Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಮ್ಯಾಥ್ಸ್ 2.0

Sunday, 08.07.2018, 3:02 AM       No Comments

ಆಧುನಿಕ ಯುಗದ ನಿರ್ವತೃಗಳಾದ ಗಣಿತ ಮತ್ತು ತಂತ್ರಜ್ಞಾನ ನಮ್ಮ ಜೀವನಕ್ರಮವನ್ನು ಸುಗಮಗೊಳಿಸುತ್ತಿವೆ. ಜತೆಗೆ ಅನಂತ ಸಾಧ್ಯತೆಗಳನ್ನು ತೆರೆದಿಡುತ್ತಿವೆ. ಮುಂದೊಂದು ದಿನ ಎಟಿಎಂಗಳೇ ನಿಮ್ಮ ಬಳಿ ಬಂದು ಹಣವನ್ನು ನೀಡುವಾಗಲೋ, ಜಿಪಿಎಸ್ ಸಹಾಯದಿಂದ ಡ್ರೋನ್​ಗಳು ನಿಮ್ಮನ್ನು ನಿರೀಕ್ಷಿತ ಸ್ಥಳಕ್ಕೆ ಕರೆದೊಯ್ಯುವಾಗಲೋ ಅಥವಾ ದೂರದಲ್ಲೆಲ್ಲೋ ಇರುವ ಬಂಧುಗಳು, ಸ್ನೇಹಿತರು ಖುದ್ದಾಗಿ ನಿಮ್ಮೆದುರೇ ನಿಂತಂತೆ ಮಾತನಾಡುವಾಗಲೋ ಆ ತಂತ್ರಜ್ಞಾನಕ್ಕೆ ನಾವು ಮಾರುಹೋಗಬಹುದು. ಗಣಿತ-ತಂತ್ರಜ್ಞಾನದ ಅಚ್ಚರಿ ಕಂಡು ಕೊಂಡಾಡಬಹುದು.

| ಪ್ರವೀಣ್ ಎಸ್. ಕೋಲಾರ

ಗಣಿತ ಸಂವಾಹಕರು

ಇಂದು ಜುಲೈ 8, ಗಣಿತ 2.0 ದಿನ. ಗಣಿತವನ್ನು ನೆನೆಯಲು ಮತ್ತೊಂದು ಕಾರಣ. ಶಿಕ್ಷಕರ ಬಲವಂತಕ್ಕೋ ಅಥವಾ ಮನೆಯವರ ಒತ್ತಡಕ್ಕೋ ಮಣಿದು ಕೆಲವು ಸೂತ್ರ/ಲೆಕ್ಕಗಳನ್ನು ಬಾಯಿಪಾಠ ಮಾಡಿ, ಉತ್ತರಗಳನ್ನು ಕಂಠಸ್ಥ ಮಾಡಿ ಮೂವತೆôದು ಅಂಕಗಳನ್ನು ಪೇರಿಸುವಷ್ಟರಲ್ಲಿ ನಮ್ಮ ವಿದ್ಯಾರ್ಥಿಗಳು ಸುಸ್ತೋ ಸುಸ್ತು!

ಯಾವುದೇ ಉಪಯುಕ್ತತೆ ಇರದೆ ಕೇವಲ ಉರು ಹೊಡೆದು ಮಾತ್ರವೇ ಅಂಕ ಗಳಿಸಲು ಸಾಧ್ಯವೆಂದು ಹಣೆಪಟ್ಟಿ ಕಟ್ಟಿಕೊಂಡ ಗಣಿತ, ಇಂದು ಬೃಹದಾಕಾರವಾಗಿ ಬೆಳೆದಿರುವುದು ನಮ್ಮ ದೇಶದಲ್ಲಿ ಅನೇಕರಿಗೆ ಗೊತ್ತಿಲ್ಲ. ಅತ್ಯಾಧುನಿಕ ಕಾರಿನಲ್ಲಿ ಕುಳಿತು ಉತ್ತಮ ಗುಣಮಟ್ಟದ ಮೈಕೆಲ್ ಜಾಕ್ಸನ್ ಅಥವಾ ಹರಿಕೃಷ್ಣರ ಸಂಗೀತವನ್ನು ಆಲಿಸುವಾಗಲೋ, ಕಲಿಯುವವರ ಕಾಮಧೇನುವಾದ ಗೂಗಲಿನಲ್ಲಿ ಮಾಹಿತಿ ಹುಡುಕುವಾಗಲೋ, ಕಂಪ್ಯೂಟರಿನಿಂದ ಡಿವಿಡಿ ಅಥವಾ 64 ಜಿಬಿ ಪೆನ್ ಡ್ರೖೆವಿಗೆ ಮಾಹಿತಿ ರವಾನಿಸುವಾಗಲೋ ಅಥವಾ ಡಿಜಿಟಲ್ ಲೈಬ್ರರಿಯಲ್ಲಿ ನಿಮ್ಮ ನೆಚ್ಚಿನ ಪುಸ್ತಕ ಹುಡುಕುವಾಗಲೋ ಅಥವಾ ಓರಿಯೋ ನಂತರದ ಆಂಡ್ರಾಯಿಡ್​ನ ಹೊಸ ಆವೃತ್ತಿಗಾಗಿ ಕಾಯುವಾಗಲೋ ಈ ತಂತ್ರಜ್ಞಾನವು ಬೆರಗು ಹುಟ್ಟಿಸುತ್ತದೆ. ಆದರೆ ಅದರ ಹಿಂದೆ ಕೆಲಸ ಮಾಡುವ ಗಣಿತವು ಯಾರಿಗೆ ತಾನೆ ಕಾಣಿಸುತ್ತದೆ?

1956ರಲ್ಲಿ ಐಬಿಎಂನ ಡೇಟಾ ಪೊ›ಸೆಸಿಂಗ್ ವಿಭಾಗವು 5Mಆ ಹಾರ್ಡ್ ಡ್ರೖೆವ್​ನ ಗಾತ್ರವನ್ನು ನೋಡಿ. ಈಗ ನಾವು 64ಎಆ, 128ಎಆ ಪೆನ್ ಡ್ರೖೆವ್ ಅಥವಾ ಮೊಬೈಲನ್ನು ಕಿಸೆಗೇರಿಸುವಾಗ ಅದರ ಹಿಂದಿರುವ ಗಣಿತದ ಮಹತ್ವ ನಮಗರಿವಾಗುವುದು ಬಹಳ ಮುಖ್ಯ.

1ಎಆ=210Mಆ=1024Mಆ

ಅನೇಕ ವಿದ್ಯಾರ್ಥಿಗಳನ್ನು ಧೃತಿಗೆಡಿಸುವ ಈ ದೈತ್ಯ ವಿಷಯ ಜನಮಾನಸಕ್ಕೆ ಹತ್ತಿರವಾದದ್ದು ಹಾಡುಗಳ ಮೂಲಕ! ಅನಲಾಗ್ ಯುಗದಿಂದ ಡಿಜಿಟಲ್ ಯುಗಕ್ಕೆ ತಂತ್ರಜ್ಞಾನವು ಪದಾರ್ಪಣೆ ಮಾಡುತ್ತಿದ್ದ ಸಂಕ್ರಮಣ ಕಾಲ. ಬೋನಿ ಎಂ, ಅಬಾ ಹಾಡುಗಳನ್ನು ಈ ಡಿಜಿಟಲ್ ಆವೃತ್ತಿಯಲ್ಲಿ ಜನರು ಕೇಳಿ ಅದಕ್ಕೆ ಮಾರುಹೋಗಿದ್ದರು. ನಂತರದ್ದು ಚಲನಚಿತ್ರ ಮತ್ತು ದೂರದರ್ಶನಗಳ ಯಶೋಗಾಥೆ.

ಏನಿದು ಡಿಜಿಟಲೈಸೇಷನ್?

ಡಿಜಿಟಲ್ ನ ಹಿಂದಿನ ಆವೃತ್ತಿ ಅನಲಾಗ್. ಈ ಅನಲಾಗ್​ನ್ನು ಅರ್ಥ ಮಾಡಿಕೊಳ್ಳಲು ಹಿಂದಿನ ಕಾಲದ ಟೆಲಿಗ್ರಾಫ್ ಕಾರ್ಯವಿಧಾನವನ್ನು ನೆನಪಿಸಿಕೊಳ್ಳಿ. ಅದು ಒಂದೇ ಬಗೆಯ ಮಾಹಿತಿ. ಆದರೆ, ತಂತ್ರಜ್ಞಾನ ಬದಲಾದಂತೆ, ಹಲವಾರು ಬಗೆಯ ಮಾಹಿತಿ(ಆಬ್ಜೆಕ್ಟ್, ಅಕ್ಷರ, ಚಿತ್ರ, ಧ್ವನಿ) ಆವಿಷ್ಕಾರವಾಗಿದೆ. ಇವೆಲ್ಲವನ್ನೂ ಒಂದೇ ಘಟಕಕ್ಕೆ ಏಕೀಭವಿಸುವುದೇ ಡಿಜಿಟಲೈಸೇಷನ್. ಈ ಪ್ರಕ್ರಿಯೆಯು 0 ಮತ್ತು 1(ದ್ವಿಮಾನ ಪದ್ಧತಿ)ಸಂಖ್ಯೆಗಳನ್ನು ಬಳಸಿ ಮಾಡಲಾಗುವುದಲ್ಲದೆ, ಅದಕ್ಕಾಗಿ ಸಂಕೀರ್ಣ ಗಣಿತ ಕ್ರಮವಿಧಿ (ಚ್ಝಜಟ್ಟಜಿಠಿಜಞ) ಅನುಸರಿಸಲಾಗುತ್ತದೆ. ದ್ವಿಮಾನ ಪದ್ಧತಿಯಾಗಲೀ ಕ್ರಮವಿಧಿಯಾಗಲೀ ಎರಡೂ ಸಹ ಗಣಿತದ ಭೂಯಿಷ್ಠ ವಿಧಾನಗಳು.

ಒಂದು ಕ್ರಮಾವಳಿ (ಅಲ್-ಗೋ-ರಿಥ್-ಉಮ್ ಎಂದು ಉಚ್ಚರಿಸಲಾಗುತ್ತದೆ) ಒಂದು ಕಾರ್ಯವಿಧಾನ ಅಥವಾ ಕ್ರಮವಿಧಿಯು ಒಂದು ಸೂತ್ರವನ್ನು ಕಂಡುಹಿಡಿಯುವ ನಿಗದಿತ ಕ್ರಿಯೆಗಳ ಒಂದು ಅನುಕ್ರಮಣಿಕೆ. ಕಂಪ್ಯೂಟರ್ ಪೋ›ಗ್ರಾಂ ಅನ್ನು ವಿಸ್ತಾರವಾದ ಅಲ್ಗಾರಿದಮ್ ಎಂದು ಹೇಳಬಹುದು. ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನಗಳಲ್ಲಿ, ಕ್ರಮಾವಳಿಯು ಸಾಮಾನ್ಯವಾಗಿ ಒಂದು ಪುನರಾವರ್ತಿತ ಸಮಸ್ಯೆಯನ್ನು ಬಗೆಹರಿಸುವ ಒಂದು ಸಣ್ಣ ಪ್ರಕ್ರಿಯೆಯಾಗಿದೆ.

ಸಾಫ್ಟ್​ವೇರ್ ಸಮರ

ತಂತ್ರಜ್ಞಾನ ಮುನ್ನಡೆದಂತೆ ಮನುಷ್ಯನ ಆಸೆಗಳು ಮುಂದುವರೆದು ಹಕ್ಕು ಸ್ವಾಮ್ಯತೆಯ ಸಮಸ್ಯೆ ತಲೆದೋರಿತು. ಒಬ್ಬರು ಬರೆದ ಕ್ರಮವಿಧಿ ಮತ್ತೊಬ್ಬರು ಬಳಸುವ ಹಾಗಿಲ್ಲ; ಕೃತಿ ಚೌರ್ಯ ಮಾಡುವ ಹಾಗಿಲ್ಲ! ಆದರೆ ಗಣಿತ-ತಂತ್ರಜ್ಞಾನದ ಜುಗಲ್​ಬಂದಿ ಇಷ್ಟಕ್ಕೇ ನಿಲ್ಲಲಿಲ್ಲ. ಇವೆರಡರ ಹೆಜ್ಜೆದಾಪು ಮುಕ್ತ ತಂತ್ರಾಂಶಗಳನ್ನು ಮಾರುಕಟ್ಟೆಗೆ ತಂದವು. ಹಾಗೆ ಬಂದ ತಂತ್ರಾಂಶಗಳಲ್ಲಿ ಆಂಡ್ರಾಯಿಡ್ ಮತ್ತು ಉಬುಂಟು ಪ್ರಧಾನವಾದವುಗಳು. ಈ ಬೆಳವಣಿಗೆಯಿಂದ ಕ್ರಮವಿಧಿಗಳನ್ನು ಯಾರು ಬೇಕಾದರೂ ಕೃತಿಚೌರ್ಯ ಮಾಡಬಹುದಾಗಿತ್ತು ಮತ್ತು ಸಂಕಲಿಸಬಹುದಿತ್ತು. ಹಾಗಾಗಿ ಅತ್ಯಲ್ಪ ಸಮಯದಲ್ಲಿಯೇ ಆಂಡ್ರಾಯಿಡ್ ಜನಪ್ರಿಯಗೊಂಡಿತು. ಕಪ್ ಕೇಕ್​ನಿಂದ ಹಿಡಿದು ಓರಿಯೋವರೆಗೂ ಕೇವಲ 9 ವರ್ಷಗಳಲ್ಲಿ ರೂಪಾಂತರಗೊಳ್ಳುತ್ತಾ ಬಂದಿತು.

ವರ್ಣ ಸಮಸ್ಯೆ

ಹಿಂದಿನ ಕಾಲದಲ್ಲಿ ಮನೆಗಳಿಗೆ ಬಿಳಿಯ ಬಣ್ಣವಾದ ಸುಣ್ಣ ಅಥವಾ ಗೋಪಿ ಹೊರತಾಗಿ ಯಾವ ಬಣ್ಣವನ್ನೂ ಬಳಿಯುತ್ತಿರಲಿಲ್ಲ; ಸಿಗುತ್ತಲೂ ಇರಲಿಲ್ಲ. ಆದರೆ ಈಗ ಹಾಗಲ್ಲ. ನಮ್ಮ ಮಿತಿಗೂ ಮೀರಿದ ಬಣ್ಣಗಳು ಮಾರುಕಟ್ಟೆಯಲ್ಲಿವೆ. ಒಂದು ಹಾಡ್ವೇರ್ ಅಂಗಡಿಯಲ್ಲಿ ಕುಳಿತು ಯಾವ ಬಣ್ಣ, ಯಾವ ಬಣ್ಣದ ಯಾವ ಶೇಡ್ ಬೇಕಾದರೂ ಕ್ಷಣಮಾತ್ರದಲ್ಲಿ ತಯಾರಿಸಬಹುದು. ಇದಕ್ಕೆ ಮೂಲ ಕಾರಣ ಗಣಿತದ ವಿಕಲ್ಪ (ಟಞಚಿಜ್ಞಿಚಠಿಜಿಟ್ಞ) ಮತ್ತು ಡಿಜಿಟಲೀಕರಣ. ಸಾಮಾನ್ಯವಾಗಿ ಪ್ರಧಾನ ಬಣ್ಣಗಳು ಮೂರು ಕೆಂಪು(), ನೀಲಿ(ಆ) ಮತ್ತು ಹಸಿರು(ಎ). ಈ ಮೂರು ಬಣ್ಣಗಳ 1 ರಿಂದ 256ರ ಘಟಕಗಳ ವಿಕಲ್ಪವು ಎಷ್ಟು ಮಾದರಿ ಬಣ್ಣಗಳನ್ನು ನಿರ್ಧರಿಸುತ್ತವೆ ಎಂದು ಹೇಳುವುದೇ ಕಷ್ಟ!

ಈ ದಿನಕ್ಕಾಗಿ ನಾವೇನು ಮಾಡಬಹುದು?

ಇದುವರೆಗೂ ನಿಮ್ಮನ್ನು ಬಹಳವಾಗಿ ಕಾಡಿರುವ ಯಾವುದಾದರೂ ಸಮಸ್ಯೆಯನ್ನು ಮತ್ತೊಮ್ಮೆ ಬಿಡಿಸುವ ಪ್ರಯತ್ನ ಮಾಡಿ. ಗಣಿತ ಲೋಕದಲ್ಲಿ ಅನೇಕ ದಿಗ್ಗಜರಿದ್ದಾರೆ. ಅವರ ಚರಿತ್ರೆಯನ್ನು ಓದಲು ಯತ್ನಿಸಿ. ಈ ಮೂಲಕ ಅನುಭವಿಸಿದ ತವಕ-ತಲ್ಲಣ-ರೋಚಕತೆಗಳನ್ನು ತಿಳಿದುಕೊಳ್ಳಿ. ನಿಮ್ಮ ಮಕ್ಕಳ ಗಣಿತ ಪುಸ್ತಕಗಳನ್ನು ತೆಗೆದು ನಿಮ್ಮ ಆಸಕ್ತಿಯ ಯಾವುದಾದರೂ ಎರಡು ಲೆಕ್ಕಗಳನ್ನು ಮಾಡಿ. ಅಥವಾ ನಿಮ್ಮ ಅಲ್ಮೇರಾವನ್ನು ಹುಡುಕಿ ನೋಡಿ, ನೀವು ಓದಿದ ಗಣಿತ ಪುಸ್ತಕ ಸಿಕ್ಕರೂ ಸಿಗಬಹುದು. ಅಲ್ಲಿಂದೆರಡು ಲೆಕ್ಕಗಳನ್ನು ಹೆಕ್ಕಿ ಬಿಡಿಸಲು ಪ್ರಯತ್ನಿಸಿ. ನೀವು ಓದುವಾಗಿನ ಸಂದರ್ಭ ಮತ್ತು ಇಂದಿನ ಸಂದರ್ಭಕ್ಕೆ ವ್ಯತ್ಯಾಸವನ್ನು ಕಂಡು ನೀವೇ ಸಂತಸಪಡುವಿರಿ.

ಗಣಿತದ ವ್ಯಂಗ್ಯ ಚಿತ್ರಗಳನ್ನು ನೋಡಿ ನಕ್ಕು ಬಿಡಿ. ಗಣಿತದಲ್ಲಿಯೂ ಜೋಕುಗಳಿವೆ. ಹೇಳಿ-ಕೇಳಿ ಆನಂದಿಸಿ. ಈ ದಿನದ ಸಲುವಾಗಿ ಸಂಘ/ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ನಿಮ್ಮ ಮಕ್ಕಳು/ಪೋಷಕರೊಂದಿಗೆ ಅವುಗಳಲ್ಲಿ ಭಾಗಿಯಾಗಿ. ಗಣಿತದ ಈವರೆಗಿನ ಮುನ್ನಡೆಯನ್ನು ತಿಳಿದು ಹರ್ಷಿತರಾಗಿ.

ನೀವೇ ಒಂದು ಗಣಿತ ಕಾರ್ಯಕ್ರಮ ಏರ್ಪಡಿಸಿ. ಒಬ್ಬ ಗಣಿತ ಸಂವಾಹಕರನ್ನು ಕರೆದು ಗಣಿತದ ಅದ್ಭುತಗಳನ್ನು ಇತರರಿಗೆ ಪರಿಚಯಿಸಿ, ಗಣಿತದ ಅಗಾಧತೆಯನ್ನು ಮನಗಾಣಿಸಿ. ಗಣಿತವನ್ನು ಸುಲಲಿತವಾಗಿ ಮತ್ತು ಸರಾಗವಾಗಿ ವಿವರಿಸುವ ಅನೇಕ ಪುಸ್ತಕಗಳಿದ್ದು (ಉದಾ: ಎಚಟಜಜ್ಚಿ ಠಛ್ಟಿಜಿಛಿಠ, ್ಚ್ಟಟಟ್ಞ ಜ್ಠಜಿಛಛಿ, ್ಛ್ಟ ಛ್ಠಞಞಜಿಛಿಠ ಠಛ್ಟಿಜಿಛಿಠ) ಓದಲು ಯತ್ನಿಸಿ.

ಏನಿದು ಗಣಿತ 2.0 ದಿನ?

ಇದು ಈ ಶತಮಾನದ ಗಣಿತ. ಸಾಫ್ಟ್ ವೇರುಗಳಿಗೆ ವಿವಿಧ ಆವೃತ್ತಿಗಳಿದ್ದಂತೆ. ಗಣಿತಕ್ಕೆ ಇದು ಎರಡನೇ ಆವೃತ್ತಿ. ಗಣಿತದ ಜತೆಗೆ ತಂತ್ರಜ್ಞಾನದ ಸಹಭಾಗಿತ್ವ. ಹಾಗಾಗಿ 2.0 ಡಿಜಿಟಲ್ ಯುಗವಾಗಿರುವುದರಿಂದ ಗಣಿತ 2.0

ಹೈ ಸ್ಪೀಡ್ ಇಂಟರ್ನೆಟ್

ವಿವಿಧ ಸಂಕೇತ ಘಟಕಗಳನ್ನು ಏಕೀಭವಿಸಿ ರವಾನಿಸಲು ಉಪಯೋಗಿಸುವಂಥದ್ದೇ ಆಪ್ಟಿಕಲ್ ಕೇಬಲ್ (ಣಟಠಿಜ್ಚಿಚ್ಝ ್ಛಚ್ಟಿಛಿ ್ಚಚ್ಝಿಛಿ ಚ್ಞಛ ಣಊಇ). ಇದರಿಂದಾಗಿ ಉನ್ನತ ಗುಣಮಟ್ಟದ ಮತ್ತು ಅತ್ಯಂತ ವೇಗಯುಕ್ತವಾದ ಇಂಟರ್ನೆಟ್ ನಮಗೆ ಲಭಿಸಲು ಸಾಧ್ಯವಾಗಿದೆ. ಹಾಗಾಗಿ ನಾವೀಗ ಯೂಟ್ಯೂಬಿನಿಂದ ಒಂದು ವೀಡಿಯೋವನ್ನು ಕ್ಷಿಪ್ರವಾಗಿ ನಮ್ಮ ಕಂಪ್ಯೂಟರ್​ಗೆ ವರ್ಗಾಯಿಸಿಕೊಳ್ಳಬಲ್ಲೆವು. ಅತ್ಯಾಧುನಿಕ ಲೇಥ್ ಮತ್ತು ಸಿಎನ್​ಸಿ ಯಂತ್ರಗಳ ತಯಾರಿಕೆಯಲ್ಲಿ ಗಣಿತ ಪಾರಮ್ಯ ಮೆರೆದು, ನಿಖರತೆ ಸಾಧಿಸಿ ಉತ್ಕೃಷ್ಟ ಮಟ್ಟದ ಆಪ್ಟಿಕಲ್ ಕೇಬಲ್ ಗಳನ್ನು ತಯಾರಿಸಲು ಸಾಧ್ಯವಾದ ಮೇಲೆಯೇ ಈ ಬೆಳವಣಿಗೆ ಸಾಧ್ಯವಾಗಿರುವುದು. ದತ್ತ ಸಂಕೋಚನೆ(ಛಚಠಿಚ ್ಚಞಟ್ಟಛಿಠಠಜಿಟ್ಞ) ಮತ್ತು ದತ್ತ ಮರುಪಡೆಯುವಿಕೆಗಳು (ಛಚಠಿಚ ್ಟಠ್ಟಿಜಿಛಿಡಛ್ಝಿ) ಇತ್ತೀಚಿನ ಡಿಜಿಟಲ್ ಯುಗದಲ್ಲಿ ಮಹತ್ವಪೂರ್ಣವಾದವುಗಳು. ಗಣಿತದ ಸಂಕೀರ್ಣ ಕ್ರಮವಿಧಿಗಳು ಮೇಲಿನ ಎರಡೂ ಕ್ಷೇತ್ರಗಳ ಮೇಲೂ ಸಂಪೂರ್ಣ ಪ್ರಭುತ್ವವನ್ನು ಸಾಧಿಸಿವೆ. ಈ ಕಾರಣಗಳಿಂದಾಗಿ ನಾವೀಗ ಹಳೆಯಕಾಲದ ದೊಡ್ಡ ಡೋಮುಗಳ ಬದಲಾಗಿ ತೆಳ್ಳಗಿನ ಮಾನಿಟರ್​ಗಳನ್ನು ಮತ್ತು ರೂಮು ಗಾತ್ರವಿದ್ದ ಕಂಪ್ಯೂಟರ್​ಗಳ ಸ್ಥಾನದಲ್ಲಿ ಕೈಗೆ ಕಟ್ಟುವ ಗಡಿಯಾರಗಳನ್ನು ಸ್ಥಾಪಿಸಬಲ್ಲವರಾಗಿದ್ದೇವೆ.

 

Leave a Reply

Your email address will not be published. Required fields are marked *

Back To Top