ಯಲಹಂಕ ಕೆರೆಯಲ್ಲಿ ದೋಣಿ ವಿಹಾರ ಆರಂಭ: 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ

ಯಲಹಂಕ: ಸುತ್ತಲೂ ಹಸಿರು. ಮನಸ್ಸಿಗೆ ಮದ ನೀಡುವ ತಂಗಾಳಿ. ಮೈ ಮನಕ್ಕೆ ಇಂಪು ನೀಡುವ ಲಘು ಸಂಗೀತ. ಝುಗಮಗಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಗಳು. ವಾಟರ್ ಏರಿಯೇಟರ್ ಜೆಟ್ ಮೂಲಕ ಚಿಮ್ಮುವ ಬಣ್ಣಬಣ್ಣದ ಕಾರಂಜಿಯ ಮನಮೋಹಕ ದೃಶ್ಯವಿರುವ ಯಲಹಂಕ ಕೆರೆಯಲ್ಲಿ ದೋಣಿ ವಿಹಾರ ಆರಂಭವಾಗಿದೆ.

ದೋಣಿ ವಿಹಾರಕ್ಕೆ ಚಾಲನೆ ನೀಡಿದ ಶಾಸಕ ವಿಶ್ವನಾಥ್ ಮಾತನಾಡಿ, ಕೆಲ ವರ್ಷಗಳ ಹಿಂದೆ ಕೆರೆ ಕಾರ್ಖಾನೆಗಳ ತ್ಯಾಜ್ಯ ತುಂಬಿ ಕೊಳಚೆಮಯವಾಗಿತ್ತು. ಈಗ 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕೆರೆಯ ಸುತ್ತಮುತ್ತ ಇರುವ ಕೊಳವೆಬಾವಿಗಳಲ್ಲಿ ನೀರು ತುಂಬಿದ್ದು ಸಾರ್ವಜನಿಕರಿಗೆ ನೀರಿನ ಸಮಸ್ಯೆಇಲ್ಲದಂತಾಗಿದೆ ಎಂದರು.

ಏನೇನು ಬದಲಾವಣೆ?: 300 ಎಕರೆ ವಿಸ್ತೀರ್ಣವುಳ್ಳ ಕೆರೆಯ ಸುತ್ತ 6 ಕಿ.ಮೀ. ನಡಿಗೆ ಪಥ, ಸೈಕಲ್ ಪಥ, ಸುಂದರ ಉದ್ಯಾನ ನಿರ್ವಿು ಸಲಾಗಿದೆ. ವಾಯುವಿಹಾರಕ್ಕೆ ಬರುವವರಿಗೆ ವಿಶ್ರಾಂತಿ ಗೃಹ, ವಿಶ್ರಾಂತಿ ಆಸನಗಳು, ಇ ಶೌಚಗೃಹಗಳು, ಎಲ್​ಇಡಿ ದೀಪ, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ತೆರೆದ ಜಿಮ್ಳನ್ನು ತೆರೆಯಲಾಗಿದೆ.

ಜಲಸಿರಿ ಸಂಘಟನೆ ಕಾರ್ಯಾಧ್ಯಕ್ಷ ಮು. ಕೃಷ್ಣಮೂರ್ತಿ, ಅಧ್ಯಕ್ಷ ಅ.ಬ. ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಉದಯಕುಮಾರ್, ಬಿಬಿಎಂಪಿ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ, ಸತೀಶ್, ಪದ್ಮಾವತಿ ಅಮರ್​ನಾಥ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *