28.5 C
Bengaluru
Monday, January 20, 2020

ಮೊಬೈಲ್ ಮೂಲಕ ಮಾಹಿತಿ ಕೊಡಿ

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಕಲಬುರಗಿ: ನಿಯತಕಾಲಿಕ ವಿದ್ಯುತ್ ಸ್ಥಗಿತದ ಬಗ್ಗೆ ಸಂಬಂಧಿತ ಗ್ರಾಹಕರಿಗೆ ಮೊಬೈಲ್ ಮೂಲಕ ಮುಂಚಿತವಾಗಿ ತಿಳಿಸುವ ವ್ಯವಸ್ಥೆ ಮಾಡುವಂತೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ರಾಗಪ್ರಿಯಾ ಅವರು ಎಲ್ಲ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.
ಜೆಸ್ಕಾಂ ಇಎಚ್ಟಿ ಮತ್ತು ಎಚ್ಟಿ ಗ್ರಾಹಕರ ಜತೆ ಶನಿವಾರ ನಡೆಸಿದ ಸಂವಾದದಲ್ಲಿ ಭಾಗವಹಿಸಿದ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜೆಸ್ಕಾಂನಲ್ಲಿ ಸುಮಾರು 2600 ಸ್ಥಾವರಗಳಿವೆ. ಎಲ್ಲ ಸ್ಥಾವರಗಳಿಗೆ ಮ್ಯಾಪಿಂಗ್ ಮಾಡಿ ಮೊಬೈಲ್ ಸಂಖ್ಯೆ ಗಣಕೀಕರಿಸುವಂತೆ ನಿದರ್ೇಶನ ನೀಡಿದರು.
ವಿದ್ಯುತ್ ಕಾರ್ಯಾಚರಣೆ ವಿಭಾಗದ ಮುಖ್ಯ ಅಭಿಯಂತರರು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಆಗಮಿಸಿದ್ದ ಎಲ್ಲರನ್ನು ಸ್ವಾಗತಿಸಿ ಸಭೆಯ ಉದ್ದೇಶ ವಿವರಿಸಿದರು.
ಮಹತ್ವದ ಸಭೆಗೆ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರು ಬರದಿರುವುದಕ್ಕೆ ವ್ಯವಸ್ಥಾಪಕ ನಿರ್ದೇ ಶಕರು ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ ಕಾರಣ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಅನೇಕ ಸಮಸ್ಯೆಗಳನ್ನು ವಿಭಾಗ ಮಟ್ಟದಲ್ಲಿ ಪರಿಹರಿಸಲಾಗಿದೆ. ಬಳ್ಳಾರಿ ವಲಯದ ಗ್ರಾಹಕರಿಗೆ ಕಲಬುರಗಿ ದೂರವಾಗಿದ್ದರಿಂದ ಅವರು ಬಂದಿಲ್ಲ ಎಂದು ತಿಳಿಸಿದರು. ಇನ್ಮುಂದೆ ಬಳ್ಳಾರಿ ವಲಯದ ಗ್ರಾಹಕರ ಸಭೆಯನ್ನು ಬಳ್ಳಾರಿಯಲ್ಲಿಯೇ ಮಾಡುವಂತೆ ರಾಗಪ್ರಿಯಾ ಆದೇಶಿಸಿದರು.
ಕಪನೂರಿನ ಸುಲೇಮಾನ್ ಸ್ಟೀಲ್ ಇಂಡಸ್ಟ್ರೀಜ್ನವರ ಸಮಸ್ಯೆಗೆ ಸ್ಪಂದಿಸಿದ ಎಂಡಿ ರಾಗಪ್ರಿಯಾ, ಅವರ ಸ್ಥಾವರ ವರ್ಷದಲ್ಲಿ ಕೆಲತಿಂಗಳು ಚಾಲನೆಯಲ್ಲಿ ಇರುತ್ತದೆ. ಹೀಗಾಗಿ ಉಳಿದ ಅವಧಿಗೆ ನಿಗದಿತ ಶುಲ್ಕ ಕಡಿಮೆ ಮಾಡಲು ತಿಳಿಸಿದರು. ವಿದ್ಯುತ್ ನಿಲುಗಡೆ ಮಾಹಿತಿ ಮೊದಲೇ ತಿಳಿಸಲು ಹೇಳಿದರು.
ದರ ಕಡಿಮೆ ಬಗ್ಗೆ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಿಗದಿತ ಶುಲ್ಕ ಕೆಇಆರ್ಸಿ ನಿದರ್ೇಶನದಂತೆ ನಿಗದಿಪಡಿಸಿದ್ದರಿಂದ ಕಡಿಮೆ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ಲಾಸ್ಟಿಕ್ ಬಳಕೆ ಕುಸಿದಿದ್ದರಿಂದ ತಮ್ಮ ಕಾರ್ಖಾನೆ ಮುಚ್ಚುವ ಸ್ಥಿತಿಯಲ್ಲಿದೆ. ಹೀಗಾಗಿ ನಾವು ರಾತ್ರಿ ವೇಳೆ ವಿದ್ಯುತ್ ಬಳಸುತ್ತೇವೆ. ಆದ್ದರಿಂದ ನಿಗದಿತ ಶುಲ್ಕ ಮನ್ನಾ ಮಾಡುವಂತೆ ಹರಿ ಪ್ಲಾಸ್ಟಿಕ್ ಇಂಡಸ್ಟ್ರೀಜ್ನವರು ಮಾಡಿದ ಮನವಿಗೆ, ಕೆಇಆರ್ಸಿ ನಿಯಮದ ಪ್ರಕಾರ ಶುಲ್ಕ ಮನ್ನಾ ಮಾಡಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಹೇಳಿದರು.
ಜೆಸ್ಕಾಂನಿಂದ ಗ್ರಾಹಕರಿಗೆ ಆಗುವ ಅಡಚಣೆಗಳ ಬಗ್ಗೆ ಮೊದಲೇ ಮಾಹಿತಿ ನೀಡುವಂತೆ ಮನವಿ ಮಾಡಿದ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯವರು, ಸಂವಾದ ಸಭೆಯನ್ನು ಜೆಸ್ಕಾಂ ಕಚೇರಿ ಬದಲು ಎಚ್ಟಿ ಗ್ರಾಹಕರು ಇರುವ ಸ್ಥಳದಲ್ಲಿಯೇ ಮಾಡುವಂತೆ ಕೋರಿದರು.
ಕಲಬುರಗಿಯ ಶಾಂತಾದೇವಿ ದಾಲ್ಮಿಲ್, ಎನ್ಈಕೆಆರ್ಟಿಸಿ ಕೊಪ್ಪಳ ವಿಭಾಗ, ಸಿಂಧನೂರಿನ ನವ್ಯಶ್ರೀ ಇಂಡಸ್ಟ್ರೀಜ್ನವರು ತಮ್ಮ ಅಹವಾಲುಗಳನ್ನು ಮಂಡಿಸಿದರು. ತಮ್ಮ ಸ್ಥಾವರ ವಸತಿ ಶಾಲೆಯಾಗಿದ್ದು, ಸದರಿ ಶಾಲೆ ಭದ್ರತಾ ಗೋಡೆಯ ಹತ್ತಿರ ವಿದ್ಯುತ್ ಕಂಬ ತುಂಬ ಬಾಗಿದೆ. ಸರಿಪಡಿಸುವ ಮೂಲಕ ಸಂಭವನೀಯ ಅನಾಹುತ ತಪ್ಪಿಸುವಂತೆ ಕಮಲಾಪುರದ ಶ್ರೀ ಸತ್ಯಸಾಯಿ ಸರಸ್ವತಿ ಶಿಕ್ಷಣ ಸಂಸ್ಥೆಯವರು ಮನವಿ ಮಾಡಿದರು.

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...