ಮೋಟಗಿ ಬಸವೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವ

blank

ಬಾಗಲಕೋಟೆ: ಕೋಟೆ ನಗರದ ಐತಿಹಾಸಿಕ ಮೋಟಗಿ ಬಸವೇಶ್ವರ ಜಾತ್ರೆ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಬುಧವಾರ ಸಡಗರ, ಸಂಭ್ರಮದಿAದ ಜರುಗಿತು. ಸಂಜೆ ೫ ಗಂಟೆ ವೇಳೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಕಬ್ಬು, ಹೂ, ಬಾಳೆ ದಿಂಡು, ನಿಶಾನೆಗಳಿಂದ ಅಲಂಕಾರಗೊ0ಡಿದ್ದ ರಥವನ್ನು ಎಳೆಯಲು ಚಾಲನೆ ನೀಡುತ್ತಿದ್ದಂತೆ ಭಕ್ತ ಸಮುದಾಯದಿಂದ ಹರ್ಷೋದ್ಘಾರ ಮುಗಿಲು ಮುಟ್ಟಿತು. ರಥೋತ್ಸವದ ಮಾರ್ಗದೂದ್ದಕ್ಕೂ ಭಕ್ತರು ಚಪ್ಪಾಳೆ, ಶಿಳ್ಳೆಗಳ ಮೂಲಕ ಸಂಭ್ರಮಿಸಿದರು. ಮಾರ್ಗದ ಎರಡು ಬದಿಯಲ್ಲಿ ನಿಂತಿದ್ದ ಭಕ್ತರು ರಥಕ್ಕೆ ಉತ್ತತ್ತಿ, ಕೊಬ್ಬರಿ, ಬಾಳೆಹಣ್ಣು ಅರ್ಪಿಸಿ ಭಕ್ತಿ ಮೆರೆದರು.

ರಥವು ಪಾದಗಟ್ಟೆ ತಲುಪುತ್ತಿದ್ದಂತೆ ಭಕ್ತರ ಜಾತ್ರಾ ಸಂಭ್ರಮ ಇಮ್ಮಡಿಗೊಂಡು ಬಸವೇಶ್ವರ ಮಹಾರಾಜಕೀ ಜೈ ಎನ್ನುವ ಘೋಷಣೆ ಮೊಳಗಿತು. ಜಾತ್ರೆಯ ನಿಮಿತ್ತ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಬುತ್ತಿ ಪೂಜೆ, ಆರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಸಡಗರದಿಂದ ಜರುಗಿದವು. ಭಕ್ತರು ಹೋಳಿಗೆ, ಕಡುಬು, ಹುಗ್ಗಿ ಹಾಗೂ ವಿವಿಧ ಬಗೆಯ ಖಾದ್ಯಗಳನ್ನು ಮಾಡಿ ನೈವೇದ್ಯ ಸಮರ್ಪಿಸಿದರು.

ಜಾತ್ರೆ ಅಂಗವಾಗಿ ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಬಾಗಲಕೋಟೆ, ವಿದ್ಯಾಗಿರಿ, ನವನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ಮೋಟಗಿ ಬಸವೇಶ್ವರರ ದರ್ಶನ ಪಡೆದುಕೊಂಡರು. ಸಂಜೆ ನಡೆದ ಮಹಾರಥೋತ್ಸವದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಐದು ದಿನಗಳ ಚಿಕ್ಕ ರಥೋತ್ಸವ ಜರುಗಿತು. ರೈತರ ಜಾತ್ರೆ ಎಂದೇ ಬಿಂಬಿತವಾಗಿರುವ ಮೋಟಗಿ ಬಸವೇಶ್ವರ ಜಾತ್ರೆಗೆ ರೈತಾಪಿ ವರ್ಗದರು ಹೆಚ್ಚಾಗಿ ಆಗಮಿಸುವುದು ಈ ಜಾತ್ರೆ ವಿಶೇಷ. ಪ್ರತಿ ವರ್ಷ ಭಾರತ ಹುಣ್ಣಿಮೆ ದಿನದಂದು ಈ ಜಾತ್ರೆ ಜರುಗುತ್ತದೆ.

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…