ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಯತ್ನ

ಬೆಂಗಳೂರು: ನ್ಯಾಷನಲ್ ಕಾಲೇಜು ಮೆಟ್ರೋ ರೈಲು ನಿಲ್ದಾಣದಲ್ಲಿ ಶುಕ್ರವಾರ ಯುವಕನೊಬ್ಬ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಎನ್.ಆರ್. ಕಾಲನಿ ನಿವಾಸಿ ವೇಣುಗೋಪಾಲ್ (18) ಆತ್ಮಹತ್ಯೆಗೆ ಯತ್ನಿಸಿದವ. ಬೆಳಗ್ಗೆ ನಾಗಸಂದ್ರದ ಕಡೆಗೆ ತೆರಳುತ್ತಿದ್ದ ಮೆಟ್ರೋ ರೈಲು ಬೆಳಗ್ಗೆ 11.10ರಲ್ಲಿ ನ್ಯಾಷನಲ್ ಕಾಲೇಜು ನಿಲ್ದಾಣ ತಲುಪುತ್ತಿದ್ದಾಗ ವೇಣುಗೋಪಾಲ್ ಸೆಕ್ಯುರಿಟಿ ಗಾರ್ಡ್​ಗಳ ಕಣ್ತಪ್ಪಿಸಿ ಹಳಿ ಮೇಲೆ ಹಾರಿದ್ದಾನೆ. 4 ರೈಲು ಹಳಿಗಳ ಮಧ್ಯೆ ಯುವಕ ಸಿಲುಕಿದಾಗ ಕೂಡಲೇ 750 ವೋಲ್ಟೇಜ್ ವಿದ್ಯುತ್ ಪ್ರವಹಿಸುವ ಹಳಿಯಲ್ಲಿ ವಿದ್ಯುತ್ ಸ್ವಯಂ ಸ್ಥಗಿತವಾಗಿದ್ದರಿಂದ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ.

ರೈಲು ಕೂಡ ನಿಂತಿದ್ದು, ಭದ್ರತಾ ಸಿಬ್ಬಂದಿ ತಕ್ಷಣ ರೈಲನ್ನು ಹಿಂದಕ್ಕೆ ತಳ್ಳಿ ಯುವಕನನ್ನು ರಕ್ಷಣೆ ಮಾಡಿದ್ದಾರೆ.

ತಲೆಗೆ ಗಂಭೀರ ಗಾಯವಾದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ನಿಮ್ಹಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ವೇಣುಗೋಪಾಲ್ ತಂದೆ ನೆಟ್ಟಕಲ್ಲಪ್ಪ ವೃತ್ತದಲ್ಲಿ ಟೇಲರಿಂಗ್ ಅಂಗಡಿ ನಡೆಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 1 ವಿಷಯದಲ್ಲಿ ಅನುತ್ತೀರ್ಣನಾಗಿದ್ದ ವೇಣು, ಸದಾಕಾಲ ಮೊಬೈಲ್​ನಲ್ಲಿ ಮಗ್ನನಾಗುತ್ತಿದ್ದ. ಎಷ್ಟು ಬಾರಿ ಹೇಳಿದರೂ ಮೊಬೈಲ್ ಹುಚ್ಚು ಕಡಿಮೆ ಮಾಡಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಗುರುವಾರ ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಕುಪಿತಗೊಂಡಿದ್ದ ವೇಣು, ಶುಕ್ರವಾರ ಬೆಳಗ್ಗೆ 10.30ರಲ್ಲಿ ಮನೆಯಿಂದ ತೆರಳಿದ್ದ. ಅಂಗಡಿಗೆ ಹೋಗಿರಬೇಕು ಎಂದುಕೊಂಡಿದ್ದರು. ಆದರೆ, ಆತ ನೇರ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಬಂದು ಕುಳಿತಿದ್ದ. ಸೆಕ್ಯೂರಿಟಿ ಗಾರ್ಡ್​ಗಳು ಗಮನಿಸಿ ಪ್ರಶ್ನಿಸಿದ್ದರು. ಆಗ, ಸಂಬಂಧಿಕರು ಬರಬೇಕಿದೆ. ಅವರು ಬಂದ ಮೇಲೆ ಇಲ್ಲಿಂದ ತೆರಳುವುದಾಗಿ ವೇಣು ಉತ್ತರಿಸಿದ್ದ. ಮೆಟ್ರೋ ರೈಲು, ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಬರುತ್ತಿದ್ದಂತೆ ಹಳಿಗಳ ಮೇಲೆ ಹಾರಿದ್ದಾನೆ ಎಂದು ವಿ.ವಿ. ಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹೆತ್ತವರ ಕಾಳಜಿ ಅರ್ಥ ಮಾಡಿಕೊಳ್ಳಿ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ಕೊಟ್ಟು ಯುವಕನ ಆರೋಗ್ಯ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯುವಕ ಅನುತ್ತೀರ್ಣನಾಗಿದ್ದ. ಅದಕ್ಕೆ ತಾಯಿ, ಚೆನ್ನಾಗಿ ಓದು ಎಂದು ಬುದ್ಧಿವಾದ ಹೇಳಿದ್ದಾರೆ. ಆ ವಿಚಾರಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಕ್ಕಳು ಇಂತಹ ತಪು್ಪಗಳನ್ನು ಮಾಡಬಾರದು. ಆತ್ಮಸ್ಥೈರ್ಯ ಇರಬೇಕು. ಹೆತ್ತವರ ಬುದ್ಧಿವಾದದ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮೊದಲ ಹಂತದಲ್ಲಿಲ್ಲ ಸ್ಕ್ರೀನ್ ಡೋರ್

ಬೆಂಗಳೂರು: ನಗರದ ಮೆಟ್ರೋ ನಿಲ್ದಾಣ ಗಳು ಅವಘಡವನ್ನು ಕೈಬೀಸಿ ಕರೆಯುವಂತಿವೆೆ. ನಿಲ್ದಾಣದ ಯಾವುದೇ ಪ್ಲಾಟ್​ಫಾಮರ್್​ನಲ್ಲಿ ‘ಸ್ಕ್ರೀನ್ ಡೋರ್’ (ಗಾಜಿನ ಬಾಗಿಲು) ಇಲ್ಲದಿರುವುದು ಅವಘಡಗಳಿಗೆ ಕಾರಣವಾಗುತ್ತಿದೆ.

ದೆಹಲಿ ಮತ್ತು ವಿದೇಶಗಳ ಬಹುತೇಕ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್​ಫಾಮ್ರ್ ಸ್ಕ್ರೀನ್​ಡೋರ್ ಅಳವಡಿಸಲಾಗಿದೆ. ಪ್ಲಾಟ್​ಫಾಮರ್್​ನಲ್ಲಿ ಮಕ್ಕಳು ಆಟವಾಡುತ್ತಾ ಹಳಿ ಬಳಿಗೆ ಹೋಗಬಾರದು, ರೈಲು ಹತ್ತಲು ಸರದಿಯಲ್ಲಿ ನಿಲ್ಲುವ ಪ್ರಯಾಣಿಕರು ನೂಕುನುಗ್ಗಲಿನಿಂದಾಗಿ ಆಯತಪ್ಪಿ ಹಳಿಗೆ ಬೀಳಬಾರದು ಮತ್ತು ಆತ್ಮಹತ್ಯೆ ತಡೆಗಟ್ಟುವುದು ಇದರ ಉದ್ದೇಶವಾಗಿದೆ. ಈ ಬಾಗಿಲುಗಳು ರೈಲು ಬಂದು ನಿಂತ ನಂತರವಷ್ಟೇ ತೆರೆದುಕೊಳ್ಳುತ್ತವೆ. ಜತೆಗೆ ರೈಲಿನ ಬಾಗಿಲು ಮುಚ್ಚಿಕೊಂಡ ತಕ್ಷಣ ಮುಚ್ಚಿಕೊಳ್ಳುತ್ತವೆ. ಈ ವ್ಯವಸ್ಥೆ ಯಿಂದಾಗಿ ಪ್ರಯಾಣಿಕರು ಪ್ಲಾಟ್​ಫಾಮರ್್​ನಿಂದ ಹಳಿಗೆ ಇಳಿಯಲು ಸಾಧ್ಯವೇ ಇಲ್ಲ.

ಡೇಂಜರ್ ಮೆಟ್ರೋ!: ಇತರೆಡೆಯ ಮೆಟ್ರೋಗೆ ಹೋಲಿಸಿದರೆ ನಮ್ಮ ಮೆಟ್ರೋ ನಿಲ್ದಾಣಗಳು ಹೆಚ್ಚು ಅಪಾಯಕಾರಿಯಾಗಿವೆ. ರೈಲಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಥರ್ಡ್​ರೇಲ್​ನ್ನು (ಹಳದಿ ಬಣ್ಣದ ಕಬ್ಬಿಣದ ಪಟ್ಟಿ) ಹಳಿಯ ಪಕ್ಕದಲ್ಲೇ ಅಳವಡಿಸಲಾಗಿದೆ. ಇವುಗಳಲ್ಲಿ 750 ವೋಲ್ಟೇಜ್ ವಿದ್ಯುತ್ ಸರಬರಾಜಿರುತ್ತದೆ. ಹೀಗಾಗಿ ಅಪ್ಪಿತಪ್ಪಿ ಹಳಿಗೆ ಬಿದ್ದರೂ ಥರ್ಡ್​ರೇಲ್ ರ್ಸ³ಸಿದರೆ ಸ್ಥಳದಲ್ಲೇ ಸುಟ್ಟು ಹೋಗುವುದು ನಿಶ್ಚಿತ.

ಯಾರಾದರೂ ಹಳಿಗೆ ಬಿದ್ದರೆ ಥರ್ಡ್​ರೇಲ್ ಸ್ಥಗಿತಗೊಳಿಸಲು ಪ್ರತಿ ಪ್ಲಾಟ್​ಫಾಮರ್್​ಗಳಲ್ಲಿ 2 ತುರ್ತಗುಂಡಿ ನೀಡಲಾಗಿದೆ. ಶುಕ್ರವಾರದ ಘಟನೆ ಸಂದರ್ಭದಲ್ಲಿ ಸಿಬ್ಬಂದಿ ತಕ್ಷಣವೇ ಇದನ್ನು ಒತ್ತಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದಾರೆ.

ಪ್ಲಾಟ್​ಫಾಮರ್್​ಗೆ ಇಬ್ಬರು ಸಿಬ್ಬಂದಿ!: ಸ್ಕ್ರೀನ್​ಡೋರ್ ವ್ಯವಸ್ಥೆ ಮೆಟ್ರೋ ಮೊದಲನೇ ಹಂತದ ಯಾವುದೇ ನಿಲ್ದಾಣಗಳಲ್ಲಿ ಇಲ್ಲ. ಬದಲಾಗಿ ಒಂದು ಪ್ಲಾಟ್​ಫಾಮರ್್​ಗೆ ಇಬ್ಬರು ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಪ್ರಯಾಣಿಕರು ಪ್ಲಾಟ್​ಫಾಮ್ರ್ ಅಂಚಿಗೆ ಹೋಗಬಾರದು ಎಂದು ಹಳದಿ ಗೆರೆ ಹಾಕಲಾಗಿದೆ. ಇದನ್ನು ದಾಟಿದರೆ ಸಿಬ್ಬಂದಿ ಎಚ್ಚರಿಸುತ್ತಿರುತ್ತಾರೆ. ಆದರೆ ನಿಲ್ದಾಣಕ್ಕೆ ಆಗಮಿಸುವ ನೂರಾರು ಪ್ರಯಾಣಿಕರ ಮೇಲೆ ಕಣ್ಣಿಡುವುದು ಅಸಾಧ್ಯ. ಕೆಲವೊಮ್ಮೆ ಮಕ್ಕಳು ಆಟವಾಡುತ್ತ ಹಳಿ ಸಮೀಪಕ್ಕೆ ಹೋಗುತ್ತಾರೆ, ಹೊಸದಾಗಿ ಬರುವ ಪ್ರಯಾಣಿಕರು ಕುತೂಹಲದಿಂದ ರೈಲು ಆಗಮಿಸುವುದನ್ನು ವೀಕ್ಷಿಸಲು ಪ್ಲಾಟ್​ಫಾಮ್ರ್ ಅಂಚಿಗೆ ಹೋಗುವ ದೃಶ್ಯ ಸಾಮಾನ್ಯವಾಗಿದೆ.

2ನೇ ಹಂತದಲ್ಲಿ ಸ್ಕ್ರೀನ್​ಡೋರ್

2012ರಲ್ಲಿ ಎಂ.ಜಿ. ರಸ್ತೆ ಮಾರ್ಗದಲ್ಲಿ ಹುಡುಗನೊಬ್ಬ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇಂತಹ ಘಟನೆ ತಡೆಯಲು ನಮ್ಮ ಮೆಟ್ರೋ 2ನೇ ಹಂತದ ಯೋಜನೆಯಲ್ಲಿ ಎಲ್ಲ ಸುರಂಗ ನಿಲ್ದಾಣಗಳ ಪ್ಲಾಟ್​ಫಾಮ್ರ್ ಗಳಿಗೆ ಗಾಜಿನ ಬಾಗಿಲು ಅಳವಡಿಸಲು ಬಿಎಂಆರ್​ಸಿಎಲ್ ಚಿಂತನೆ ನಡೆಸಿದೆ. ಇಂತಹ ದುರ್ಘಟನೆ ತಡೆಯಲು ಎಲ್ಲ ನಿಲ್ದಾಣಗಳಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ.

Leave a Reply

Your email address will not be published. Required fields are marked *