ಮೌಲ್ಯಾಧಾರಿತ ಶಿಕ್ಷಣ ಅವಶ್ಯ

ನರಗುಂದ: ಶಿಕ್ಷಣದಲ್ಲಿ ಮೌಲ್ಯ ಇರಬೇಕು. ಮೌಲ್ಯಾಧಾರಿತ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಂದ ಮಾತ್ರ ಉತ್ತಮ ಸಮಾಜ ನಿರ್ವಿುಸಲು ಸಾಧ್ಯ ಎಂದು ನರಗುಂದ ಜೆಎಂಎಫ್​ಸಿ ನ್ಯಾಯಾಧೀಶ ಲಗಮಾ ಹುಕ್ಕೇರಿ ಹೇಳಿದರು.

ಪಟ್ಟಣದ ಸುಕೃತಿ ಚೋಟಾ ಚಾಂಪ್ಸ್ ಇಂಟರ್​ನ್ಯಾಷನಲ್ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಶಾಲೆಯ 3ನೇ ವಾರ್ಷಿ ಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ಇಂದು ಮಾಯವಾಗುತ್ತಿದೆ. ಶಿಕ್ಷಕರು ಶಾಲಾ ಮಕ್ಕಳಿಗೆ ಸಂಸ್ಕಾರಯುತ, ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು. ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸಲು ತಿಳಿಸಬೇಕು. ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ದೇಶದ ಉತ್ತಮ ನಾಗರಿಕರಾಗಿ ಬದುಕಬೇಕು. ಕೌಶಲಯುತ ಶಿಕ್ಷಣದಿಂದ ವಿದ್ಯಾರ್ಥಿಗಳು ತಮ್ಮ ಬದುಕನ್ನು ಸುಂದರವನ್ನಾಗಿ ರೂಪಿಸಿಕೊಳ್ಳಬೇಕು ಎಂದರು.

ಕಲಬುರಗಿ ಸಿಪಿಐ ಗಿರೀಶ ರೋಡಕರ, ಶಾಲಾ ಸಂಸ್ಥಾಪಕ ಅಧ್ಯಕ್ಷ ಸುಭಾಸಚಂದ್ರ ಕೋತಿನ, ಭಾವನಾ ಪಾಟೀಲ, ಸ್ಮೀತಾ ದೇಸಾಯಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀದೇವಿ ಕೋತಿನ, ಮುಖ್ಯಾಧ್ಯಾಪಕಿ ಅರ್ಪಣಾ ಕೋರಿ, ಕುಮಾರ, ಶ್ರೀಧರ ರಾಮದುರ್ಗ, ಇತರರು ಉಪಸ್ಥಿತರಿದ್ದರು. ನಾಜ್ಮೀನ್ ಶೇಖ್ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.