ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮ್ಮೆ: ಸಿಎಂ ಇಬ್ರಾಹಿಂ

CM Ibrahim

ಕಲಬುರಗಿ: ವಕ್ಫ್ ಕುರಿತು ರಾಜ್ಯದಲ್ಲಿ ಯಾವುದೇ ವಿಶೇಷ ಪ್ರಕ್ರಿಯೆ ನಡೆದಿಲ್ಲ. ನಿರಂತರ ಪ್ರಕ್ರಿಯೆ ನಡೆದಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗಲೂ ೨೪೫ ಜನರಿಗೆ ನೋಟಿಸ್ ನೀಡಲಾಗಿತ್ತು ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ್ ಆಸ್ತಿ ಎಂದಾಕ್ಷಣ ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ ಗಾಬರಿಗೆ ಬಿದ್ದಿದ್ದಾರೆ. ಸಿದ್ದರಾಮಯ್ಯ ಒಳ್ಳೆ ಆಡಳಿತಗಾರನಾಗಿದ್ದು, ಹೆದರುವ ಅವಶ್ಯವಿಲ್ಲ. ಮುಜರಾಯಿ ಸ್ವತ್ತು, ವಕ್ಫ್ ಸ್ವತ್ತು ಯಾವುದೇ ಇರಲಿ. ಅದನ್ನು ರಾಜ್ಯ ಸರ್ಕಾರ ಬಗೆಹರಿಸಬೇಕು. ನಾನು ಮತ್ತು ಕೋಡಿಹಳ್ಳಿ ಚಂದ್ರಶೇಖರ ಕೂಡಿ ವಿವಾದ ಇರುವ ಜಾಗಕ್ಕೆ ಪ್ರವಾಸ ಮಾಡುತ್ತಿz್ದೆÃವೆ ಎಂದು ಹೇಳಿದರು.
ಯಾರು ಜಮೀನಿನಲ್ಲಿ ದುಡಿಯುತ್ತಾರೋ ಆ ಭೂಮಿ ಅವನದ್ದೆ ಅಂತ ಇಸ್ಲಾಂ ಸ್ಪಷ್ಟವಾಗಿ ಹೇಳುತ್ತೆ. ಆದರೆ ಬಿಜೆಪಿ ವಿನಾಕಾರಣ ವಿವಾದ ಮಾಡುತ್ತಿದೆ. ಹಿಂದೆಯೂ ಬಿಜೆಪಿಯವರಿಗೆ ಯಾವುದೇ ವಿಷಯವಿರದ್ದಕ್ಕೆ ಹಿಜಾಬ್, ರಾಮ ಮಂದಿರ ತಂದಿದ್ದರು. ಅದು ಮುಗಿದಿದ್ದು, ಇದೀಗ ವಕ್ಫ್ ವಿಷಯ ತಂದಿದ್ದಾರೆ ಎಂದು ಹೇಳಿದರು.
ರೈತರ ಜಮೀನು ಒತ್ತುವರಿ ಮಾಡಿದ್ದಕ್ಕೆ ಮೂರು ಪಟ್ಟು ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸಿದ್ದರಾಮಯ್ಯಗೆ ಸೈಟು ಕೊಟ್ಟಿz್ದÉ ಬಿಜೆಪಿಯವರು. ಮುಡಾ ಹಗರಣ ಅಲ್ಲ ಇದೊಂದು ಪ್ರಕರಣ ಅಷ್ಟೆ. ಸಿಎಂ ಪತ್ನಿಯ ಜಮೀನು ಇಲ್ಲದಿದ್ದರೇ ಹೇಗೆ ಸೈಟ್ ಕೊಟ್ಟರು. ಬಿಜೆಪಿ ಸರ್ಕಾರವೇ ಸಿಎಂ ಕುಟುಂಬಕ್ಕೆ ೧೪ ಸೈಟ್ ಕೊಟ್ಟಿದ್ದಲ್ಲವೇ ಎಂದು ಪ್ರಶ್ನಿಸಿದರು.
ಉಪ ಚುನಾವಣೆಗೆ ಪ್ರಚಾರಕ್ಕೆ ಹೋಗುತ್ತಿಲ್ಲ. ಡೈವರ್ಸ್ ಆದ ಹೆಂಡತಿಯAತೆ ಆಗಿz್ದÉÃನೆ. ಚನ್ನಪಟ್ಟಣದಲ್ಲಿ ಒಬ್ಬರು ಗೊಳೋ ಅಂತ ಅಳುತ್ತಿದ್ದಾರೆ. ಯಾಕೆ ಅಳಬೇಕು. ಯಾಕೆ ಎಲೆಕ್ಷನ್ ನಿಲ್ಲಬೇಕು ಎಂದು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿಗೆ ವ್ಯಂಗ್ಯವಾಡಿದರು.
ಯತ್ನಾಳ ವಿರುದ್ದ ಮಾನನಷ್ಟ ಮೊಕದ್ದಮೆ: ವಕ್ಫ್ ಭೂಮಿ ಕಬಳಿಸಿz್ದÉÃನೆ ಎಂದು ಶಾಸಕ ಯತ್ನಾಳ ಆರೋಪಿಸಿದ್ದು, ಎಲ್ಲಿ ಕಬಳಿಸಿz್ದÉÃನೆ ಎಂದು ತಿಳಿಸಬೇಕು. ಇಲ್ಲದಿದ್ದರೆ ಬೇಷರತ್ ಕ್ಷಮೆ ಕೇಳಬೇಕು. ಜಮೀನು ದಾನ ನೀಡಿz್ದÉÃನೆ ಹೊರತು, ಕಬಳಿಸಿಲ್ಲ. ಯತ್ನಾಳಗೆ ಶುಗರ್ ಫ್ಯಾಕ್ಟರಿ ಎಲ್ಲಿಂದ ಬಂತು? ತಿಳಿಸಲಿ. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮ್ಮೆ ಹೂಡುತ್ತೇನೆ ಎಂದು ಸಿಎಂ ಇಬ್ರಾಹಿಂ ಹೇಳಿದರು. ಬಿಜೆಪಿಯಲ್ಲಿ ಯತ್ನಾಳ, ವಿಜಯೇಂದ್ರ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಈ ಮಧ್ಯೆ ಸಾಬರನ್ನು ತೆಗೆದುಕೊಂಡು ಬರುತ್ತಿದ್ದಾರೆ. ಸಚಿವ ಜಮೀರ್ ಅಹ್ಮದ್‌ಗೆ ಅನುಭವದ ಕೊರತೆ ಇದೆ. ಹೀಗಾಗಿ ಏನೋ ಮಾಡಲು ಹೋಗಿ, ಒದ್ದಾಡುತ್ತಿದ್ದಾರೆ ಎಂದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…