ಮೈಸೂರು ರೇಷ್ಮೆಗೆ ಹೆಚ್ಚಿನ ಬೇಡಿಕೆ

Latest News

ಅಲೆ ತಡೆಗೋಡೆ ಕಾಮಗಾರಿಗೆ ವಿರೋಧ

ಕಾರವಾರ: ತಖೋಲ್ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆಗಾಗಿ ಟ್ಯಾಗೋರ್ ಕಡಲ ತೀರದಿಂದ ಅಲೆ ತಡೆಗೋಡೆ ಕಾಮಗಾರಿ ಆರಂಭವಾಗಿದೆ. ಅದಕ್ಕೆ ಮೀನುಗಾರರು ವಿರೋಧ...

ಪ್ರೇಮಲೋಕ 2ರಲ್ಲಿ ಕ್ರೇಜಿಸ್ಟಾರ್ ಸನ್ಸ್!

ಬೆಂಗಳೂರು: 1987ರಲ್ಲಿ ತೆರೆಕಂಡ ಮ್ಯೂಸಿಕಲ್ ಹಿಟ್ ‘ಪ್ರೇಮಲೋಕ’ ಸಿನಿಮಾ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆ ಇಲ್ಲ. ಆ ಸಿನಿಮಾ ನಿರ್ವಿುಸಿದ ದಾಖಲೆ ಒಂದೆರಡಲ್ಲ....

ರಫೇಲ್ ರಗಳೆ ಅಂತ್ಯ

ರಫೇಲ್ ಪ್ರಕರಣದಲ್ಲಿ ಸರ್ಕಾರಕ್ಕೆ ನೀಡಿದ್ದ ಕ್ಲೀನ್​ಚಿಟ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಈ ಬಗ್ಗೆ ಯಾವುದೇ...

ಅನನ್ಯ ಸಾಂಸ್ಕೃತಿಕ ಪ್ರಜ್ಞೆಯ ಕನಕದಾಸ

ಕನಕದಾಸರು 16ನೇ ಶತಮಾನದ ಕರ್ನಾಟಕದಲ್ಲಿ ಆಗಿ ಹೋದ ಭಕ್ತಕವಿ. ಕೀರ್ತನೆ, ನಳಚರಿತೆ, ರಾಮಧಾನ್ಯ ಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಹಾಗೂ ಅನೇಕ...

ಒಳ್ಳೆಯದನ್ನು ಮಾಡುವುದೇ ಧರ್ಮದ ಸರ್ವಸ್ವ

ಪಶ್ಚಿಮದ ಭೋಗಭೂಮಿಯಲ್ಲಿ ಮೈಕೊಡವಿ ನಿಂತ ಈ ಪೂರ್ವರಾಷ್ಟ್ರದ ತ್ಯಾಗಮೂರ್ತಿ ಅವರುಗಳಿಗೆ ತ್ಯಾಗ-ಯೋಗವನ್ನು ಬೋಧಿಸಿದರು. ಅಲ್ಲದೆ ಅಲ್ಲಿ ತನ್ನ ಮಾತೃಭೂಮಿಗಾಗಿ ವೈಯಕ್ತಿಕ ಜೀವನವನ್ನೇ ಸಾರ್ಥಕವಾಗಿ...

ಶಿವಮೊಗ್ಗ: ರಾಜ್ಯ ಸರ್ಕಾರದ ಹೆಮ್ಮೆಯ ಸಂಸ್ಥೆ ಮೈಸೂರು ಸಿಲ್ಕ್ಸ್ಗೆ 110 ವರ್ಷಗಳ ಭವ್ಯ ಇತಿಹಾಸವಿದೆ. ಇದು ನಾಡಿನ ಶ್ರೇಷ್ಠತೆ ಹಾಗೂ ಪರಂಪರೆಯ ಪ್ರತೀಕ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಹೇಳಿದರು. ನಗರದ ಕರ್ನಾಟಕ ಸಂಘದಲ್ಲಿ ಜು. 30ರವರೆಗೆ ಹಮ್ಮಿಕೊಂಡಿರುವ ಮೈಸೂರು ಸಿಲ್ಕ್ೕರೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಧಾರ್ವಿುಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಮೈಸೂರು ರೇಷ್ಮೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದರು. ಮೈಸೂರು ಬ್ರಾಂಡ್ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಜಿಯೋ ಟ್ಯಾಗ್ ಅಳವಡಿಸಲು ಅನುಮತಿ ನೀಡಿದೆ. ಈ ಉತ್ಪನ್ನಗಳ ಖರೀದಿಯಿಂದ ಗ್ರಾಹಕರು ಸಂತುಷ್ಟರಾಗಿದ್ದಾರೆ. ಗ್ರಾಹಕರ ಬೇಡಿಕೆಯ ಪ್ರಮಾಣದಲ್ಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಸುವುದು ಸಂಸ್ಥೆಯಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮೈಸೂರು ಸಿಲ್ಕ್ ಉತ್ಪನ್ನಗಳು ಜನಸಾಮಾನ್ಯರ ಕೈಗೆಟುವ ದರದಲ್ಲಿ ಸುಲಭವಾಗಿ, ಸರಳವಾಗಿ ದೊರೆಯುವಂತಾಗಬೇಕು. ಅಂತೆಯೇ ಗ್ರಾಹಕರು ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸುವ ಮೂಲಕ ರಾಜ್ಯದ ಹಿಪ್ಪುನೇರಳೆ ಬೆಳೆಗಾರರನ್ನು ಹಾಗೂ ಹೆಮ್ಮೆಯ ಮೈಸೂರು ಸಿಲ್ಕ್ ಸಂಸ್ಥೆಯ ಚಟುವಟಿಕೆಯನ್ನು ಬೆಂಬಲಿಸಬೇಕು ಎಂದರು. ರಾಮನಗರ, ಕೊಳ್ಳೆಗಾಲದಲ್ಲಿ ಬೆಳೆಯುವ ಗುಣಮಟ್ಟದ ಕಚ್ಚಾರೇಷ್ಮೆಯನ್ನು ನೇರವಾಗಿ ರೈತರಿಂದ ಹೆಚ್ಚಿನ ದರದಲ್ಲಿ ಸಂಸ್ಥೆಯೇ ಖರೀದಿಸಿ, ಕೌಶಲ ಹೊಂದಿರುವ ಶ್ರಮಿಕರಿಂದ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಿ, ಗ್ರಾಹಕರಿಗೆ ಒದಗಿಸುತ್ತಿದೆ ಎಂದು ತಿಳಿಸಿದರು. ಮೈಸೂರು ಸಿಲ್ಕ್ಸ್ ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕ ಭಾನುಪ್ರಸಾದ್ ಮಾತನಾಡಿ, ಮೈಸೂರು ಸಿಲ್ಕ್ ತನ್ನ ಉತ್ಪನ್ನಗಳಲ್ಲಿ ಸದಾ ಶ್ರೇಷ್ಠತೆ ಮೆರೆದಿದೆ. ರಾಜ್ಯ ಸರ್ಕಾರದಿಂದ ಕೊಡಲಾಗುವ ಮುಖ್ಯಮಂತ್ರಿಗಳ ವಾರ್ಷಿಕ ರತ್ನ ಪ್ರಶಸ್ತಿಗೆ ಈ ವರ್ಷವೂ ಸಂಸ್ಥೆ ಪಾತ್ರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.50 ವರ್ಷಗಳ ಹಿಂದೆ ಮೈಸೂರು ಸಿಲ್ಕ್ ರೇಷ್ಮೆಯನ್ನು ಖರೀದಿಸಿದ ಗ್ರಾಹಕರಿಂದ ಆ ಸೀರೆಗಳನ್ನು ಪಡೆದು ವಿಧಾನಸೌಧದ ಎದುರು ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗುವುದು. ಬಳಿಕ 20 ಸಾವಿರ ನಗದು ಪುರಸ್ಕಾರದೊಂದಿಗೆ ಸೀರೆಯನ್ನು ಅದೇ ಗ್ರಾಹಕರಿಗೆ ಹಿಂದಿರುಗಿಸಲಾಗುವುದು ಎಂದರು. ಕಳೆದ ವರ್ಷ ಮೈಸೂರು ಸಿಲ್ಕ್ ಸಂಸ್ಥೆಯು 199 ಕೋಟಿ ರೂ. ವಹಿವಾಟು ನಡೆಸಿ, ದಾಖಲೆ ನಿರ್ವಿುಸಿದೆ. ಪ್ರಸ್ತುತ ಸಾಲಿನಲ್ಲಿ ಬಿಡುಗಡೆಗೊಳಿಸಿರುವ ಹೊಸ ವಿನ್ಯಾಸದ ಸೀರೆಗಳು ಗ್ರಾಹಕರ ಅಭಿರುಚಿ ಹಾಗೂ ಅಭಿಪ್ರಾಯವನ್ನು ಆಧರಿಸಿ ತಯಾರಿಸಲಾಗಿದ್ದು, ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಹೊಂದಿವೆ ಎಂದು ತಿಳಿಸಿದರು.

- Advertisement -

Stay connected

278,469FansLike
563FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...