ಶಿವಮೊಗ್ಗ: ಮೊಬೈಲ್‌ನಲ್ಲಿ ಮಾತನಾಡುತ್ತ ಸಿಟಿ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಪಶ್ಚಿಮ ಸಂಚಾರ ಠಾಣೆ ಪೊಲೀಸರು 5 ಸಾವಿರ ರೂ. ದಂಡ ವಿಧಿಸಿದ್ದಾರೆ.
ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್ ಚಲಾಯಿಸಿದ್ದನ್ನು ಪ್ರಯಾಣಿಕರು ಸೆರೆ ಹಿಡಿದು ಪೊಲೀಸರಿಗೆ ನೀಡಿದ್ದರು. ವಿಡಿಯೋ ಪರಿಶೀಲಿಸಿದ ಸಂಚಾರ ಠಾಣೆ ಪೊಲೀಸರು, ಚಾಲಕನಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. ಸಿಪಿಐ ದೇವರಾಜ್ ಮಾರ್ಗದರ್ಶನದಲ್ಲಿ ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ಖಾಸಗಿ ಬಸ್ ಚಾಲಕನನ್ನು ಠಾಣೆಗೆ ಕರೆಸಿ ದಂಡ ಕಟ್ಟಿಸಿದ್ದಾರೆ. ಈ ವೇಳೆ ಚಾಲಕರಿಗೆ ಬಸ್ ಚಲಾಯಿಸುವಾಗ ಮೊಬೈಲ್ನಲ್ಲಿ ಮಾತನಾಡದಂತೆ ತಿಳಿವಳಿಕೆ ನೀಡಿ ಕಳುಹಿಸಿದ್ದಾರೆ.
