More

  ಮೆಕ್ಕೇಜೋಳ ಖರೀದಿ ಕೇಂದ್ರ ಶೀಘ್ರ

  ಹಿರೇಕೆರೂರ: ರೈತರ ಬೇಡಿಕೆಯಂತೆ ಮಾರ್ಚ್​ನಲ್ಲಿ ಸರ್ಕಾರದಿಂದ ಮೆಕ್ಕೇಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಮುಖ್ಯಮಂತ್ರಿಯೊಂದಿಗೆ ರ್ಚಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

  ತಾಲೂಕಿನ ಬುರುಡಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರ ವಂತಿಗೆಯಿಂದ ನಿರ್ವಿುಸಿದ 3 ಸ್ಮಾರ್ಟ್ ಕ್ಲಾಸ್ ಹಾಗೂ ಶಾಲೆಯ ವಾರ್ಷಿಕೋತ್ಸವವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

  ಖರೀದಿ ಕೇಂದ್ರ ಕುರಿತು ಕಮಿಟಿ ರಚಿಸಲು ಸಿಎಂ ತಿಳಿಸಿದ್ದಾರೆ. ಕಮಿಟಿಯಲ್ಲಿ ನಾನೂ ಸದಸ್ಯನಿದ್ದು, ರ್ಚಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

  ಗ್ರಾಮದ ಆಂಜನೇಯ ದೇವಸ್ಥಾನದ ಗೋಪುರಕ್ಕೆ 3 ಲಕ್ಷ ರೂ. ದೇಣಿಗೆ ನೀಡುವುದಾಗಿ ಸಚಿವರು ಭರವಸೆ ನೀಡಿದರು.

  ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಪರಿಸರ, ಬೋಧನೆ ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿದರೆ ಮಾತ್ರ ಮುಚ್ಚುವ ಹಂತ ತಲುಪಿರುವ ಸರ್ಕಾರಿ ಶಾಲೆಗಳ ರಕ್ಷಣೆ ಸಾಧ್ಯ ಎಂದರು.

  ಸ್ಮಾರ್ಟ್ ಕ್ಲಾಸ್ ನಿರ್ವಿುಸಲು ನೆರವಾದ 40 ದಾನಿಗಳನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಎಸ್​ಡಿಎಂಸಿ ಅಧ್ಯಕ್ಷ ಗದಿಗೆಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

  ತಾಪಂ ಅಧ್ಯಕ್ಷ ರಾಜು ಬಣಕಾರ, ಜಿಪಂ ಸದಸ್ಯೆ ಮಹದೇವಕ್ಕ ಗೋಪಕ್ಕಳಿ, ಗ್ರಾಪಂ ಅಧ್ಯಕ್ಷೆ ಜಯಶೀಲಾ ಮರಿಗೌಡ್ರ, ಕೆಎಂಎಫ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಬಸವರಾಜ ಭರಮಗೌಡ್ರ, ಮಾಧವಿ ಎಂ., ಮಹೇಂದ್ರ ಬಡಳ್ಳಿ, ರಮೇಶ ಕೋಡಿಹಳ್ಳಿ, ಶೇಖಣ್ಣ ಬಿಳಕಿ, ರಮೇಶ ಮೇಗಳಮನಿ, ಬಸವರಾಜ ಮತ್ತಿಹಳ್ಳಿ, ಭೀಮನಗೌಡ ದೊಡ್ಡಗೌಡ್ರ, ಬಿಇಒ ಎಲ್.ಸಿದ್ದಲಿಂಗಪ್ಪ, ಮಾರುತಿ.ಕೆ., ಜಗದೀಶ ಬಳಿಗಾರ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಪಿ.ಆರ್. ನಾಯಕ್, ದೈಹಿಕ ಶಿಕ್ಷಕ ಆರ್.ಎನ್.ಕೆಂಗಟ್ಟಿ ನಿರ್ವಹಿಸಿದರು.

  ವಿವಿಧ ಕಾಮಗಾರಿಗೆ ಸಿಎಂ ಶಂಕುಸ್ಥಾಪನೆ ಮಾ. 7ರಂದು

  ಹಿರೇಕೆರೂರ: ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡಗಳ ಉದ್ಘಾಟನೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಮಾ.7 ರಂದು ಸಿಎಂ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸುವರು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

  ಗ್ರಾಮದ ಹೊರವಲಯದಲ್ಲಿ ಏರ್ಪಡಿಸಲಿರುವ ಕಾರ್ಯಕ್ರಮದ ಸ್ಥಳವನ್ನು ಬುಧವಾರ ವೀಕ್ಷಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 36 ಕೋಟಿ ರೂ. ವೆಚ್ಚದ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಉದ್ಘಾಟನೆ ಹಾಗೂ 185 ಕೋಟಿ ರೂ. ವೆಚ್ಚದ ಸರ್ವಜ್ಞ ಏತ ನೀರಾವರಿ ಯೋಜನೆ, 23 ಕೋಟಿ ರೂ. ವೆಚ್ಚದ ಇಂದಿರಾ ಗಾಂಧಿ ವಸತಿ ಶಾಲೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು ಎಂದರು.

  ಯು.ಬಿ. ಬಣಕಾರ, ಜಿ.ಶಿವನಗೌಡರ, ಡಿ.ಸಿ. ಪಾಟೀಲ, ರವಿಶಂಕರ ಬಾಳಿಕಾಯಿ, ಸೃಷ್ಟಿ ಪಾಟೀಲ, ಕುಮಾರ ಜಗಳೂರು, ತಹಸೀಲ್ದಾರ್ ಆರ್.ಎಚ್. ಭಾಗವಾನ್, ಇಒ ಶ್ರೀನಿವಾಸ ಎಚ್.ಜಿ, ಪಪಂ ಮುಖ್ಯಾಧಿಕಾರಿ ರಾಜಾರಾಮ ಪವಾರ್, ಸಮಾಜ ಕಲ್ಯಾಣ ಅಧಿಕಾರಿ ಆಂಜನೇಯ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts