ಮೆಡಿಕಲ್ ಕಾಲೇಜ್ ನಿರ್ಮಾಣ ಎಲ್ಲಿ ?

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅನುಮತಿ ದೊರೆತಿದೆ. ಆದರೆ, ಸ್ಥಳ ನಿಗದಿಯೇ ಗೊಂದಲದ ಗೂಡಾಗಿ ಪರಿಣಮಿಸಿದೆ.

2014ರಲ್ಲಿಯೇ ರಾಜ್ಯ ಸರ್ಕಾರ ಹಾವೇರಿ ಹಾಗೂ ರಾಜ್ಯದ ಆರು ಜಿಲ್ಲೆಗಳಿಗೆ ಮೆಡಿಕಲ್ ಕಾಲೇಜ್ ಘೊಷಣೆ ಮಾಡಿತ್ತು. ಅದರಂತೆ ಹಾವೇರಿ ತಾಲೂಕು ದೇವಗಿರಿ ಯಲ್ಲಾಪುರದ ಬಳಿಯ ಸರ್ವೆ ನಂ. 13ರಲ್ಲಿ 12 ಎಕರೆ 26 ಗುಂಟೆ ಜಮೀನನ್ನು ಹಾವೇರಿ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜ್ ಸೈನ್ಸ್​ಗೆ 2014ರಲ್ಲಿಯೇ ಕಾಯ್ದಿರಿಸಲಾಗಿತ್ತು. ನಂತರ ಅನುದಾನ ಸಿಗದೇ ನನೆಗುದಿಗೆ ಬಿದ್ದಿತ್ತು. ಕಳೆದ ಡಿಸೆಂಬರ್​ನಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಂಟಿಯಾಗಿ 325 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿವೆ.

ಆದರೆ, ಈಗ ಜಾಗದ ವಿವಾದ ಎದ್ದಿದ್ದು, ದೇವಗಿರಿಯಲ್ಲಾಪುರ ಬಳಿ ಗುರುತಿಸಿದ ಜಾಗವು ತಗ್ಗು ಪ್ರದೇಶದಲ್ಲಿದೆ. ಹಾವೇರಿಯಿಂದ ದೂರವಿದೆ. ಅಲ್ಲದೆ, ಜಿಲ್ಲಾಸ್ಪತ್ರೆಗೂ ದೂರವಾಗಲಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನೆಲೋಗಲ್ಲ ಬಳಿಯ ಸರ್ಕಾರಿ ಜಾಗದಲ್ಲಿ ನಿರ್ವಿುಸಿದರೆ ಲ್ಲಾಸ್ಪತ್ರೆಗೂ ಸಮೀಪವಾಗಲಿದೆ. ಕಾಲೇಜ್​ಗೆ ಬರುವ, ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗಲಿದೆ ಎಂಬ ಕೂಗೆದ್ದಿದೆ. ಇದಕ್ಕೆ ಸ್ಥಳೀಯ ಶಾಸಕರೂ ಧ್ವನಿಗೂಡಿಸಿದ್ದು, ನೆಲೋಗಲ್ಲ ಬಳಿಯ ಜಾಗವೇ ಸೂಕ್ತ ಎಂದಿದ್ದಾರೆ.

ನವೆಂಬರ್​ನಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಎದುರು ಈ ವಿಷಯ ಚರ್ಚೆಯಾಗಿ ಬೆಳಗಾವಿ ವಿಭಾಗೀಯ ಆಯುಕ್ತರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ಯಾವ ಜಾಗ ಸೂಕ್ತ ಎಂಬ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿದ್ದರು. ನಂತರ ಅವರು ಬಂದು ಸ್ಥಳ ಪರಿಶೀಲಸಿದ್ದಾರೆ. ಆದರೆ, ಈವರೆಗೂ ಯಾವುದೇ ನಿರ್ಣಯ ಕೈಗೊಂಡಿಲ್ಲ.

ಜಾಗ ಅಂತಿಮವಾಗುವ ಮುನ್ನವೇ ಟೆಂಡರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಘಟಕವು ಜ. 29ರಂದು ಹಾವೇರಿ ತಾಲೂಕಿನಲ್ಲಿ 284 ಕೋಟಿ ರೂ. ವೆಚ್ಚದಲ್ಲಿ ಮೆಡಿಕಲ್ ಕಾಲೇಜ್ ಕಟ್ಟಡ, ಬಾಲಕ, ಬಾಲಕಿಯರ ವಸತಿ ನಿಲಯ, ಬೋಧಕ, ಬೋಧಕೇತರ ಸಿಬ್ಬಂದಿ ವಸತಿ ನಿಲಯಗಳ ನಿರ್ವಣಕ್ಕೆ ಟೆಂಡರ್ ಕರೆದಿದೆ. ಈ ಟೆಂಡರ್​ನಲ್ಲಿ ನಿರ್ಮಾಣ ಸ್ಥಳವನ್ನು ನಮೂದಿಸಿಲ್ಲ. ಇದು ಸ್ಥಳದ ಗೊಂದಲ ಮತ್ತಷ್ಟು ರ್ಚಚಿತವಾಗುವಂತೆ ಮಾಡಿದೆ.

ದೇವಗಿರಿಯಲ್ಲಾಪುರ ಬಳಿ ಗುರುತಿಸಿರುವ ಜಾಗ ಜಿಲ್ಲಾಸ್ಪತ್ರೆಯಿಂದ ದೂರವಿದೆ. ವಾಹನಗಳ ಸಂಚಾರಕ್ಕೂ ತೊಂದರೆಯಾಗಲಿದೆ. ಅಲ್ಲಿ ನಿರ್ವಿುಸಿದರೆ ಗುಡ್ಡ ಸುತ್ತಿ ಮೈಲಾರಕ್ಕೆ ಹೋಗುವಂತಾಗುತ್ತದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ನೆಲೋಗಲ್ಲ ಬಳಿ ರಾಷ್ಟ್ರೀಯ ಹೆದ್ದಾರಿಯಿದೆ. ಜಿಲ್ಲಾಸ್ಪತ್ರೆಗೂ ಹತ್ತಿರವಾಗಲಿದೆ. ಈ ಕುರಿತು ಶೀಘ್ರದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿನ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು.
| ನೆಹರು ಓಲೇಕಾರ, ಶಾಸಕರು ಹಾವೇರಿ


ಸದ್ಯ ಮೆಡಿಕಲ್ ಕಾಲೇಜ್​ಗೆ ದೇವಗಿರಿಯಲ್ಲಾಪುರದ ಬಳಿಯ ಜಾಗವನ್ನೇ ಅಂತಿಮಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾಲೇಜ್ ಸ್ಥಳ ಸೇರಿ ವಿವಿಧ ವಿಷಯಗಳ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಸಭೆಯಲ್ಲಿನ ಚರ್ಚೆಯ ನಂತರ ಸ್ಥಳ ಅಂತಿಮಗೊಳ್ಳಲಿದೆ.
| ಕೃಷ್ಣ ಬಾಜಪೈ, ಜಿಲ್ಲಾಧಿಕಾರಿ ಹಾವೇರಿ


ದೇವಗಿರಿಯಲ್ಲಾಪುರದ ಬಳಿ ಗುರುತಿರುವ ಜಾಗ ತಗ್ಗು ಪ್ರದೇಶದಲ್ಲಿದೆ. ಅಲ್ಲಿ ನಿರ್ವಿುಸಿದರೆ ಈಗಾಗಲೇ ಹೆಗ್ಗೇರಿಕೆರೆ ಬಳಿ ನಿರ್ವಿುಸಿ ಪಾಳುಬಿದ್ದಿರುವ ಪೊಲೀಸ್ ಇಲಾಖೆಯ ಕಟ್ಟಡದ ಸ್ಥಿತಿ ಕಾಲೇಜ್​ಗೂ ಬರಲಿದೆ. ಅಧಿಕಾರಿಗಳು, ಸಚಿವರು, ಶಾಸಕರು ಕಾಲೇಜ್ ಆರಂಭಕ್ಕೆ ಮುನ್ನವೇ ಸೂಕ್ತ ಜಾಗದಲ್ಲಿ ನಿರ್ವಣಕ್ಕೆ ಮುಂದಾಗಬೇಕು. ಜಿಲ್ಲಾಡಳಿತ, ಸಿಎಂಗೂ ಈ ಕುರಿತು ಮನವಿ ಸಲ್ಲಿಸಿದ್ದೇವೆ. ಕಾಲೇಜ್ ಜಾಗದ ಕುರಿತು ಅಧಿಕಾರಿಗಳಿಗೆ ದಾಖಲೆಗಳನ್ನು ಕೇಳಿದರೂ ಯಾವುದೇ ಮಾಹಿತಿ ಕೊಟ್ಟಿಲ್ಲ.
| ಶಿವಯೋಗಿ ಹೊಸಗೌಡ್ರ, ಸ್ಥಳೀಯ ನಿವಾಸಿ

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…