ನೇಸರಗಿ: ಈ ಭಾಗಕ್ಕೆ ಮೂಲಸೌಕರ್ಯ ಒದಗಿಸಲು ಸದಾ ಬದ್ಧನಾಗಿದ್ದು, ಇಲ್ಲಿನ ಜನರಿಗೆ ನೀರಾವರಿ ಯೋಜನೆ ಅತಿ ಅವಶ್ಯವಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ೪೮ ಲಕ್ಷ ರೂ. ವೆಚ್ಚದ ಸಭಾಭವನ, ೧೫ ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆ ಕಾಮಗಾರಿಗೆ ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸಲಿದ್ದು, ರೈತರಿಗೆ ಸದುಪಯೋಗ ಆಗಲಿದೆ ಎಂದರು.
ನೇಸರಗಿ-ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುವ ಮುಖಂಡ ಸಚಿನ ಪಾಟೀಲ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಅರಕೇರಿ, ರಾಜಶೇಖರ ಯತ್ತಿನಮನಿ, ಡಾ.ಎಸ್.ಬಿ. ಗೆಜ್ಜಿ, ಎಸ್.ವಿ. ಸೋಮಣ್ಣವರ, ಎ.ಆರ್. ಮಾಳಣ್ಣವರ, ಗ್ರಾಪಂ ಅಧ್ಯಕ್ಷ ವೀರಭದ್ರ ಚೋಬಾರಿ, ಶಂಕರ ತಿಗಡಿ, ನಜೀರ್ ತಹಶೀಲ್ದಾರ್, ಜಲ ಸಂಪನ್ಮೂಲ ಇಲಾಖೆಯ ಇಇ ಎಚ್.ಎಸ್. ಕಾಖಂಡಕಿ, ಎಇಇ ಶ್ರೀನಿವಾಸ ಬಿರಾದಾರ, ಎಇ ಕೆ.ಪಿ. ಬಿರಾದಾರ, ಗುತ್ತಿಗೆದಾರ ಎಚ್.ಎಂ. ಕುರಂದರ, ಬಿ.ಬಿ.ಹಿರೇಮಠ ಹಾಗೂ ಗ್ರಾಮಸ್ಥರಿದ್ದರು.