Thursday, 13th December 2018  

Vijayavani

Breaking News

ಮೆಟ್ರೋ ನಿಲ್ದಾಣದ ಸೌಂದರ್ಯ ಕಂಡಿರಾ?

Friday, 12.01.2018, 3:01 AM       No Comments

ಮೆಟ್ರೋ ರೈಲು ಆಧುನಿಕ ಸಾರಿಗೆಯ ಸ್ವರೂಪಗಳಲ್ಲಿ ಒಂದು. ಬೆಂಗಳೂರಿನಲ್ಲೂ ಕಳೆದ ಆರು ವರ್ಷಗಳಿಂದ ಸೇವೆ ನೀಡುತ್ತಿರುವ ಮೆಟ್ರೋ ರೈಲು ಭಾರಿ ಬೇಡಿಕೆ ಮತ್ತು ಜನಪ್ರಿಯತೆ ಪಡೆದುಕೊಂಡಿದೆ. ಆದರೆ ಮುಂದುವರಿದ ರಾಷ್ಟ್ರಗಳಲ್ಲಿ ಮಾತ್ರ ಬಹಳಷ್ಟು ವರ್ಷಗಳ ಹಿಂದೆಯೇ ಮೆಟ್ರೋ ರೈಲು ಪರಿಕಲ್ಪನೆ ಪರಿಚಯಿಸಲ್ಪಟ್ಟಿದೆ.

ಅವುಗಳ ಪೈಕಿ ರಷ್ಯಾದಲ್ಲಿನ ಮೆಟ್ರೋ ರೈಲು ನಿಲ್ದಾಣಗಳು ಮಾತ್ರ ಅದ್ಭುತ ಮತ್ತು ಆಕರ್ಷಕ. ಪುರಾತನ ಅರಮನೆಯನ್ನು ಹೋಲುವ ವಿನ್ಯಾಸ ಹೊಂದಿವೆ. ಮಾಸ್ಕೋ ಮೆಟ್ರೋ ನಿಲ್ದಾಣದ ವಾಸ್ತುಶಿಲ್ಪ ಜಗತ್ತಿನಲ್ಲೇ ಅತ್ಯಂತ ಅಪರೂಪದ ಮತ್ತು ವಿಶಿಷ್ಟ ಮಾದರಿಯ ಸ್ವರೂಪ ಹೊಂದಿದೆ. ಮಾಸ್ಕೋ ರೈಲು ನಿಲ್ದಾಣ ಪ್ರವೇಶಿಸುತ್ತಲೇ ಅರಮನೆಯನ್ನು ಪ್ರವೇಶಿಸಿದಂತಾಗುತ್ತದೆ. ಪ್ರಾಚೀನ ಶೈಲಿಯ ಕಟ್ಟಡದ ವಾಸ್ತುಶಿಲ್ಪ ಮತ್ತು ವಿನ್ಯಾಸ ಹೊಂದಿರುವ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರದಿಂದ ತೊಡಗಿ, ಟಿಕೆಟ್ ಕೌಂಟರ್, ಫ್ಲಾಟ್​ಫಾಮ್ರ್ ಹೀಗೆ ಎಲ್ಲವೂ ಅತ್ಯಂತ ವಿಶಿಷ್ಟ ರೀತಿಯಲ್ಲಿ ರೂಪಿಸಲ್ಪಟ್ಟಿದ್ದು, ಪ್ರಯಾಣಿಕರನ್ನು ಸೆಳೆಯುತ್ತದೆ.

ಸ್ಟಾಲಿನ್ ಆಡಳಿತದ ಕಾಲದಿಂದ ಅಲ್ಲಿ ಅತ್ಯಾಧುನಿಕ ಮಾದರಿಯ ವಾಸ್ತು ವಿನ್ಯಾಸ, ಆಕರ್ಷಕ ಕಟ್ಟಡಗಳು ರೂಪುಗೊಂಡವು. ಹೀಗಾಗಿ ಅದೇ ವಿನ್ಯಾಸವನ್ನು ಈಗಲೂ ಬಳಸುವ ಮೂಲಕ ಅಲ್ಲಿನ ವಾಸ್ತುಶಿಲ್ಪವನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ.

ರಾಜರ ಕಾಲದ ಭವ್ಯ ಅರಮನೆಯ ಲುಕ್ ನೀಡುವ ವಾಸ್ತುಶಿಲ್ಪವನ್ನು ಮೆಟ್ರೋ ನಿಲ್ದಾಣದಲ್ಲಿ ಬಳಸಿದ್ದರಿಂದ, ಪ್ರವಾಸಿಗರಿಗೂ ರಷ್ಯಾ ವಾಸ್ತು ಶಿಲ್ಪದ ಪರಿಚಯವಾಗುವ ಜತೆಗೆ, ಮೆಟ್ರೋಗೂ ಅಧಿಕ ಆದಾಯ ಬರು ತ್ತಿದೆ. ಅಲ್ಲದೆ ಏಕರೂಪದ ವಿನ್ಯಾಸ ನೋಡಿ ಬೇಜಾರಾಗಿದ್ದರೆ, ಈ ಮಾದರಿಯ ಆಕರ್ಷಕ ವಿನ್ಯಾಸ ಮೆಚ್ಚುಗೆ ಯಾಗುತ್ತದೆ ಎಂದು ಪ್ರವಾಸಿ ಗರು ಅಭಿಪ್ರಾಯ ಪಟ್ಟಿದ್ದಾರೆ.-ಏಜೆ ನ್ಸೀಸ್

Leave a Reply

Your email address will not be published. Required fields are marked *

Back To Top