ಕೊಡವ ಕುಟುಂಬಗಳಿಗಾಗಿ ಕಂಜಿತಂಡ ಕುಟುಂಬದ ಬ್ಯಾಡ್ಮಿಂಟನ್​ ಟೂರ್ನಿ: ಮೇ 1ರಿಂದ ಆರಂಭ

ಮಡಿಕೇರಿ: ಕಂಜಿತಂಡ ಕುಟುಂಬದ ವತಿಯಿಂದ ಕೊಡವ ಕುಟುಂಬಗಳಿಗೆ ’ಕಂಜಿತಂಡ ಷಟಲ್​ ಬ್ಯಾಡ್ಮಿಂಟನ್​ ಕಪ್ ಟೂರ್ನಿ ಮೇ.1ರಿಂದ 5ರವರೆಗೆ ಬಿಟ್ಟಂಗಾಲದ ಹೆಲ್ತ್‌ಕ್ಲಬ್‌ನಲ್ಲಿ ನಡೆಯಲಿದೆ ಎಂದು ಕಂಜಿತಂಡ  ಕುಟುಂಬದ ಅಧ್ಯಕ್ಷ ಕೆ. ಅಯ್ಯಪ್ಪ ತಿಳಿಸಿದ್ದಾರೆ.

ಕೊಡವ ಕುಟುಂಬದ ಸದಸ್ಯರಿಗೆ 5 ದಿನ ಡಬಲ್ಸ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಒಂದು ಕುಟುಂಬದಿಂದ 1 ತಂಡಕ್ಕೆ ಅವಕಾಶವಿದೆ. ಆಸಕ್ತರು ಏ.27ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಮೈದಾನ ಶುಲ್ಕ 800 ರೂ. ನಿಗದಿಪಡಿಸಲಾಗಿದೆ. ಟೂರ್ನಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಯಸ್ಸಿನ ಮಿತಿ ಇಲ್ಲ ಎಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿ ಹಾಗೂ ನಗದು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಾಂಚೇರಿರ ವಿಠಲ ನಾಣಯ್ಯ-9845337842,  ಅರೆಯಡ  ಗಿರೀಶ್-9740663111,  ಪ್ರಕಾಶ್ ಮಂದಣ್ಣ-9535536795 ಸಂಪರ್ಕಿಸಬಹುದು.

ಕ್ರೀಡಾಕೂಟದ ಸಂಚಾಲಕ ಕಂಜಿತಂಡ  ಕೆ ಪ್ರಕಾಶ್‌ ಮಂದಣ್ಣ, ಪ್ರಮುಖರಾದ ಚೇಂದ್ರಿಮಾಡ ಮಧು ಗಣಪತಿ, ಚರಣ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *