ಸಿನಿಮಾ

ಮೃತ ಕುಟುಂಬಕ್ಕೆ ಶಾಸಕ ತುನ್ನೂರಿಂದ ಸಾಂತ್ವನ


ಯಾದಗಿರಿ: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಪ್ರಾಣ ಕಳೆದುಕೊಂಡ ಇಲ್ಲಿನ ನಿವಾಸಿ ಶ್ರೀನಿವಾಸ ಮನೆಗೆ ನೂತನ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.


ವೈಯಕ್ತಿಕ ಧನ ಸಹಾಯ ಮಾಡಿ ಧೈರ್ಯ ತುಂಬಿದ ಅವರು, ಯಾದಗಿರಿ ಶಾಂತಿ ಹಾಗೂ ಭಾವೈಕ್ಯತೆಗೆ ಹೆಸರಗಿದೆ. ಮೃತ ಶ್ರೀನಿವಾಸಿ ಪರಿಶ್ರಮಿಯಾಗಿದ್ದು, ಯಾರ ತಂಟೆಗೂ ಹೋಗದ ವ್ಯಕ್ತಿಯಾಗಿದ್ದ. ತಾನು ಮಾಡದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದು ಮನಸ್ಸಿಗೆ ನೋವು ತರಿಸಿದೆ. ಮೃತ ಕುಟುಂಬದ ಜತೆಗೆ ನಾನು ಸದಾ ಇದ್ದು, ಮಕ್ಕಳ ವಿದ್ಯಾಬ್ಯಾಸಕ್ಕೆ ಹೆಚ್ಚಿನ ನೆರವು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಸಕರ್ಾರದಿಂದ ಹೆಚ್ಚಿನ ಪರಿಹಾರ ಕಲ್ಪಿಸಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.

ಘಟನೆಯ ಬಗ್ಗೆ ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಸಿದ್ದು, ತನಿಖೆ ಪ್ರಗತಿಯಲ್ಲಿದೆ. ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಲಿದ್ದು, ನಗರದಲ್ಲಿ ಮುಂದೆ ಈ ರೀತಿ ಪ್ರಕರಣಗಳು ನಡೆಯದಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು. ಪ್ರಮುಖರಾದ ಮಲ್ಲಣ್ಣ ದಾಸನೇರಿ, ಸ್ಯಾಮಸನ್ ಮಾಳಿಕೇರಿ, ಕವಿತಾ ಪಾಟೀಲ್, ರಾಜು ಜಾಲಿಬೆಂಚಿ ಇದ್ದರು.

Latest Posts

ಲೈಫ್‌ಸ್ಟೈಲ್