ಚಾಮರಾಜನಗರ: ಮೈಸೂರು ಅಭಿವೃದ್ಧಿಯಲ್ಲಿ ದಿವಾನರ ಕೊಡುಗೆ ಅತ್ಯಂತ ಪ್ರಮುಖವಾದದ್ದು ಎಂದು ರಾಮಶೇಷ ಪಾಠಶಾಲೆಯ ಪ್ರಾಂಶುಪಾಲ ಪ್ರದೀಪ್ ಕುಮಾರ್ ದೀಕ್ಷಿತ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 33ನೇ ದಿನದ ಕಾರ್ಯಕ್ರಮದಲ್ಲಿ ಮೈಸೂರಿನ ದಿವಾನರ ಕುರಿತು ಮಾತನಾಡಿದರು.
ರಾಜಮಾರ್ಗದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ ಭಾರತೀಯ ರಾಜವಂಶಗಳಲ್ಲಿ ಮೈಸೂರು ಒಡೆಯರ ಪಾತ್ರ ಮಾದರಿಯಾದದ್ದು, ನೀರಾವರಿ, ಕೃಷಿ, ಆರೋಗ್ಯ, ಶಿಕ್ಷಣ, ಮಹಿಳಾ ಶಿಕ್ಷಣ, ಕೈಗಾರಿಕೆಗೆ ಹಾಗೂ ಮೂಲಭೂತ ಸೌಕರ್ಯ ನೀಡಿದ ನಗರ ಮೈಸೂರು ಮತ್ತು ಬೆಂಗಳೂರು ಇಂದು ವಿಶ್ವ ಮಾದರಿಯಾಗಿರುವುದರಲ್ಲಿ ದಿವಾನರ ಕೊಡುಗೆ ಅಪಾರವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್, ದಿವಾನಗಳ ಕಾಲದಲ್ಲೇ ಸ್ಥಾಪನೆಯಾಯಿತು. ಸಿ.ವಿ.ರಂಗಾಚಾರ್ಲು, ಪೂರ್ಣಯ್ಯ, ಕೆ.ಶೇಷಾದ್ರಿ ಅಯ್ಯರ್, ಸರ್.ಎಂ.ವಿಶ್ವೇರಯ್ಯ, ಮಿರ್ಜಾ ಇಸ್ಮಾಯಲ್, ಮುಂತಾದರ ದಿವಾನ ಕಾಲಘಟ್ಟದಲ್ಲಿ ಅಭಿವೃದ್ಧಿ ಪಡಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ರೇದಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ ಗೋಪಾಲ್, ಬಸವರಾಜನಾಯಕ, ಲಿಂಗರಾಜು, ಮಹೇಶ್‌ಗೌಡ, ಸರಸ್ವತಿ, ರವಿಚಂದ್ರಪ್ರಸಾದ್ ಕಹಳೆ, ಶಿವಲಿಂಗಮೂರ್ತಿ, ಬಾಬಣ್ಣ, ನಂಜುಂಡೇಶೆಟ್ಟಿ ಇತರರು ಹಾಜರಿದ್ದರು.