ಮೇ.5 ರಿಂದ ಜೆಸಿಐ ಪೊನ್ನಂಪೇಟೆ ಗೋಲ್ಡನ್​ನ 12ನೇ ಜೇಸಿ ಆಟೋಕ್ರಾಸ್

ಮಡಿಕೇರಿ: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಮೇ.5ರಿಂದ ವಿರಾಜಪೇಟೆ ತಾಲ್ಲೂಕಿನ ಬೇಗೂರು ಕೊಲ್ಲಿ ಗ್ರಾಮದಲ್ಲಿ ಜೇಸಿ ಆಟೋಕ್ರಾಸ್-2019 ನಡೆಯಲಿದೆ ಎಂದು ಜೆಸಿಐ ಪೊನ್ನಂಪೇಟೆ ಗೋಲ್ಡನ್ ಮಾಜಿ ಉಪಾಧ್ಯಕ್ಷ ಮಂಡಂಗಡ ಆಶೋಕ್ ಮಾಚಯ್ಯ ತಿಳಿಸಿದ್ದಾರೆ.

11 ವರ್ಷಗಳಿಂದ ಯಶಸ್ವಿಯಾಗಿ ರ‌್ಯಾಲಿ ಆಯೋಜಿಸಲಾಗಿದೆ. ಈ ಬಾರಿ ಬೇಗೂರು ಕೊಲ್ಲಿಯ ತೀತಿರ, ಚೆಕ್ಕೇರ, ಐಪುಮಾಡ, ಮತ್ತು ಚೇಂದಿರ ಕುಟುಂಬಸ್ಥರ ಗದ್ದೆಯಲ್ಲಿ 1.25 ಕಿ.ಮೀ ಉದ್ದದ ಟ್ರ್ಯಾಕ್ ಸಿದ್ದಗೊಳಿಸಲಾಗಿದೆ. ಆಟೋಕ್ರಾಸ್‌ನಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ರ‌್ಯಾಲಿ ಪಟುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಿಭಾಗದಲ್ಲಿ ರ‌್ಯಾಲಿ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದ್ವಿಚಕ್ರ ವಿಭಾಗದಲ್ಲಿ ಕೂರ್ಗ್ ಲೋಕಲ್ ಓಪನ್, ಟೂ ಸ್ಟ್ರೋಕ್ ಓಪನ್, ಫೋರ್ ಸ್ಟ್ರೋಕ್ ಓಪನ್, ಇಂಡಿಯನ್ ಓಪನ್, ಎಕ್ಸ್ ಪರ್ಟ್ ಕ್ಲಾಸ್, ನೋವಿಸ್ ಕ್ಲಾಸ್ ವಿಭಾಗದಲ್ಲಿ ನಡೆಯಲಿದೆ. ನಾಲ್ಕು ಚಕ್ರ ರ‌್ಯಾಲಿ ಕೂರ್ಗ್ ಲೋಕಲ್ ಒಪನ್, 800 ಸಿಸಿ ಕ್ಲಾಸ್, 1,001-1,400 ಸಿಸಿ ಕ್ಲಾಸ್, 1,401-1,600 ಸಿಸಿ ಕ್ಲಾಸ್, ಇಂಡಿಯನ್ ಒಪನ್ ಕ್ಲಾಸ್, ಲೇಡಿಸ್ ಕ್ಲಾಸ್, ಎಸ್ ಯುವಿ ಓಪನ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ರ‌್ಯಾಲಿಯ ಎಲ್ಲಾ ವಿಭಾಗದಲ್ಲಿ ವಿಜೇತರಾದವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ನಗದು ಹಾಗೂ ಅಕರ್ಷಕ ಟ್ರೋಫಿ ನೀಡಲಾಗುವುದು. ಅತೀ ವೇಗದ ಚಾಲಕ, ಅತೀ ವೇಗದ ಸವಾರರಿಗೆ ವಿಶೇಷ ಬಹುಮಾನ ಇರಲಿದೆ. ಈ ವರ್ಷ 160ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ರ‌್ಯಾಲಿಗೆ ಸುಮಾರು 5 ಲಕ್ಷ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9480085060, 9480426149, 9448647444 ಸಂಪರ್ಕಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ಮಾಜಿ ಅಧ್ಯಕ್ಷ ಕೊಟ್ಟಂಗಡ ರಾಜ ಸುಬ್ಬಯ್ಯ, ಮಾಜಿ ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ ಇದ್ದರು.

Leave a Reply

Your email address will not be published. Required fields are marked *