ಮೊಬೈಲ್​ ಅಂಗಡಿಯಲ್ಲಿ 10ಕ್ಕೂ ಹೆಚ್ಚು ಮೊಬೈಲ್​ ಕದ್ದ ಕಳ್ಳರು

 

ಮದ್ದೂರು: ಪಟ್ಟಣದ ಟಿಬಿ ಸರ್ಕಲ್ ಸಮೀಪದಲ್ಲಿರುವ ಎಸ್ಎಲ್​ಬಿ ಮೊಬೈಲ್ ಅಂಗಡಿಯಲ್ಲಿ ಮುಂಜಾನೆ 4.25ರ ವೇಳೆ ಕಳ್ಳರು ಮೊಬೈಲ್​ ಅಂಗಡಿಯ ಬೀಗ ಒಡೆದು ವಿವಿಧ ಕಂಪನಿಯ ಮೊಬೈಲ್​ಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.

ನಾಲ್ವರು ಕಳ್ಳರು ಅಂಗಡಿಯ ಬಾಗಿಲು ಒಡೆದು ಒಳಗೆ ನುಗ್ಗಿದ್ದು ವಿವಿಧ ಕಂಪನಿಯ ಬೆಲೆ ಬಾಳುವ 10ಕ್ಕೂ ಹೆಚ್ಚು ಮೊಬೈಲ್ ಹಾಗೂ ಹಣವನ್ನು ಕದ್ದು ಪರಾರಿಯಾಗಿದ್ದಾರೆ.

ಮೊಬೈಲ್ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಕಳ್ಳತನ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು ಈ ಸಂಬಂಧ  ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *