ಅಥಣಿ ಗ್ರಾಮೀಣ: ಭಾರತೀಯ ಸಂಸ್ಕೃತಿ, ಪರಂಪರೆ ಮಾನವೀಯ ಮೌಲ್ಯ ವೃದ್ಧಿಸುವ ದಿಕ್ಸೂಚಿಯಾಗಿವೆ. ಎಲ್ಲಿ ಭಕ್ತಿ-ಭಾವ ಹಾಗೂ ಶ್ರದ್ಧಾ ಮನೋಭಾವ ಇರುತ್ತದೆಯೋ ಅಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಧಗ್ರಾಯೋ ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಹೇಳಿದರು.
ಅಥಣಿ ತಾಲೂಕಿನ ಬಳವಾಡ ಗ್ರಾಮದ ಶ್ರೀ ಅಪ್ಪಯ್ಯಸ್ವಾಮಿ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಈಚೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ವರಮಹಾಲಕ್ಷೀ ಪೂಜೆ ಹಾಗೂ ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ವಿರಕ್ತಮಠದ ರಾಚೋಟೇಶ್ವರ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಿಳೆಯರು ಸ್ವಾವಲಂಬಿ ಬದುಕು ಸಾಗಿಸಲು ಧರ್ಮಸ್ಥಳ ಸಂಸ್ಥೆ ಯೋಜನೆ ಸಹಕಾರಿಯಾಗಿವೆ ಎಂದರು.
ಬಳಿಕ ಧಗ್ರಾಯೋ ವತಿಯಿಂದ ಗ್ರಾಮದ ಸುಮಂಗಲೆಯರಿಗೆ ಉಡಿ ತುಂಬಲಾಯಿತು. ಮುರಘೇಂದ್ರ ಚಿಕ್ಕಸ್ವಾಮೀಜಿ, ರಸೂಲ್ ನಧಾಪ್, ಯೋಜನಾಧಿಕಾರಿ ರಜಬ್‌ಅಲಿ ಮೇಲಿನಮನಿ, ರಮೇಶ ಅಥಣಿ, ಮಹಾದೇವ ಪಾಟೀಲ, ಸಂಬಾಜಿ ಐನಾಪುರ, ಬಸಪ್ಪ ಸನದಿ, ಶಿವನಗೌಡ ಪಾಟೀಲ, ತಿಪ್ಪಣ್ಣ ಶೇಡಬಾಳ, ಒಕ್ಕೂಟದ ಅಧ್ಯಕ್ಷೆ ದ್ರಾಕ್ಷಾಯಿಣಿ ಕೊನ್ನೂರ, ಮಹಾಂತೇಶ ಮಠಪತಿ, ಪ್ರದೀಪ ಮೊಳಗೆ ಇತರರಿದ್ದರು.