ಚಿತ್ರದುರ್ಗ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರಾಜ್ಯದ ಗಮನ ಸೆಳೆದ ಪ್ರಬುದ್ಧ ರಾಜಕಾರಣಿ. ಅವರು ಸರಿಯಾಗಿ ಮಾತನಾಡುತ್ತಿದ್ದಾರೆ. ನೋಟಿಸ್ ನೀಡಿ ಉಚ್ಚಾಟಿಸಿದರೆ, ಬಿಜೆಪಿ ದುರ್ಬಲ ಆಗಬಹುದು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
![blank](https://www.vijayavani.net/wp-content/plugins/wp-fastest-cache-premium/pro/images/blank.gif)
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕುರಿತು ಇನ್ನೊಮ್ಮೆ ಬಿಜೆಪಿಯವರು ಯೋಚಿಸಲಿ. ಅವರವರ ಭಿನ್ನಮತದಿಂದ ಲಾಭ ಪಡೆಯುವ ರಾಜಕಾರಣ ಕಾಂಗ್ರೆಸ್ ಎಂದಿಗೂ ಮಾಡುವುದಿಲ್ಲ. ಅನ್ಯ ಪಕ್ಷದವರ ಕಿತ್ತಾಟಕ್ಕೆ ಕೈ ನಾಯಕರು ತಲೆ ಹಾಕುವುದಿಲ್ಲ. ಸಂಪುಟ ವಿಸ್ತರಣೆ ಹೈಕಮಾಂಡ್, ಸಿಎಂಗೆ ಬಿಟ್ಟ ವಿಚಾರ ಎಂದರು.