ಯರಗಟ್ಟಿ: ಪೈಪ್ ಕಾಮಗಾರಿಗೆ ಭೂಮಿ ಪೂಜೆ

ಯರಗಟ್ಟಿ: ಸಮೀಪದ ಶಿವಾಪುರ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯಲ್ಲಿ ನಂದಿ ರಸ್ತೆಯಿಂದ ಶಿವಾಪುರದ ವರೆಗೆ ಜಿಪಂನ 10 ಲಕ್ಷ ರೂ.ಗಳ ಅನುದಾನದಲ್ಲಿ ಪೈಪ್‌ಲೈನ್ ಕಾಮಗಾರಿಗೆ ಶಾಸಕ ಆನಂದ ಮಾಮನಿ ಭಾನುವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಿರಲಿ ಎಂಬ ಕಾರಣಕ್ಕೆ ಈ ಹೊಸ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು. ಜಿಪಂ ಸದಸ್ಯೆ ವಿದ್ಯಾರಾಣಿ ಸೊನ್ನದ, ಎಪಿಎಂಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ, ಮಹಾಂತೇಶ ತೋಟಗಿ, ಇಮಾಮಸಾಬ್ ಮುಗಟಖಾನ, ಮಹಾದೇವ ಕಲಾಲಕೊಪ್ಪ, ಮುತ್ತಪ್ಪ ಚಂದರಗಿ, ಈರಣ್ಣ ತೋಟಗಿ ಇತರರು ಇದ್ದರು.