ಮೇರು ವ್ಯಕ್ತಿತ್ವದ ಶಿವಶರಣ ಕಿನ್ನರಿ ಬ್ರಹ್ಮಯ್ಯ

blank

ಚಿತ್ರದುರ್ಗ: ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಯಾರು ಕಾಯಕ ಮಾಡುತ್ತಾರೋ ಅವರು ಅವಮಾನ ಮತ್ತು ಅನುಮಾನಗಳನ್ನು ಸಹಿ ಸುವುದಿಲ್ಲವೆಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಎಸ್‌ಜೆಎಂ ರೆಸಿಡೆನ್ಸಿಯಲ್ ಶಾಲೆ ಸಹಯೋಗದಲ್ಲಿ ಶ್ರೀ ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಲೀಲಾ ವಿಶ್ರಾಂತಿ ತಾಣದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಶರಣ ಕಿನ್ನರಿ ಬ್ರಹ್ಮಯ್ಯ ಅವರ ಜಯಂತಿ ಆಚರಣೆ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವೃತ್ತಿ ಬದುಕಿನಲ್ಲಾದ ಒಂದು ಅನುಮಾನ ಸಹಿಸಲಾಗದೆ ಶಿವಶರಣ ಕಿನ್ನರಿ ಬ್ರಹ್ಮಯ್ಯ ಅಕ್ಕಸಾಲಿಗ ವೃತ್ತಿಯನ್ನೇ ತ್ಯಜಿಸಿ ಕಲ್ಯಾಣಕ್ಕೆ ಬರುತ್ತಾರೆ. ಅಲ್ಲಿ ಕಿನ್ನರಿ ನುಡಿಸುತ್ತ ಬಂದ ಹಣದಲ್ಲಿ ದಾಸೋಹ ಮಾಡಿದ ಮೇರುವ್ಯಕ್ತಿತ್ವ, ಘನಮಹಿಮ ಕಿನ್ನರಿ ಬ್ರಹ್ಮಯ್ಯನವರು ಎಂದು ಬಣ್ಣಿಸಿದರು.
ಸಮ್ಮುಖ ವಹಿಸಿದ್ದ ಕಲಬುರಗಿ ಜಿಲ್ಲೆ ಚಿಗರಹಳ್ಳಿ ಮರುಳಶಂಕರದೇವರ ಪೀಠದ ಸಿದ್ಧಬಸವ ಕಬೀರ ಸ್ವಾಮೀಜಿ ಮಾತನಾಡಿ, ಕಿನ್ನರಿ ಬ್ರ ಹ್ಮಯ್ಯ ಅಂದರೆ ವಾಸ್ತವವಾದಿ, ನಿಷ್ಠಾವಂತ, ಪರಿಪೂರ್ಣ, ಪಕ್ವ ವ್ಯಕ್ತಿತ್ವವುಳ್ಳ ಶರಣ ಎಂದು ತಿಳಿಸಿದರು.
ಸಮ್ಮುಖ ವಹಿಸಿದ್ದ ಗುರುಮಠ ಕಲ್‌ನ ಖಾಸಾ ಮುರುಘಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು.
ವಿವಿಧ ಸಮುದಾಯಗಳ ಮುಖಂಡರಾದ ಆನಂದ್, ಬಸವರಾಜಕಟ್ಟಿ, ಡಾ. ನವೀನ್ ಮಸ್ಕಲ್, ಶಿಕ್ಷಕರಾದ ಬಿ.ಆರ್. ಗಾಯತ್ರಿ, ಜವಳಿ ಶಾಂತಕುಮಾರ್, ಭಾರತಿ, ಶಾಂತಲಾದೇವಿ, ಜಿ.ವಿ. ಮಂಗಳಾ ಮತ್ತಿತರರು ಇದ್ದರು.
ಶಿಕ್ಷಕಿಯರಾದ ಎಂ. ಶಿಲ್ಪಾ ಮತ್ತು ಭಾಗ್ಯಲಕ್ಷ್ಮೀ ಪ್ರಾರ್ಥಿಸಿದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಕಿನ್ನರಿ ಬ್ರಹ್ಮಯ್ಯನವರ ವಚನಗಳನ್ನು ಹಾಡಿದರು. ಶಿಕ್ಷಕಿ ಅನಿತಾಕುಮಾರಿ ಸ್ವಾಗತಿಸಿ, ಮುಖ್ಯಶಿಕ್ಷಕಿ ಪರಂಜ್ಯೋತಿ ವಂದಿಸಿದರು. ಶಿಕ್ಷಕಿ ಅನಿತಾ ನಿರೂಪಿಸಿದರು.

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…