ಚೆನ್ನೈ ಏಕದಿನ: ಆಸ್ಟ್ರೇಲಿಯಾಗೆ 282 ರನ್‌ ಗುರಿ, ಮಳೆ ಕಾಟ

ಚೆನ್ನೈ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಂಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಭಾರತ 281 ರನ್ ಗಳನ್ನು ಗಳಿಸಿದ್ದು, ಆಸ್ಟ್ರೇಲಿಯಾಗೆ 282 ರನ್‌ಗಳ ಗುರಿ ನೀಡಿದೆ.

ಈ ಮಧ್ಯೆ ಆಸ್ಟ್ರೇಲಿಯಾ ತನ್ನ ಇನ್ನಿಂಗ್ಸ್‌ ಆರಂಭಿಸಬೇಕಿದ್ದು, ನಿರೀಕ್ಷೆಯಂತೆ ಮಳೆ ಕಾಟ ಶುರುವಾಗಿದೆ. ಹಾಗಾಗಿ ಪಂದ್ಯ ಸ್ಥಗಿತಗೊಂಡಿದೆ.

ಚೆನ್ನೈನ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಂಟಿಂಗ್‌ ಮಾಡಿದ ಭಾರತ ಕೇವಲ 41 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.

ಈ ವೇಳೆ ತಂಡಕ್ಕೆ ಆಸರೆಯಾದ ಎಂ.ಎಸ್‌. ಧೋನಿ ಮತ್ತು ಹಾರ್ದಿಕ್‌ ಪಾಂಡ್ಯ ಶತಕದ ಜತೆಯಾಟ ಆಡಿ ಭಾರತ ಉತ್ತಮ ಮೊತ್ತ ಪೇರಿಸಲು ನೆರವಾದರು.

ಭಾರತ ಪರ ಅಜಿಂಕ್ಯ ರಹಾನೆ 5, ರೋಹಿತ್ ಶರ್ಮಾ 28, ವಿರಾಟ್ ಕೊಹ್ಲಿ 0, ಮನೀಶ್ ಪಾಂಡೆ 0, ಕೇದಾರ್ ಜಾದವ್ 40, ಹಾರ್ದಿಕ್ ಪಾಂಡ್ಯ 83 ರನ್ ಸಿಡಿಸಿದ್ದಾರೆ. ಇನ್ನು ಎಂಎಸ್ ಧೋನಿ 79, ಭುವನೇಶ್ವರ್ ಕುಮಾರ್ ಅಜೇಯ 32 ರನ್ ಗಳಿಸಿದ್ದಾರೆ.

ಆಸ್ಟ್ರೇಲಿಯಾ ಪರ ಕೋಲ್ಟರ್ ನೈಲ್ 3, ಸ್ಟೊಯಿನಿಸ್ 2 ಹಾಗೂ ಜಂಪಾ 1 ವಿಕೆಟ್ ಪಡೆದಿದ್ದಾರೆ. (ಏಜೆನ್ಸೀಸ್‌)

Leave a Reply

Your email address will not be published. Required fields are marked *