ಮೋದಿ ಸರ್ಕಾರಕ್ಕಿದೆ ಮಾತೆಯರ ಬಲ

ಹೊಸನಗರ: ಕಳೆದ 5 ವರ್ಷಗಳಿಂದ ದೇಶದ ಇತಿಹಾಸದಲ್ಲಿ ಹೊಸ ಶಕೆ ಆರಂಭಗೊಂಡಿದೆ. ಅದು ಈಗಲೂ ಮುಂದುವರಿಯಲಿದೆ. ಇದಕ್ಕೆ ದೇಶದ ಮಹಿಳೆಯರ ವಿಶೇಷ ಬಲವಿದೆ ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರಾಜಶ್ರೀ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿ ಎದುರು ದೇಶಕ್ಕಾಗಿ ಮೋದಿ ಜೈಕಾರದೊಂದಿಗೆ ತಾಲೂಕು ಮಹಿಳಾ ಸಂಘಟನೆಯ ವಿಶೇಷ ಪ್ರಚಾರ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಬಿ.ವೈ.ರಾಘವೇಂದ್ರ ಹೆಚ್ಚು ಮತಗಳಿಂದ ಜಯ ಪಡೆಯಲಿದ್ದಾರೆ. ಅಭಿವೃದ್ಧಿ ಚಿಂತನೆಯುಳ್ಳ ಅವರು ಕ್ಷೇತ್ರದ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಯ ಅಭಿವೃದ್ಧಿಗೆ ಹಗಲು ರಾತ್ರಿ ದುಡಿದವರು. ಈ ಎಲ್ಲದರ ನಡುವೆ ದೇಶಕ್ಕೆ ಉಜ್ವಲ ಭವಿಷ್ಯವಿದೆ ಎನ್ನುವುದನ್ನು ಜನತೆಗೆ ತಿಳಿಯುವಂತೆ ಮಾಡಿ, ಇಡೀ ಜಗತ್ತೇ ನಮ್ಮನ್ನು ಗೌರವಿಸುವಂತಾಗಿಸಿರುವುದು ಜನರ ಮನದಲ್ಲಿ ಅಚ್ಚೊತ್ತಿದೆ. ದೇಶಕ್ಕಾಗಿ ದುಡಿಯುವ ಮೋದಿಗೆ ಬಲ ನೀಡುವುದು ನಮ್ಮ ಕರ್ತವ್ಯ ಎಂದರು. ಪಪಂ ಮಾಜಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಮಾಜಿ ಸದಸ್ಯೆ ನಾಗರತ್ನಾ ಆರ್.ರಾವ್, ಪ್ರಮುಖರಾದ ವಿಜಯಲಕ್ಷ್ಮೀ ಕುಮಾರ್, ರಾಜೇಶ್ವರಿ ಚಂದ್ರಶೇಖರ, ದೇವಮ್ಮ, ಶಶಿಕಲಾ ಇತರರಿದ್ದರು.