ಮೋದಿ ಗೆಲುವು ದೇಶದ ಪ್ರಗತಿಗೆ ಹೊಸ ಆಯಾಮ

ಬೀದರ್: ದೇಶಕ್ಕೆ ಇಂದು ಮೋದಿ ಬೇಕಾಗಿದ್ದಾರೆ. ರಾಷ್ಟ್ರ ರಕ್ಷಣೆ, ಸರ್ವರ ಹಿತ ಮೋದಿ ಅವರಿಂದ ಮಾತ್ರ ಸಾಧ್ಯ ಎಂಬುದು ಇಡೀ ದೇಶದ ಜನ ಅರಿತು ಬಿಜೆಪಿಗೆ ಅಮೋಘ ಜಯ ತಂದುಕೊಟ್ಟಿದ್ದಾರೆ. ಬರುವ ಐದು ವರ್ಷಗಳಲ್ಲಿ ದೇಶದ ವಿಕಾಸಕ್ಕೆ ಹೊಸ ಆಯಾಮ ಸಿಗಲಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ಮೈಲೂರ ಕ್ರಾಸ್ನ ಉಡುಪಿ ಹೋಟೆಲ್ ಮಹಾಲಕ್ಷ್ಮೀ ಸಭಾಂಗಣದಲ್ಲಿ ಶುಕ್ರವಾರ ನಾಟ್ಯಶ್ರೀ ನೃತ್ಯಾಲಯ ಮತ್ತು ಮೋದಿ ಅಭಿಮಾನಿ ಬಳಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಶದಲ್ಲಿ ಮೋದಿ ಅಲೆಯಲ್ಲ ಸುನಾಮಿ ಎದ್ದಿತ್ತು. ಚುನಾವಣೆಯಲ್ಲಿ ಅನೇಕ ಘಟಾನುಘಟಿಗಳು ಸೋತು ಮನೆ ಸೇರಿರುವುದೇ ಇದಕ್ಕೆ ಸಾಕ್ಷಿ ಎಂದರು.
ದೇಶದ ಅಭಿವೃದ್ಧಿಯೇ ಮೋದಿ ಮಂತ್ರವಾಗಿದೆ. ಇದಕ್ಕೆ ಜನ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಪ್ರಜ್ಞಾವಂತ ಮತದಾರರು ಜಾತಿ, ಮತ, ಪಂಥ, ಧರ್ಮ ಎನ್ನದೇ ರಾಷ್ಟ್ರ ಹಿತ, ವಿಕಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿದರು.
ನಾಟ್ಯಶ್ರೀ ನೃತ್ಯಾಲಯ ನಿರ್ದೇಶಕಿ ರಾಣಿ ಸತ್ಯಮೂರ್ತಿ, ಪ್ರಮುಖರಾದ ಬಾಬುರಾವ ಮದಕಟ್ಟಿ, ಬಾಬು ವಾಲಿ, ರೇವಣಸಿದ್ದಪ್ಪ ಜಲಾದೆ, ಗುರುನಾಥ ರಾಜಗೀರಾ, ಭೀಮಣ್ಣ ಕೊಳ್ಳೆ, ವೀರೇಶ ಸ್ವಾಮಿ, ಗುರುಮೂರ್ತಿ, ಸತ್ಯಮೂರ್ತಿ , ಕಿರಣ ಮೂರ್ತಿ, ರವಿಚಂದ್ರ ಮೂರ್ತಿ, ರಾಮಮೂರ್ತಿ, ಕಿರಣ್ ಮೂರ್ತಿ ಇತರರಿದ್ದರು.

Leave a Reply

Your email address will not be published. Required fields are marked *