ಮೂಲನಂದೀಶ್ವರ ಜಾತ್ರೆ ದಾಸೋಹಕ್ಕೆ ರೊಟ್ಟಿ ಅರ್ಪಣೆ

Moolandishwar Jatre, Dasoha, Rotti, Basavanbagewadi, Talikote,

ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆ ದಾಸೋಹಕ್ಕಾಗಿ ಪಟ್ಟಣದ ನೂರಾರು ಮಹಿಳೆಯರು ರೊಟ್ಟಿ ಬುಟ್ಟಿಯನ್ನು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಶನಿವಾರ ಆಗಮಿಸಿ ದಾಸೋಹಕ್ಕೆ ನೀಡಿದರು.

ಪಟ್ಟಣದ ವಿರಕ್ತಮಠದಲ್ಲಿ ಬಸವಣ್ಣನವರ ಭಾವಚಿತ್ರ ಹಾಗೂ ರೊಟ್ಟಿಯ ಬುಟ್ಟಿಗಳ ಮೆರವಣಿಗೆಗೆ ಸಿದ್ಧಲಿಂಗ ಶ್ರೀಗಳು ಚಾಲನೆ ನೀಡಿದರು. ಪಟ್ಟಣದ ವಿವಿಧ ಗಲ್ಲಿಯ ಮಹಿಳೆಯರು ಹಾಗೂ ತಾಳಿಕೋಟೆ ತಾಲೂಕಿನ ಹಗಗುಂಡಿ ತಾಂಡಾದ ಸುರೇಶ ರಾಠೋಡ ಅವರು ಟ್ರಾೃಕ್ಟರ್ ಮೂಲಕ ಸಾವಿರಾರು ರೊಟ್ಟಿಗಳನ್ನು ದಾಸೋಹ ಭವನಕ್ಕೆ ತಲುಪಿಸಿದರು.

ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬಸವಜನ್ಮ ಸ್ಮಾರಕ, ಪಲ್ಲೆದಕಟ್ಟಿ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಸಂಚರಿಸಿ ಬಸವೇಶ್ವರ ದೇವಸ್ಥಾನದ ದಾಸೋಹ ನಿಲಯಕ್ಕೆ ಮೆರವಣಿಗೆ ತಲುಪಿತು.

ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಗುರುಲಿಂಗ ಬಸರಕೋಡ, ಬಸವರಾಜ ಹಾರಿವಾಳ, ಅನೀಲ ಅಗರವಾಲ, ಎಂ.ಜಿ.ಆದಿಗೊಂಡ, ಶೇಖರ ಗೊಳಸಂಗಿ, ಚಂದ್ರಶೇಖರಗೌಡ ಪಾಟೀಲ, ಸಂಗಮೇಶ ಓಲೇಕಾರ, ಶ್ರೀಕಾಂತ ಕೊಟ್ರಶೆಟ್ಟಿ, ಎಸ್.ಎಸ್. ಝಳಕಿ, ಎಸ್.ಎಸ್. ಬಿರಾದಾರ, ಬಾಬುಗೌಡ ಪಾಟೀಲ, ಮಲ್ಲಿಕಾರ್ಜುನ ಪಡಶೆಟ್ಟಿ, ಪ್ರಭಾಕರ ಖೇಡದ, ಕೊಟ್ರೇಶ ಹೆಗಡ್ಯಾಳ, ಎಂ.ಬಿ. ತೋಟದ, ರವಿ ರಾಠೋಡ, ಸಂಜು ಬಿರಾದಾರ, ಮುತ್ತು ಡಂಬಳ, ವಿವೇಕಾಂದ ಕಲ್ಯಾಣಶೆಟ್ಟಿ, ಬಿ.ಜಿ. ಬಿರಾದಾರ, ಪ್ರವೀಣಗೌಡ ಪಾಟೀಲ, ಅರುಣ ಗೊಳಸಂಗಿ, ಮಹಾದೇವಿ ಬಿರಾದಾರ, ಲಲಿತಾ ಗಬ್ಬೂರ, ಪುಷ್ಪಾ ಸಂಗಮ, ಶಾಂತಾಬಾಯಿ ಕುಂಬಾರ, ಮಾದೇವಿ ಪಡಶೆಟ್ಟಿ, ಸಾವಿತ್ರಿ ಕಲ್ಯಾಣಶೆಟ್ಟಿ ಇತರರಿದ್ದರು.

Share This Article

ರಾತ್ರಿ ಬಾಯಿ ತೆರೆದು ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ! ಇಂದೇ ಈ ಅಭ್ಯಾಸ ಬಿಟ್ಟು ಬಿಡಿ.. Sleeping Disorder

Sleeping Disorder : ಸಾಮಾನ್ಯವಾಗಿ ನಿದ್ದೆ ಮಾಡುವಾಗ ಕೆಲವರಿಗೆ  ಬಾಯಿ ತೆರೆದುಕೊಂಡು ಮಲಗುವ ಅಭ್ಯಾಸ ಇರುತ್ತದೆ.…

ಅಪ್ಪಿತಪ್ಪಿಯೂ ತುಪ್ಪದೊಂದಿಗೆ ಇವುಗಳನ್ನು ತಿನ್ನಬೇಡಿ… ತಿಂದರೆ ಈ ಎಲ್ಲ ಸಮಸ್ಯೆಗಳು ಉಂಟಾಗುತ್ತವೆ! Ghee

Ghee : ದೇಹದ ಆರೋಗ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಕೊಬ್ಬನ್ನು ಸೇವಿಸುವುದು ಮುಖ್ಯ. ಆದರೆ, ಅನಾರೋಗ್ಯಕರ ಕೊಬ್ಬನ್ನು…

ಮುಖದಿಂದ ಹೋಳಿ ಬಣ್ಣವನ್ನು ತೆಗೆದುಹಾಕಲು ಇದುವೇ ಸುಲಭವಾದ ಮಾರ್ಗ! ಟ್ರೈ ಮಾಡಿ ನೋಡಿ.. holi color  

holi color  : ಹೋಳಿ ಹಬ್ಬದಂದು ಜನರು ಬಹಳ ಉತ್ಸಾಹದಿಂದ ಪರಸ್ಪರ ಬಣ್ಣಗಳನ್ನು ಎರಚಿಕೊಳ್ಳುತ್ತಾರೆ.  ಮಾರುಕಟ್ಟೆಯಲ್ಲಿ ಶಾಶ್ವತ…