ಮೆಟ್ರೋ ಪೆಡೆಸ್ಟಲ್​ನಲ್ಲಿ ಬಿರುಕು: ಸುರಕ್ಷತೆ ಬಗ್ಗೆ ಯಾವುದೇ ಸಂಶಯ ಬೇಡ ಎಂದ ಬಿಎಂಆರ್​ಸಿಎಲ್

ಬೆಂಗಳೂರು: ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿಯ ಮೆಟ್ರೋ ಕಂಬದ ಮೇಲಿದ್ದ ಬೀಮ್ಲ್ಲಿ ಹನಿಕೂಂಬ್ (ಟೊಳ್ಳು) ಸಮಸ್ಯೆಯಾಗಿದ್ದನ್ನು ಮರೆಯುವ ಮುನ್ನವೇ ಸೌತ್ ಎಂಡ್ ವೃತ್ತದ ಬಳಿ ಮೆಟ್ರೋ ಕಂಬ 66 ಹಾಗೂ 67ರಲ್ಲಿ ಬೇರಿಂಗ್ ಪೆಡೆಸ್ಟ್ಟ್ ಪದರದ ನಡುವೆ (ಪೀಠ) ಬಿರುಕು ಕಾಣಿಸಿಕೊಂಡಿದೆ.

ಮೆಟ್ರೋ ಕಂಬದ ಪೈಯರ್ ಕ್ಯಾಪ್ ನಿರ್ವಿುಸಿ ಅದರ ಮೇಲೆ 4 ಚೌಕಾಕಾರದ ಪೆಡೆಸ್ಟಲ್​ ನಿರ್ವಿುಸಲಾಗುತ್ತದೆ. ಈ ಪೆಡೆಸ್ಟಲ್​ ಮೇಲೆ ಮೆಟ್ರೋ ಮಾರ್ಗ ಇರಿಸಲಾಗುತ್ತದೆ. ಸೌತ್ ಎಂಡ್ ವೃತ್ತದ ಬಳಿಯ ಈ 2 ಕಂಬದ ಪೆಡೆಸ್ಟ್ಟ್ಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಜಾಲತಾಣದಲ್ಲಿ ಪೆಡೆಸ್ಟ್ಟ್ ಬಿರುಕಾದ ಚಿತ್ರ ಹರಿದಾಡತೊಡಗಿ ದಂತೆ ಬಿಎಂಆರ್​ಸಿಎಲ್ ಈ ಕುರಿತು ಸ್ಪಷ್ಟನೆ ನೀಡಿದೆ.

ಸೌತ್ ಎಂಡ್ ವೃತ್ತದ ಬಳಿಯ ಮೆಟ್ರೋ ಕಂಬಗಳಾದ 66 ಹಾಗೂ 67ರಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿಲ್ಲ. ಈ ಕಂಬಗಳ ಮೇಲಿದ್ದ ಬೇರಿಂಗ್ ಪೆಡೆಸ್ಟಲ್​ಗಳನ್ನು 2 ಪದರದಲ್ಲಿ (ಲೇಯರ್) ನಿರ್ವಿುಸಲಾಗಿತ್ತು. ಈ ಪದರಗಳ ನಡುವೆ ಬಿರುಕು ಕಾಣಿಸಿಕೊಂಡಿದೆ. ಇದರರ್ಥ ಪೆಡೆಸ್ಟ್ಟ್ಬಿರುಕುಬಿಟ್ಟಿದೆ ಎಂದಲ್ಲ. ಇಂತಹ ಬಿರುಕು ಸಾಮಾನ್ಯವಾಗಿದ್ದು, ಸುರಕ್ಷತೆ ಬಗ್ಗೆ ಸಂಶಯ ಬೇಡ ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ವಿಜಯವಾಣಿಗೆ ತಿಳಿಸಿದ್ದಾರೆ.

ಗುರುವಾರ ರಾತ್ರಿಯೇ ಕಂಬ ಸಂಖ್ಯೆ 67ರ ಪೆಡೆಸ್ಟಲ್ ದುರಸ್ತಿ ಮಾಡಲಾಗಿದ್ದು, ಕಂಬ 66ರ ಪೆಡೆಸ್ಟ್ಟ್ ದುರಸ್ತಿಯನ್ನು ಶುಕ್ರವಾರ ರಾತ್ರಿ ನಡೆಸಲಾಗಿದೆ. ರೈಲು ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ನಿಗಮ ತಿಳಿಸಿದೆ.

ಬಿರುಕು ಉಂಟಾಗಲು ಕಾರಣವೇನು?

ಮೆಟ್ರೋ ರೈಲುಗಳು ಸಂಚರಿಸುವಾಗ ಉಂಟಾಗುವ ಕಂಪನದಿಂದ ಪೆಡೆಸ್ಟ್ಟ್ನ ಪದರಗಳ ನಡುವೆ ಬಿರುಕು ಉಂಟಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಸಾಮಾನ್ಯ ಎಂದು ಬಿಎಂಆರ್​ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಲ ಬೇರಿಂಗ್ ಪೆಡೆಸ್ಟ್ಟ್ಗಳನ್ನೂ 2 ಪದರಗಳಲ್ಲಿ ನಿರ್ವಿುಸಲಾಗಿದೆ. ಬೇರೆ ಯಾವ ಪೆಡೆಸ್ಟಲ್​ಗಳಲ್ಲೂ ಕಾಣಿಸಿಕೊಳ್ಳದ ಬಿರುಕು ಈ ಕಂಬದ ಮೇಲಿನ ಪೆಡೆಸ್ಟ್ಟ್ನಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಎಂಬುವುದನ್ನು ಬಿಎಂಆರ್​ಸಿಎಲ್ ಸೂಕ್ತವಾಗಿ ಪರಿಶೀಲಿಸುವ ಅಗತ್ಯತೆ ಇದೆ.

Leave a Reply

Your email address will not be published. Required fields are marked *