More

    ಮೋದಿಯಿಂದ ನಾರಿ ತು ನಾರಾಯಣಿ’ ಸಾಕಾರ

    ಶಹಾಬಾದ್: ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮೂಲಕನಾರಿ ತು ನಾರಾಯಣಿ ಎಂಬ ಉಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಸಾಕಾರಗೊಳಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ, ಮಂಡಲ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸೂಡಿ ಹೇಳಿದರು.

    ಶೇ.33 ಮೀಸಲಾತಿ ಮಹಿಳಾ ಸಬಲೀಕರಣಕ್ಕೆ ಇಟ್ಟ ದಿಟ್ಟ ಹೆಜ್ಜೆ. ಇದರಿಂದ ದೇಶದ ಮಹಿಳೆಯರ ಕನಸುಗಳು ನನಸಾಗಲಿವೆ. ಕೇಂದ್ರ ಸರ್ಕಾರ ಮಂಡಿಸಿದ ಕಾಯ್ದೆಗೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದು ಸ್ವಾಗತಾರ್ಹ.

    12ನೇ ಶತಮಾನದಲ್ಲಿ ಬಸವಣ್ಣನವರು ಶರಣೆ ಅಕ್ಕಮಹಾದೇವಿ ಸೇರಿ ಸಾಕಷ್ಟು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದರು. ಇದೀಗ ಮೀಸಲಾತಿಯಿಂದ ಸಂಸತ್‌ನಲ್ಲಿ ಸ್ತಿçÃಯರಿಗೆ ಬಲ ಸಿಕ್ಕಂತಾಗಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಮುಖರಾದ ಶಶಿಕಲಾ ಸಜ್ಜನ್, ರತ್ನಾಬಾಯಿ ಬಿರಾದಾರ, ಪದ್ಮಾ ಕಟಕೆ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts