ಮೋದಿಗಾಗಿ ಪಾದಯಾತ್ರೆ

ಮುಂಡಗೋಡ: ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿ ಹುದ್ದೆ ಏರಿದ ಕಾರಣ ಪಟ್ಟಣದ ಹೊಸ ಓಣಿ ಬಡಾವಣೆ ನಿವಾಸಿ ಕಿರಣ ಕೊಲ್ಲಾಪುರ ಮುಂಡಗೋಡದಿಂದ ಮುರ್ಡೆಶ್ವರದವರೆಗೆ ಶನಿವಾರ ಪಾದಯಾತ್ರೆ ಆರಂಭಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದ ಮುಂಡಗೋಡದಿಂದ ಮುರ್ಡೆಶ್ವರದವರೆಗೆ ಪಾದಯಾತ್ರೆ ಮೂಲಕ ತೆರಳಿ ಮುಡಿ ಅರ್ಪಿಸುವುದಾಗಿ ಹರಕೆ ಹೊತ್ತಿದ್ದರು. ಅದೇ ಪ್ರಕಾರ ಪಾದಯಾತ್ರೆ ಆರಂಭಿಸಿದ್ದಾರೆ.

‘ಜಗತ್ತಿನಲ್ಲಿ ನಮ್ಮ ದೇಶವನ್ನು ಪ್ರಬಲ ರಾಷ್ಟ್ರವನ್ನಾಗಿ ಮಾಡಲು ಹೊರಟಿರುವ ಏಕೈಕ ಪ್ರಧಾನಿ ಮೋದಿ. ಹೀಗಾಗಿ ಭಗವಂತ ಅವರಿಗೆ ಆಯುರಾರೋಗ್ಯ ನೀಡಲಿ. ಅವರು ಈಶ್ವರ ಭಕ್ತರು. ನಾನೂ ಈಶ್ವರನ ಭಕ್ತ. ಆದ್ದರಿಂದಲೇ ನಾನು ಅವರ ಅಭಿಮಾನಿಯಾಗಿ ಹರಕೆ ತೀರಿಸುತ್ತಿದ್ದೇನೆ. ಬಳ್ಳಾರಿಯಲ್ಲಿ ಕೆಲಸದ ಒತ್ತಡದಿಂದ ಹರಕೆಯನ್ನು ತೀರಿಸಲು ತಡವಾಯಿತು’ ಎಂದು ಕಿರಣ ಕೊಲ್ಲಾಪುರ ತಿಳಿಸಿದರು. ಪಾದಯಾತ್ರೆಗೂ ಮುನ್ನ ಹೊಂಡದ ಓಣಿಯ ನಾಗದೇವತೆ ಮತ್ತು ಹಳೂರಿನ ಗ್ರಾಮದೇವಿ ದ್ಯಾಮವ್ವ ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ವಿಜಯ ಪೂಜಾರ ಇದ್ದರು.

Leave a Reply

Your email address will not be published. Required fields are marked *