More

  ಯಶಸ್ಸು ಸಾಧನೆಗೆ ಜೀವನದಲ್ಲಿ ಕಷ್ಟ ಪಡಿ

  ಯಾದಗಿರಿ: ಜೀವನದಲ್ಲಿ ಕಷ್ಟ ಪಟ್ಟಾಗಲೇ ಮನುಷ್ಯ ತಾನು ಇಟ್ಟುಕೊಂಡ ಗುರು ತಲುಪಲು ಸಾಧ್ಯವಾಗುತ್ತದೆ. ಸ್ವಾಭಿಮಾನದಿಂದ ಬದುಕಬೇಕಾದರೆ, ಕಠಿಣ ಪರಿಶ್ರಮ ಪಡುವುದು ಅನಿವಾರ್ಯ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಪ್ರಭು ದೊರೆ ಸಲಹೆ ನೀಡಿದರು.

  ಗುರುವಾರ ನಗರದ ಸ್ತ್ರೀಶಕ್ತಿ ಭವನದಲ್ಲಿ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಆಯೋಜಿಸಿದ್ದ ಒಂದು ದಿನದ ಉದ್ಯಮಶೀಲತಾಭಿವೃದ್ಧಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉದ್ಯಮ ಎಂಬುದು ದಿಢೀರನೇ ಸ್ಥಾಪನೆ ಮಾಡುವುದಲ್ಲ. ಬಂಡವಾಳ, ಆಥರ್ಿಕ ಚಟುವಟಿಕೆ, ಮಾರುಕಟ್ಟೆ ವ್ಯವಸ್ಥೆ ಹೀಗೆ ನಾನಾ ದೃಷ್ಠಿಕೋನ ಒಳಗೊಂಡಿರುತ್ತದೆ ಎಂದರು.

  ಉದ್ಯಮ ಆರಂಭಿಸಿ, ಅದರಲ್ಲಿ ಯಶಸ್ವಿಯಾಗುತ್ತೇನೆ ಎಂಬ ದೃಢವಾದ ಸಂಕಲ್ಪ ಮೊದಲು ಹೊಂದಬೇಕು. ಅದಕ್ಕಾಗಿ ಒಂದು ವರ್ಷಗಳ ಕಾಲ ಪೂರ್ವಭಾವಿ ಕೆಲಸ ಮಾಡಬೇಕು. ಇಷ್ಟೆಲ್ಲ ಮಾಡಿದ ನಂತರ ಸಕರ್ಾರದಿಂದ ಇರುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು. ಇವೆಲ್ಲ ಉದ್ಯಮಿಗೆ ಇರಬೇಕಾದ ಲಕ್ಷಣಗಳು ಎಂದು ವಿವರಿಸಿದರು.

  ಸಿಡಾಕ್ ಉಪನ್ಯಾಸಕ ಸೈಯದ ಅಶ್ಫಾಖ್ ಉದ್ಯಮ ಆರಂಭಿಸುವ ಪೂರ್ವ ಕ್ರಿಯಾಯೋಜನೆ ಅನುಷ್ಠಾನಗೊಳಿಸಬೇಕು, ನೀವು ಮೊದಲಿಗೆ ಸಣ್ಣ ಪ್ರಮಾಣದ ಉದ್ಯಮದ ಪ್ರಾರಂಭಿಸಿ ಹಂತ ಹಂತವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಿದಾಗ ಮಾತ್ರ ಯಶಸ್ವಿ ಉದ್ಯಮಶೀಲರಾಗಲು ಸಾಧ್ಯ ಎಂದು ತಿಳಿಸಿದರು.

  ಲೀಡ್ ಬ್ಯಾಂಕ್ ಸಹಾಯಕ ಮುಖ್ಯ ವ್ಯವಸ್ಥಾಪಕ ಲೋಕೇಶ, ಉದ್ಯಮಶೀಲರಾಗಲು ಕೌಶಲ ಹೊಂದುವುದು ಅತಿ ಅವಶ್ಯಕ ಮತ್ತು ಹಣಕಾಸು ಸೌಲಭ್ಯಗಳು, ತರಬೇತಿ ಅವಲೋಕನ ಮಾಡಬೇಕು. ಅವಕಾಶಗಳ ಸದ್ಬಳಕೆ ಮಾಡಬೇಕು ಎಂದು ಬ್ಯಾಂಕಿನ ಸಾಲ, ಸೌಲಭ್ಯಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಕೈಗಾರಿಕಾ ಅಧಿಕಾರಿ ಶಂಕರರೆಡ್ಡಿ, ಸಂಗಪ್ಪ, ಅನುರಾಧ ಫಿರಂಗಿ, ಶಾಂತಯ್ಯ ಪೂಜಾರಿ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts