭ ಸಾಧ್ಯ

ಕೊಪ್ಪಳ: ದಾಳಿಂಬೆ ಬೆಳೆಯಲ್ಲಿ ರೈತರು ಶೇ.35 ನಷ್ಟ ಅನುಭವಿಸುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಂಡಲ್ಲಿ ಹೆಚ್ಚಿನ ಆದಾಯ ಪಡೆಯಬಹುದೆಂದು ಭಾರತೀಯ ದಾಳಿಂಬೆ ಬೆಳೆಗಾರರ ಸಂಘದ...

ಜನಜಾಗೃತಿ ಅಭಿಯಾನಕ್ಕೆ ಅಭಿನವ ಗವಿಶ್ರೀ ಚಾಲನೆ

ಕಾರಟಗಿ: ಪಟ್ಟಣದಲ್ಲಿ ಜೆಸ್ಕಾಂನಿಂದ ಹಮ್ಮಿಕೊಂಡಿದ್ದ ವಿದ್ಯುತ್ ಅಪಾಯಗಳನ್ನು ತಪ್ಪಿಸುವ ಸುರಕ್ಷತಾ ಜನಜಾಗೃತಿ ಅಭಿಯಾನಕ್ಕೆ ಗವಿಮಠದ ಅಭಿನವ ಗವಿಶ್ರೀಗಳು ಬುಧವಾರ ಚಾಲನೆ ನೀಡಿದರು. ಜೆಸ್ಕಾಂನ ಇಇ...

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಮತ್ತೆ ಪ್ರೂವ್ ಮಾಡಿದ ಕೇರಳದ ಈ ಅಜ್ಜಿಯ ವಯಸ್ಸೆಷ್ಟು ಗೊತ್ತೆ?

ತಿರುವನಂತಪುರಂ: ಓದಿಗೆ ವಯಸ್ಸಿನ ಮಿತಿಯಿಲ್ಲ. ಉತ್ಸಾಹ ಹಾಗೂ ಛಲ ಓದಿಗೆ ಮುಖ್ಯ ಎಂದು ಕೇರಳದ 105 ವರ್ಷ ವಯಸ್ಸಿನ ಅಜ್ಜಿಯೊಬ್ಬರು ನಿರೂಪಿಸಿದ್ದಾರೆ. ಕೇರಳ ಸರ್ಕಾರದ...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ ಮಾತ್ರವಲ್ಲ, ಅವಳೊಂದು ಸಂದೇಶ ಸಾರುತ್ತಿದ್ದಾಳೆ…

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​...

ಹುಬ್ಬಳ್ಳಿ/ಧಾರವಾಡ: ಇಲ್ಲಿ ರಸ್ತೆಗಿಳಿದರೆ ಯಾರೂ ನಿರಾಳರಾಗಿ ಸಾಗಲು ಸಾಧ್ಯವಿಲ್ಲ. ಸರಿ ದಾರಿಯಲ್ಲಿರುವವರಿಗೂ ಅಪಘಾತವಾಗಬಹುದು. ಸುರಕ್ಷೆ ಎನ್ನುವುದು ಫಲಕಗಳಲ್ಲಿ ಇರುವುದರ ಅರ್ಧದಷ್ಟೂ ರಸ್ತೆಯಲ್ಲಿ ಪಾಲನೆಯಾಗುತ್ತಿಲ್ಲ. ಪೊಲೀಸರು ಸಂಚಾರ ವೃತ್ತದಲ್ಲಿದ್ದು ಸೀಟಿ ಹೊಡೆಯಬಹುದು, ಕೈ ತೋರಿಸಬಹುದು, ಯಾರನ್ನೋ ಗದರಿಕೊಳ್ಳಬಹುದು ಹೊರತು ಬೇಜವಾಬ್ದಾರಿ ಸವಾರರು/ಚಾಲಕರನ್ನು ಹಿಡಿದು ಶಿಕ್ಷಿಸುವುದು ಕಡಿಮೆ. ಸಂಚಾರ ವೃತ್ತದಲ್ಲೇ ಅಪಘಾತ ಸಂಭವಿಸಿದರೂ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತದೆನ್ನುವ ಖಾತ್ರಿಯೂ ಇಲ್ಲ!

ವಿಜಯವಾಣಿ ತಂಡ ಬುಧವಾರ ಮಧ್ಯಾಹ್ನ ವಿವಿಧ ಸಂಚಾರ ವೃತ್ತಗಳಲ್ಲಿ 15 ನಿಮಿಷ ನಿಂತು ವೀಕ್ಷಿಸಿ, ದಾಖಲಿಸಿಕೊಂಡ ‘ರಿಯಾಲಿಟಿ ಚೆಕ್’ನಲ್ಲಿ ಸಾಬೀತಾಗಿರುವ ಅಂಶ ಇದು.

ಹೌದು, ಸುರಕ್ಷಿತ ಸಂಚಾರದ ಬಗ್ಗೆ ಬಹುಪಾಲು ಜನರೂ, ವ್ಯವಸ್ಥಿತ ನಿಯಂತ್ರಣದ ಬಗ್ಗೆ ಪೊಲೀಸರೂ ಇಲ್ಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಜಾಗೃತಿ ಮೂಡಿಸುವ ಫಲಕಗಳು ನೋಡಲು ಸಾಕಷ್ಟಿದ್ದರೂ ‘ತಿಳಿದವರು, ವಿದ್ಯಾವಂತೆನಿಸಿಕೊಂಡವರೇ’ ಪಾಲಿಸುತ್ತಿಲ್ಲ. ಅನೇಕ ವಿದ್ಯಾರ್ಥಿಗಳಂತೂ ತಮ್ಮ ಬೈಕ್ ಕ್ರೇಜ್, ಎರ್ರಾಬಿರ್ರಿ ಸವಾಗಾಗಿಯೇ ಸಾರ್ವಜನಿಕ ರಸ್ತೆ ಇದೆ ಎಂದುಕೊಂಡಿದ್ದಾರೆ. ಅಂಥವರನ್ನೆಲ್ಲ ಹಿಡಿದು ನಿಲ್ಲಿಸಿ ಕೇಳುವವರು ಮನಸ್ಸು ಬಂದಾಗ, ಒತ್ತಡ ಇದ್ದಾಗ, ಕೇಸು ಬೇಕೆಂದಾದಾಗ ನಿಲ್ಲಿಸುತ್ತಾರೆ.

ಅಂದರೆ- ಇಲ್ಲಿ ನಿಯಮ ತಪ್ಪಿದವರನ್ನು ಹಿಡಿಯುವುದು ಸಮುದ್ರದಲ್ಲಿ ಎಲ್ಲೋ ಬಲೆ ಬೀಸಿದಂತೆ; ದುರದೃಷ್ಟ ಕಾಡಿದ ಮೀನು ಮಾತ್ರ ಸಿಕ್ಕಿಬಿದ್ದಂತೆ ಕೆಲವರಷ್ಟೇ ಸಿಕ್ಕಿಬೀಳುತ್ತಾರೆ!

ಶೇ. 30 ಹೆಲ್ಮೆಟ್ ಇಲ್ಲ

ರಿಯಾಲಿಟಿ ಚೆಕ್ ವೇಳೆ ಹುಬ್ಬಳ್ಳಿಯ ಚನ್ನಮ್ಮ ವೃತ್ತ, ಹೊಸೂರು ವೃತ್ತ, ಹೊಸೂರು ಮಾರುತಿ ದೇವಾಲಯ ಬಳಿ, ಕಿಮ್್ಸ ಗೇಟ್, ವಿದ್ಯಾನಗರ ರಿಲೈಯನ್ಸ್ ಡಿಜಿಟಲ್ ಬಳಿ, ಸ್ಟೇಶನ್ ರಸ್ತೆ ಹಾಗೂ ಧಾರವಾಡ ಜ್ಯುಬಿಲಿ ವೃತ್ತದಲ್ಲಿ ಹಾದುಹೋಗುವ ತಲಾ 200 ಬೈಕ್​ಗಳನ್ನು ಎಣಿಸಲಾಯಿತು.

ಶೇ. 30ರಷ್ಟು ಸವಾರರು ಹೆಲ್ಮೆಟ್ ಧರಿಸಿರಲಿಲ್ಲ. ಶೇ. 2ರಷ್ಟು ಹೆಚ್ಚು 3 ಜನ ಸವಾರಿ ಮಾಡುವ, ಶೇ. 3ರಷ್ಟು ತಪ್ಪು ತಿರುವ ತೆಗೆದುಕೊಳ್ಳುವ, ಶೇ. 4ಕ್ಕಿಂತ ಹೆಚ್ಚು ಸಿಗ್ನಲ್ ಜಂಪ್ ಮಾಡುವ, ಶೇ. 2.5ಕ್ಕಿಂತ ಹೆಚ್ಚು ಏಕಮುಖ ರಸ್ತೆಯಲ್ಲಿ ಸಂಚರಿಸುವ ಪ್ರಕರಣಗಳು ಕಂಡುಬಂದವು. ಇಂಥ ಪ್ರತಿ ಪ್ರಕರಣವೂ ನಿಯಮ ಪಾಲಿಸುವ ಇತರರಿಗೆ ಒಂದಲ್ಲ ಒಂದು ರೀತಿಯಲ್ಲಿ ಅಡಚಣೆ ಉಂಟುಮಾಡುವುದು ಸಹ ಗಮನಕ್ಕೆ ಬಂತು.

ಚಾಲಕ ಸೇರಿ ಕಾರಿನ ಮುಂದಿನ ಸೀಟಿನಲ್ಲಿದ್ದವರು ಬೆಲ್ಟ್ ಧರಿಸದೇ ಇದ್ದ, ಆಟೋ ಚಾಲಕರು ಖಾಕಿ ಅಂಗಿ ಹಾಕದೇ ಇದ್ದ, 8-10 ಮಕ್ಕಳನ್ನು ಕೂಡ್ರಿಸಿಕೊಂಡು ಹೋಗುವ ಅನೇಕ ಪ್ರಕರಣಗಳು ಕಂಡುಬಂದವು.

ಚನ್ನಮ್ಮ ವೃತ್ತ ಸೇರಿ ಕೆಲವು ಕಡೆ ರ್ಪಾಂಗ್​ಗೆ ಅನುಮತಿ ಇಲ್ಲದಿರುವಲ್ಲೇ ಕಾರು, ಆಟೋಗಳನ್ನು ನಿಲ್ಲಿಸಲಾಗುತ್ತಿದೆ. ಎಲ್ಲಿ ಬೇಕಾದರೂ ಆಟೋರಿಕ್ಷಾದ ವೇಗ ತಗ್ಗಿಸಿ ಬರುತ್ತೀರಾ ಎಂದು ಪ್ರಯಾಣಿಕರನ್ನು ಕೇಳುವುದು, ಸ್ವಲ್ಪ ಪಕ್ಕಕ್ಕೆ ಸರಿದು ನಿಲ್ಲಿಸಿ ಚೌಕಾಸಿ ಮಾಡಿ ಕರೆದೊಯ್ಯುವುದು ಮಾಮೂಲಾಗಿದೆ. ಇದನ್ನೆಲ್ಲ ಯಾರೂ ಪ್ರಶ್ನಿಸುವುದಿಲ್ಲ.

ಸಿಗ್ನಲ್ ನೋಡಿ ನಿಲ್ಲುವ ವಾಹನದವರಿಗೂ ನಿರ್ದಿಷ್ಟ ಗಡಿ ಇಲ್ಲ; ಇದ್ದರೂ ಪಾಲನೆ ಇಲ್ಲ. ಹೀಗಾಗಿ ವೃದ್ಧರು, ಶಾಲಾ ಮಕ್ಕಳು, ಮಹಿಳೆಯರು ಸೇರಿ ಪಾದಚಾರಿಗಳು ಸದಾ ಅಪಾಯದ ಮಧ್ಯೆಯೇ ಸಂಚರಿಸಬೇಕಿದೆ.

ವೀಲಿಂಗ್​ಗೆ ಕಡಿವಾಣ ಹಾಕಿ

ಶಿರೂರು ಪಾರ್ಕ್ ಟೆಂಡರ್ ಶ್ಯೂರ್ ರಸ್ತೆ ಹುಬ್ಬಳ್ಳಿ ಮಟ್ಟಿಗೆ ವ್ಯವಸ್ಥಿತವಾದುದು. ಸರಾಗ ಸಂಚಾರಕ್ಕಾಗಿ ಮಾಡಿರುವ ರಸ್ತೆಯನ್ನೇ ಕೆಲ ಹೊಂತಕಾರಿ ಯುವಕರು ದ್ವಿಚಕ್ರ ವಾಹನ ಕ್ರೀಡಾಂಗಣ ಎಂದುಕೊಂಡಿದ್ದಾರೆ. ಜನಸಾಮಾನ್ಯರು ಓಡಾಡುತ್ತಿರುವಾಗಲೇ ಏಕಾಏಕಿ ಉಮೇದಿ ಬಂದವರಂತೆ ಬೈಕ್​ನ ಮುಂದಿನ ಗಾಲಿ ಮೇಲಕ್ಕೆಬ್ಬಿಸಿ (ವೀಲಿಂಗ್) ಮಾಡುತ್ತಾರೆ. ಅವರಿಗೇನೊ ಆನಂದವಾಗಬಹುದು; ಇತರರಿಗೆ ಆತಂಕವಾಗುತ್ತದೆ. ಇಂಥ ವೀಲಿಂಗ್ ಪಿಡುಗಿಗೆ ಪೊಲೀಸರು ಸರಿಯಾದ ಕಡಿವಾಣ ಹಾಕದೇ ಇದ್ದರೆ ಅಮಾಯಕರ ಜೀವಕ್ಕೆ ಸಂಚಕಾರ ಬಂದೀತು.

ನಿಯಂತ್ರಣ ಕೊಠಡಿ ಇದ್ದರೂ….

ಎಸಿಪಿ (ಉತ್ತರ) ಕಚೇರಿಯಲ್ಲಿ ಸಿಸಿ ಕ್ಯಾಮರಾ ನಿಯಂತ್ರಣ ಕೊಠಡಿ ಇದೆ. ವಿವಿಧ ವೃತ್ತಗಳಲ್ಲಿಯ ಒಟ್ಟಾರೆ ದೃಶ್ಯವನ್ನು ಅಲ್ಲಿ ಪರದೆ ಮೇಲೆ ನೋಡುವ ವ್ಯವಸ್ಥೆ ಇದೆ. ಸಿಸಿ ಕ್ಯಾಮರಾಗಳ ನಿರ್ವಹಣೆಯನ್ನು ಸರಿಯಾಗಿ ಮಾಡಿದರೆ, ನಿಯಮ ಮೀರುವ ವಾಹನಗಳ ನೋಂದಣಿ ಸಂಖ್ಯೆಯನ್ನು ಕುಳಿತಲ್ಲೇ ನೋಡಿ, ಸಾಕ್ಷಿ ಸಮೇತ ಕ್ರಮ ಕೈಗೊಳ್ಳಬಹುದು. ಈ ಕ್ರಮ ಜಾರಿಯಲ್ಲಿದ್ದರೂ ಅತ್ಯಂತ ಸೀಮಿತವಾಗಿದೆ.

ಧರಿಸದವರ ವಾದ ಇದು

ಬೈಕ್ ನಿಲ್ಲಿಸಿದಾಗ ಹೆಲ್ಮೆಟ್​ಗೆ ಬೀಗ ಹಾಕಿಯೇ ಇಡಬೇಕಾಗುತ್ತದೆ. ಇದು ಸ್ವಲ್ಪ ಕಿರಿಕಿರಿ. ಹೆಲ್ಮೆಟ್ ಧರಿಸಿದರೆ ಬೇಗ ತಲೆ ಬೋಳಾಗಬಹುದು. ಬೇಸಿಗೆಯಲ್ಲಿ ಧಾರಣೆ ದುಸ್ಸಾಧ್ಯ. ಸಿಟಿಯಲ್ಲಿ ವೇಗದ ಸಂಚಾರ ಸಾಧ್ಯವಿಲ್ಲದ್ದರಿಂದ ಹೆಲ್ಮೆಟ್ ಅಗತ್ಯವಿಲ್ಲ ಎಂದು ಅಶೋಕ ಬನ್ನಿಕೊಪ್ಪ ಎಂಬ ಸವಾರ ಪತ್ರಿಕೆಗೆ ಪ್ರತಿಕ್ರಿಯಿಸಿದರು. ಪೊಲೀಸರು ತಡೆದಾಗ ದಂಡ ಕಟ್ಟುವ ಬದಲು ಹೆಲ್ಮೆಟ್ ಹಾಕಿಕೊಳ್ಳುವುದು ಒಳ್ಳೆಯದು ಎಂದು ತಾತ್ವಿಕವಾಗಿ ಒಪ್ಪಿಕೊಂಡರು.

ದಂಡ ಬಿಡಿ, ಹೆಲ್ಮೆಟ್ ಕೊಡಿ

ಅವಳಿ ನಗರದಲ್ಲಿ ಸಂಚಾರ ಉಲ್ಲಂಘನೆಗಾಗಿ ವಿಧಿಸುವ ದಂಡ ಮೊದಲು ಒಂದೂವರೆ ಲಕ್ಷ ರೂ. ಆಸುಪಾಸು ಇದ್ದಿದ್ದು ಈಗ 2 ಲಕ್ಷ ಮೀರಿದೆ. ಪೊಲೀಸರ ಕೈಗೆ ಸಿಕ್ಕ ಬೈಕ್ ಸವಾರರು ಮತ್ತು ಲಾರಿಯವರಿಂದ ಅಧಿಕೃತವಾಗಿ ವಸೂಲಾಗುವ ಮೊತ್ತವಿದು. ಹೆಲ್ಮೆಟ್ ಇಲ್ಲದ ಎಲ್ಲರನ್ನೂ ಹಿಡಿದರೆ ದಿನಕ್ಕೆ 10 ಲಕ್ಷ ರೂ. ಮೀರಬಹುದು!

ಹು-ಧಾದಲ್ಲಿ ಜನರ ಮನಸ್ಥಿತಿ ನೋಡಿದರೆ, ದಂಡಕ್ಕೆ ಸವಾರರು ಹೆದರಿದಂತೆ ಕಂಡುಬರುತ್ತಿಲ್ಲ. ಇದರ ಬದಲು, ಹೆಲ್ಮೆಟ್ ಇಲ್ಲದವರನ್ನು ತಡೆದು, ಯೋಗ್ಯ ದರಕ್ಕೆ ಸ್ಥಳದಲ್ಲೇ ಹೆಲ್ಮೆಟ್ ಕೊಡುವ, ವಿಮೆ ಇಲ್ಲದವರಿಗೆ ಅಲ್ಲೇ ವಿಮೆ, ಲೈಸೆನ್ಸ್ ಇಲ್ಲದವರಿಂದ ಹಣ ಪಡೆದು ಅಲ್ಲೇ ಮಾಡಿಕೊಡುವಂಥ ಕ್ರಾಂತಿಕಾರಿ ಕ್ರಮಕ್ಕೆ ಪೊಲೀಸರು ಮುಂದಾದರೆ, ಕ್ರಮೇಣ ವ್ಯವಸ್ಥೆ ಸರಿಹೋಗಬಹುದು.

ಪೊಲೀಸರೂ ಧರಿಸಲಿ

ಪೊಲೀಸರು ಸಹ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವುದು, ಹೆಲ್ಮೆಟ್ ಹಾಕಿದರೂ ಬೆಲ್ಟ್ ಹಾಕದಿರುವುದು ರಿಯಾಲಿಟಿ ಚೆಕ್ ವೇಳೆ ಕಂಡುಬಂತು.

ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಸೀಟ್ ಬೆಲ್ಟ್ ಧರಿಸದೇ ಕಾರಿನಲ್ಲಿ ತೆರಳುವುದಿದೆ. ಈ ವರ್ಗದವರು ಮೊದಲು ಕಾನೂನು ಪಾಲಿಸಿ ಮಾದರಿಯಾಗಬೇಕಿದೆ.

ಹೆಲ್ಮೆಟ್ ಮಾತ್ರವಲ್ಲ, ಸಂಚಾರ ನಿಯಮದ ಯಾವುದೇ ಉಲ್ಲಂಘನೆಯನ್ನೂ ತಡೆಯಲು ಕ್ರಮ ವಹಿಸಲಾಗುತ್ತದೆ. ಸಂಚಾರ ವೃತ್ತದಲ್ಲಿ ನಿಲ್ಲುವ ಪೊಲೀಸ್ ಒಬ್ಬರೇ ಇದನ್ನು ಮಾಡುವುದು ಕಷ್ಟ. ಪ್ರತಿ ವೃತ್ತದಲ್ಲೂ ಐದಾರು ರಸ್ತೆಗಳು ಸಂಧಿಸುವುದರಿಂದ ವಾಹನಗಳ ಮೇಲೆ ನಿಗಾ ಇಡುವುದು ಅವರ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಜನರಲ್ಲಿ ಜಾಗೃತಿ ಮೂಡಿಸಲು ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ನಿಯಮಗಳ ಪಾಲನೆ ತಮ್ಮ ಒಳಿತಿಗಾಗಿ ಇದೆ ಎಂದು ಜನರೂ ಅರ್ಥ ಮಾಡಿಕೊಳ್ಳಬೇಕು. ಸಿಸಿ ಕ್ಯಾಮರಾ ಜಾಲವನ್ನು ಬಲಪಡಿಸಲಾಗುತ್ತಿದೆ.

ರಿಯಾಲಿಟಿ ಚೆಕ್​ನಲ್ಲಿ ವಿವಿಧ ರಸ್ತೆ ವೃತ್ತಗಳಲ್ಲಿ ತಲಾ 200 ಬೈಕ್​ಗಳನ್ನು ಎಣಿಸಿದಾಗ ಕಂಡುಬಂದ ಮಾಹಿತಿ ಇಲ್ಲಿದೆ.

ವೃತ್ತ ಹೆಲ್ಮೆಟ್ ರಹಿತ 3 ಸವಾರರು ತಪ್ಪು ತಿರುವು ಸಿಗ್ನಲ್ ಜಂಪ್ ಏಕಮುಖ ರಸ್ತೆಯಲ್ಲಿ ನುಗ್ಗುವಿಕೆ

ಕಿತ್ತೂರು ಚನ್ನಮ್ಮ 22 — 2 4 2

ಹೊಸೂರು 82- 3 -18- 3 -6

ಕಿಮ್್ಸ ಗೇಟ್ 68 -2 -2 -6 -2

ವಿದ್ಯಾನಗರ 64 -1 — 18 -16

ಹೊಸೂರು

ಮಾರುತಿ ಗುಡಿ ಬಳಿ 78- 1 -6 -16 -12

ಸ್ಟೇಶನ್ ರಸ್ತೆ 29 — 1 -16 -1

ಜ್ಯುಬಿಲಿ ವೃತ್ತ 54- 1 -2 -9 -6

- Advertisement -

Stay connected

278,627FansLike
573FollowersFollow
610,000SubscribersSubscribe

ವಿಡಿಯೋ ನ್ಯೂಸ್

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬಳಸಿದ ಪರಿಸರಸ್ನೇಹಿ ಕಾರು...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...