ಮೇದಕ್ನಲ್ಲಿ ತ್ರಿವಳಿ ಕೊಲೆ


ಸೇಡಂ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಸೇಡಂ ತಾಲೂಕಿನ ಮೇದಕ್ ಗ್ರಾಮದಲ್ಲಿ ಬುಧವಾರ ತಂದೆ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಲಾಗಿದೆ. ದಾಯಾದಿಗಳೇ ಈ ಕೃತ್ಯ ನಡೆಸಿದ್ದು, ಸುದ್ದಿ ಕೇಳುತ್ತಲೇ ಜನ ತಲ್ಲಣಗೊಂಡಿದ್ದಾರೆ.
ಕಲಬುರಗಿ ತಾಲೂಕಿನ ಬೆಳಗುಂಪಾ ಗ್ರಾಮದಲ್ಲಿ ಕೆಲ ದಿನಗಳ ಹಿಂದಷ್ಟೆ ನಡೆದಿದ್ದ ಡಬಲ್ ಮರ್ಡರ್ ಜನರ ಸ್ಮೃತಿಪಟಲದಿಂದ ಮರೆಯಾಗುವ ಮುನ್ನವೇ ಜಿಲ್ಲೆಯಲ್ಲಿ ಮತ್ತೆ ತ್ರಿಬಲ್ ಮರ್ಡರ್ ನಡೆದಿರುವುದು ಮತ್ತಷ್ಟು ಗಾಬರಿ ಹುಟ್ಟಿಸಿದೆ.
ಮೇದಕ್ನ ಕೃಷಿಕರಾದ ಮಲಕಪ್ಪ ಚಿನ್ನಯ್ಯ ಯಂಗನಮನಿ (59), ಅವರ ಮಕ್ಕಳಾದ ಚಿನ್ನಪ್ಪ (27) ಮತ್ತು ಶಂಕ್ರಪ್ಪ (26) ಹತ್ಯೆಯಾದವರು. ಹುಟ್ಟುತ್ತ ಸಹೋದರರು, ಬೆಳೆಯುತ್ತ ದಾಯಾದಿಗಳು ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.
ಬುಧವಾರ ಬೆಳಗ್ಗೆ ತಂದೆ ಮಕ್ಕಳು ಹೊಲವನ್ನು ಹದ ಮಾಡಲು ಹೋದಾಗ ಅಸ್ತಿ ವಿಷಯದಲ್ಲಿ ಹಲವು ದಿನಗಳಿಂದ ಜಗಳವಾಡುತ್ತಿದ್ದ ಮಲಕಪ್ಪನ ಸಹೋದರರು ಮತ್ತು ಅವರ ಮಕ್ಕಳು ಬಂದು ನಮ್ಮ ಪಾಲಿನ ಹೊಲ ನಮ್ಮ ಹೆಸರಿಗೆ ಮಾಡಿಕೊಡುವಂತೆ ಕೇಳಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಜತೆಗೆ ತಂದಿದ್ದ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಕ್ತ ಮಡುವಿನಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಲೇ ಮಲಕಪ್ಪ ಅವರು ಸೊಸೆ ಲಕ್ಷ್ಮೀ ಮೊಬೈಲ್ಗೆ ಕರೆ ಮಾಡಿ ಕೂಡಲೇ ಆಟೋ ತೆಗೆದುಕೊಂಡು ಬರುವಂತೆ ಹೇಳಿದ್ದಾನೆ. ಲಕ್ಷ್ಮೀ ಬಂದು ನೋಡಿದರೆ ಎಲ್ಲರೂ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಅಷ್ಟರಲ್ಲಿ ಆಕೆ ಪತಿ ಶಂಕ್ರಪ್ಪ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮಾವನಿಗೆ ನೀರು ಹಾಕುತ್ತಲೇ ಮಲಕಪ್ಪ ಸಹ ಪ್ರಾಣ ಬಿಟ್ಟ ಎಂದು ಲಕ್ಷ್ಮೀ ಪೊಲೀಸರ ಮುಂದೆ ಹೇಳಿದ್ದಾರೆ. ಮೈದುನ ಚಿನ್ನಪ್ಪ ಸೇಡಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಜಿಪಿ ಮನೀಷ್ ಖಬರ್ೀಕರ್, ಎಸ್ಪಿ ಯಡಾ ಮಾಟರ್ಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಎಎಸ್ಪಿ ಅಕ್ಷಯ ಹಾಕೆ, ಇನ್ಸ್ಪೆಕ್ಟರ್ ತಮ್ಮರಾಯ ಪಾಟೀಲ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಲೆಗೆ ಕಾರಣರಾದ ಸಹೋದರರಾದ ಆಶಪ್ಪ, ರಾಮುಲು ಮತ್ತು ಅವರ ಮಕ್ಕಳಾದ ಹಣಮಂತ, ಶರಣಪ್ಪ, ಸೀನಪ್ಪ, ಲಾಲಮ್ಮ, ಪದ್ಮಮ್ಮ ಮತ್ತು ಪವಿತ್ರಾ ವಿರುದ್ಧ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೇದಕ್ನಲ್ಲಿ ನಡೆದ ತ್ರಿವಳಿ ಕೊಲೆಗೆ ಸಹೋದರರ ನಡುವಿನ ಆಸ್ತಿ ಕಲಹವೇ ಕಾರಣವಾಗಿದೆ. ಮೃತರ ಕುಟುಂಬದವರು ನೀಡಿದ ದೂರಿನಂತೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿ ಕಾಯರ್ಾಚರಣೆ ಆರಂಭಿಸಲಾಗಿದೆ.
| ಯಡಾ ಮಾಟರ್ಿನ್ ಮಾರ್ಬನ್ಯಾಂಗ್ ಎಸ್ಪಿ

ಯುಗಾದಿ ದಿನ ನಡೆದಿತ್ತು ಮಾತುಕತೆ
ಆಶಪ್ಪ, ರಾಮುಲು, ಚಿನ್ನಪ್ಪ, ಲಾಲಪ್ಪ ಹಾಗೂ ಕೊಲೆಯಾಗಿರುವ ಮಲಕಪ್ಪ ಸಹೋದರರು. ಅವರ ನಡುವೆ 37 ಎಕರೆ ಜಮೀನಿದೆ. ಈ ಜಮೀನು ಎಲ್ಲರೂ ಹಂಚಿಕೊಂಡಿದ್ದು, ಅವರವರ ಜಮೀನಿನಲ್ಲಿ ಉಳುಮೆ ಮಾಡಿಕೊಂಡಿದ್ದಾರೆ. ಆದರೆ ಅವರವರ ಹೆಸರಿಗೆ ಮಾತ್ರ ನೋಂದಣಿ ಆಗಿರಲಿಲ್ಲ. ಎಲ್ಲ ಹೊಲ ಮಲಕಪ್ಪ ಹೆಸರಿನಲ್ಲೇ ಇದೆ. ತಮ್ಮ ಹೆಸರಿಗೆ ಮಾಡಿಕೊಡುವಂತೆ ಉಳಿದ ಸಹೋದರರು ಮತ್ತವರ ಮಕ್ಕಳು ಒತ್ತಾಯಿಸುತ್ತಿದ್ದರು. ಹೊಲ ನೋಂದಣಿ ಕುರಿತು ಯುಗಾದಿ ದಿನ ಮಾತುಕತೆ ನಡೆದಿತ್ತು. ನೋಂದಣಿಗೆ ತಗಲುವ ವೆಚ್ಚದ 50 ಸಾವಿರ ರೂ. ನೀಡುವಂತೆ ಮಲಕಪ್ಪ ಹೇಳಿದ್ದರು. ಕೊಟ್ಟರೆ ಎಲ್ಲರ ಹೆಸರಿಗೆ ಮಾಡಿಕೊಡುವುದಾಗಿ ತಿಳಿಸಿದ್ದರು. ಹಣವನ್ನು ಯಾರೂ ಕೊಡದಿದ್ದರಿಂದ ನೋಂದಣಿ ಆಗಿರಲಿಲ್ಲ. ಈ ವಿಷಯವೇ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ ಕಂಡಿದೆ.