ಮೈಸೂರು ಬೇಸಿಗೆ ರೇಸ್‌ಗಳು ಆರಂಭ

ಮೈಸೂರು: ಮೈಸೂರು ರೇಸ್ ಕ್ಲಬ್‌ನಿಂದ ನಡೆಸಲಾಗುವ ಪ್ರಸಕ್ತ 2023ನೇ ಸಾಲಿನ ಒಟ್ಟು 8 ದಿನಗಳ ಮೈಸೂರು ಬೇಸಿಗೆ ರೇಸ್‌ಗಳು ಮೇ 26ರಂದು ಪ್ರಾರಂಭವಾಗಲಿವೆ.
ವಾರಕೊಮ್ಮೆ ಪ್ರತಿ ಶುಕ್ರವಾರ ರೇಸ್ ನಡೆಯಲಿದ್ದು, ಜುಲೈ 14ಕ್ಕೆ ಕೊನೆಗೊಳ್ಳಲಿದೆ. ಟ್ರೋಫಿಗಳು, ಕಪ್‌ಗಳ ಮೊತ್ತವೂ ಸೇರಿದಂತೆ ಒಟ್ಟು ಮೂರು ಕೋಟಿ ರೂ. ಸ್ಟೇಕ್ಸ್ ಹಣವನ್ನು ಈ ಸಾಲಿನ ಬೇಸಿಗೆ ರೇಸ್‌ಗಳಿಗೆ ಪ್ರಕಟಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಹಾಗೂ ಸೀನಿಯರ್ ಸ್ಟೂವರ್ಡ್ ವೈ.ಬಿ.ಗಣೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ಲಬ್‌ನ ಆಶ್ರಯದಲ್ಲಿರುವ 425 ರೇಸ್ ಕುದುರೆಗಳು ಹಾಗೂ ವಿವಿಧ ಸ್ಥಳದ ಸುಮಾರು 50 ರೇಸ್ ಕುದುರೆಗಳು ಈ ಸಾಲಿನ ಬೇಸಿಗೆ ರೇಸ್‌ಗಳಲ್ಲಿ ಭಾಗವಹಿಸಲಿವೆ. 24 ಸ್ಥಳೀಯ ತರಬೇತುದಾರರು (ಟ್ರೈನರ್‌ಗಳು) ಹಾಗೂ ಇತರ ಕೇಂದ್ರಗಳ ತರಬೇತುದಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ದೇಶದ ಪ್ರಮುಖ ಜಾಕಿಗಳು ಸೇರಿದಂತೆ 75ಕ್ಕೂ ಹೆಚ್ಚಿನ ಸ್ಥಳೀಯ ಜಾಕಿಗಳು ಈ ಬೇಸಿಗೆ ಋತುವಿನಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ. ಬೇಸಿಗೆ ರೇಸ್‌ಗಳು ನಡೆಯುವ ದಿನಗಳಂದು ಪ್ರವೇಶ ದರ 200 ರೂ. ಇದ್ದು, ಆಫ್‌ಕೋರ್ಸ್ ಬೆಟ್ಟಿಂಗ್ ದಿನಗಳಲ್ಲಿ ಪ್ರವೇಶ ದರ 100 ರೂ.ಗೆ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…