20.5 C
Bangalore
Sunday, December 15, 2019

ಮೋದಿ ಸಂಪುಟದಲ್ಲಿ ಸವಾಲಿನ ಕೆಲಸ

Latest News

ಅಡುಗೆಗೆ ಗುಣಮಟ್ಟದ ಪದಾರ್ಥ ಬಳಸಿ

ಕೊಪ್ಪ: ಅಡುಗೆ ಮಾಡುವಾಗ ಸ್ವಚ್ಛತೆಗೆ ಗಮನ ಹರಿಸಬೇಕು. ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸಿ. ಹೆಚ್ಚು ಜವಾಬ್ದಾರಿಯಿಂದ ಅಡುಗೆ ಮಾಡಬೇಕು ಎಂದು ಅಕ್ಷರ...

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ರಾಮಾಯಣ, ಮಹಾಭಾರತ, ಭಾಗವತಗಳೇ ಮೂಲಾಧಾರ: ಶ್ರೀ ರಾಘವೇಶ್ವರ ಸ್ವಾಮೀಜಿ

ಬೆಂಗಳೂರು: ರಾಮಾಯಣ ಮಹಾಕಾವ್ಯ ಕಲ್ಪನೆಯಲ್ಲ, ಅದು ಇತಿಹಾಸ. ರಾಮಾಯಣ, ಮಹಾಭಾರತ ಹಾಗೂ ಭಾಗವತ ನಮ್ಮ ಭರತ ಸಂಸ್ಕೃತಿಯ ಮೂಲಾಧಾರ. ಈ ಮೂರನ್ನು ಮೂಲವಾಗಿಟ್ಟುಕೊಂಡು ವಿಷ್ಣುಗುಪ್ತ ವಿಶ್ವವಿದ್ಯಾಪೀಠ...

ರೇವಣ್ಣರಿಂದ ಕಲಿಯುವುದು ಮುಗಿದಿದೆ

ಹಾಸನ ಜಿಲ್ಲೆಯನ್ನಷ್ಟೇ ನೋಡಿಕೊಳ್ಳಲಿ ಶಾಸಕ ಕೆ.ಸಿ.ನಾರಾಯಣಗೌಡ ವಾಗ್ದಾಳಿ ಕೆ.ಆರ್.ಪೇಟೆ: ಮಾಜಿ ಸಚಿವ ಎಚ್.ಡಿ.ರೇವಣ್ಣ ನಮ್ಮ ಜಿಲ್ಲೆ, ತಾಲೂಕು ನೋಡುವ ಅವಶ್ಯಕತೆ ಇಲ್ಲ. ಹಾಸನ ಜಿಲ್ಲೆಯನ್ನಷ್ಟೇ...

ಜೆಡಿಎಸ್‌ಗೆ ನಾರಾಯಣಗೌಡ ಯಾವ ಲೆಕ್ಕ!

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿರುಗೇಟು ಪಾಂಡವಪುರ: ಮಾಜಿ ಪ್ರಧಾನಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿ ಎಚ್ಚರಿಕೆ ನೀಡಿದವರೆಲ್ಲ ಮಣ್ಣಲ್ಲಿ ಮಣ್ಣಾಗಿ...

ಪಾನಮತ್ತ ಚಾಲಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಪೊಲೀಸರ ಅಮಾನತು

ಬೆಂಗಳೂರು: ಪಾನಮತ್ತ ಚಾಲಕರಿಂದ ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡುತ್ತಿದ್ದ ಅಶೋಕ್ ನಗರ ಸಂಚಾರ ಠಾಣೆಯ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಜಂಟಿ ಪೊಲೀಸ್ ಆಯುಕ್ತ...

ಹುಬ್ಬಳ್ಳಿ: ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆ ನೂತನ ಸಚಿವ ಪ್ರಲ್ಹಾದ ಜೋಶಿ ಅವರನ್ನು ಇಲ್ಲಿನ ಶ್ರೀನಿವಾಸ ಗಾರ್ಡನ್​ನಲ್ಲಿ ಸಾರ್ವಜನಿಕ ಅಭಿನಂದನಾ ಸಮಿತಿಯಿಂದ ಹೃದಯಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು.

ಮುಖಂಡರು, ಗಣ್ಯರೆಲ್ಲರೂ ಜೋಶಿ ಅವರ ಗುಣಗಾನ ಮಾಡಿದರೆ, ಸನ್ಮಾನಕ್ಕೆ ಕೃತಜ್ಞತೆ ಹೇಳಿದ ಜೋಶಿಯವರು, ಸಚಿವ ಸ್ಥಾನ ಕ್ಷೇತ್ರದ ಜನರಿಂದ ಲಭಿಸಿದೆ. ಈ ಅಧಿಕಾರವನ್ನು ಜನರಿಗೇ ಸಮರ್ಪಿಸಲಾಗುವುದು ಎಂದು ಘೊಷಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಕೆಲಸ ಮಾಡುವುದು ನಿಜಕ್ಕೂ ಸವಾಲು. ನಿತ್ಯ 18 ಗಂಟೆ ದುಡಿಯುವ ಅವರ ಸರಿಸಮನಾಗಿ ತೊಡಗಿಕೊಳ್ಳಲು ಸಾಧ್ಯವೇ ಎಂದು ಆತಂಕವಾಗಿದೆ. ಇದನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಮುಂದೆ ತೋಡಿಕೊಂಡಾಗ, ಸಮಾಧಾನ ಮಾಡಿದರು. ಇಂಥ ಸ್ಥಾನ ಸಿಕ್ಕಿರುವುದು ನನ್ನ ಹಾಗೂ ಕ್ಷೇತ್ರದ ಸೌಭಾಗ್ಯ. ಸ್ಥಾನ ಸಿಕ್ಕಿದೆ; ಮಾನ ತೆಗೆಯುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ. ಕ್ಷೇತ್ರದ ಮಾನವನ್ನು ದೇಶದ ಎತ್ತರಕ್ಕೆ ಕೊಂಡೊಯ್ಯುತ್ತೇನೆ ಎಂದು ವಾಗ್ದಾನ ಮಾಡಿದರು. ಇಷ್ಟು ಎತ್ತರಕ್ಕೆ ಬೆಳೆಯಲು ಅಟಲ್​ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್, ಅನಂತ ಕುಮಾರ ಮೊದಲಾದವರು ಕಾರಣ ಎಂದು ಸ್ಮರಿಸಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಅರ್ಹತೆ ಹಾಗೂ ಕಾರ್ಯದಕ್ಷತೆ ಆಧಾರದ ಮೇಲೆ ಚುನಾವಣೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಜೋಶಿ ಅವರ ಅಭಿವೃದ್ಧಿ ಕಾರ್ಯ ನೆಚ್ಚಿ ಜನರು ಆಶೀರ್ವಾದ ಮಾಡಿದ್ದಾರೆ. ಈಗ ಸಚಿವರೂ ಆಗಿರುವುದರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ರಾಜ್ಯದ ಹಿತ ಕಾಯಲು ನಮ್ಮ ನಾಲ್ವರು ಸಚಿವರು 15 ದಿನಕ್ಕೊಮ್ಮೆ ಸಭೆ ನಡೆಸುವ ವಾಗ್ದಾನ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಬಣ್ಣಿಸಿದರು.

ಆರ್​ಎಸ್​ಎಸ್​ನ ಶ್ರೀಧರ ನಾಡಿಗೇರ ಮಾತನಾಡಿ, ಅಧಿಕಾರ ಶಾಶ್ವತವಲ್ಲ, ಕೀರ್ತಿ ಶಾಶ್ವತ ಎಂಬುದನ್ನು ಅರಿತು ಕೆಲಸ ಮಾಡುವುದು ಶ್ರೇಷ್ಠವಾದುದು. ಜೋಶಿಯವರು ಕೀರ್ತಿ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಾರ್ವಜನಿಕ ಅಭಿನಂದನಾ ಸಮಿತಿಯಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಅವರ ಪತ್ನಿ ಜ್ಯೋತಿ ಜೋಶಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಪದ್ಮಶ್ರೀ ಡಾ.ಎಂ.ಎಂ. ಜೋಶಿ, ಪ್ರದ್ಯುಮ್ನಾಚಾರ್ಯ ಜೋಶಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ಎಂಎಲ್​ಸಿಗಳಾದ ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಮಾಜಿ ಶಾಸಕರಾದ ಸೀಮಾ ಮಸೂತಿ, ವೀರಭದ್ರಪ್ಪ ಹಾಲರವಿ, ಎಸ್.ಐ. ಚಿಕ್ಕನಗೌಡ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು, ನಾಗರಿಕರು ಉಪಸ್ಥಿತರಿದ್ದರು.

ತಂದೆ ನೆನೆದು ಭಾವುಕರಾದ ಜೋಶಿ: ಚಿಕ್ಕವನಿದ್ದಾಗ ನಮ್ಮ ತಂದೆ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ವಿಧಾನಸೌಧ ವೀಕ್ಷಣೆಗೆ ಪಾಸ್ ಪಡೆಯಲು ಶಾಸಕರ ಭವನಕ್ಕೆ ಅಲೆದಾಡಿದರೂ ಪ್ರಯೋಜನವಾಗಿರಲಿಲ್ಲ. ನನ್ನ ತಂದೆ ಬೇಜಾರಾಗಿ ಅದೆಲ್ಲ ದೊಡ್ಡವರಿಗಾಗಿ ಇರುವುದು, ನಮಗಲ್ಲ ಎಂದು ನೊಂದುಕೊಂಡಿದ್ದರು. ಈಗ ನನಗೆ ಸಂಸದೀಯ ವ್ಯವಹಾರಗಳ ಖಾತೆ ಸಿಕ್ಕಿದೆ. ಇದಕ್ಕೆ ತಂದೆ-ತಾಯಿ ಆಶೀರ್ವಾದವೇ ಕಾರಣ ಎನ್ನುತ್ತ ಜೋಶಿ ಕೆಲ ಕ್ಷಣ ಭಾವುಕರಾದರು.

ಸನ್ಮಾನ, ಪಟಾಕಿ ಬೇಡ: ಹಾರ, ಸನ್ಮಾನ, ಪಟಾಕಿ ಸಿಡಿಸುವುದು ಬೇಡ. ಬದಲಾಗಿ ಕೊಡುಗೆಯಾಗಿ ನೋಟ್​ಬುಕ್, ಪುಸ್ತಕ, ಪೆನ್ನು, ಬಟ್ಟೆ ಕೊಡಿ. ಶಾಲಾ ಮಕ್ಕಳಿಗೆ ಅರ್ಪಿಸೋಣ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಪಟಾಕಿ ದೀಪಾವಳಿಗಷ್ಟೇ ಸೀಮಿತವಾಗಲಿ ಎಂದು ಸಚಿವರು ವಿನಂತಿಸಿದರು.

Stay connected

278,756FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...