ಮೊದಲ ಪಂದ್ಯದಲ್ಲಿ ಸೋತ ಭಾರತ

ಪರ್ತ್: ಎ ತಂಡದ ಎದುರಿನ ಕಳೆದ ಪಂದ್ಯವನ್ನು ಡ್ರಾ ಮಾಡಿಕೊಂಡ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡದ ಎದುರಿನ ಮೊದಲ ಹಾಕಿ ಪಂದ್ಯದಲ್ಲಿ 0-4 ಗೋಲುಗಳ ಹೀನಾಯ ಸೋಲು ಕಂಡಿದೆ. ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಆಡಿದ್ದ ಕೊನೇ 2 ಪಂದ್ಯದಲ್ಲಿ ಸೋಲು ಮತ್ತು ಡ್ರಾ ಫಲಿತಾಂಶ ಕಂಡಿದ್ದ ಭಾರತ ಇಲ್ಲಿ ಪ್ರತಿರೋಧ ನೀಡುವ ಪ್ರಯತ್ನವನ್ನೂ ಮಾಡಲಿಲ್ಲ. ಆಸ್ಟ್ರೇಲಿಯಾದ ಗೋವರ್ಸ್ ಹಾಗೂ ಹೇಯ್ವರ್ಡ್ ತಲಾ 2 ಗೋಲು ದಾಖಲಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಪ್ರವಾಸದ ಕೊನೇ ಪಂದ್ಯವನ್ನಾಡಲಿದೆ.

Leave a Reply

Your email address will not be published. Required fields are marked *