ಮೂರ್ಕಲ್ ಎಸ್ಟೇಟ್​ನಲ್ಲಿ ಹಾರರ್ ಝುಲಕ್

ಬೆಂಗಳೂರು: ಸ್ಯಾಂಡಲ್​ವುಡ್​ಗೂ ಹಾರರ್ ಸಿನಿಮಾಗಳಿಗೂ ಅವಿನಾಭಾವ ಸಂಬಂಧ. ಈ ಮೊದಲು ಸಾಲು ಸಾಲು ದೆವ್ವದ ಸಿನಿಮಾಗಳು ರಿಲೀಸ್ ಆಗಿರುವ ಉದಾಹರಣೆಗಳಿವೆ. ಸದ್ಯಕ್ಕೆ ಅದಕ್ಕೆ ಕೊಂಚ ಬ್ರೇಕ್ ಹಾಕಲಾಗಿದೆ. ಈ ಭೂತ-ಪ್ರೇತದ ಸಿನಿಮಾಗಳ ಬಗ್ಗೆ ಮಾತನಾಡಲು ಕಾರಣವಿದೆ. ನಿರ್ದೇಶಕ ಪ್ರಮೋದ್​ಕುಮಾರ್, ‘ಮೂರ್ಕಲ್ ಎಸ್ಟೇಟ್’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್-ಕಟ್ ಹೇಳಿದ್ದಾರೆ. ರವಿಚಂದ್ರನ್ ಮತ್ತು ಫಣೀಶ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಇರುವ ಪ್ರಮೋದ್​ಗೆ ಇದು ನಿರ್ದೇಶಕನಾಗಿ ಮೊದಲ ಚಿತ್ರ. ಪ್ರವೀಣ್ ಈ ಚಿತ್ರದ ನಾಯಕ. ‘ಡೇಸ್ ಆಫ್ ಬೋರಾಪುರ’ ಖ್ಯಾತಿಯ ನಟಿ ಪ್ರಕೃತಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಮೈಸೂರು, ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣ 35 ದಿನಗಳ ಕಾಲ ನಡೆದಿದೆ. ಕುಮಾರ್ ಎನ್. ಭದ್ರಾವತಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಎಲ್. ಕೃಷ್ಣ ಮತ್ತು ಎಸ್.ಡಿ. ಮುನಿಸ್ವಾಮಿ ಸಹನಿರ್ವಪಕರು. ಹಾರರ್ ಮಾದರಿಯ ಈ ಸಿನಿಮಾಕ್ಕೆ ‘ಲೂಸ್ ಕಲೆಕ್ಷನ್’ ಖ್ಯಾತಿಯ ಸುದ್ದು ರಾಯ್ ಸಂಗೀತ ನೀಡಿದ್ದಾರೆ. ರಾಖಿ ಛಾಯಾಗ್ರಹಣವಿದ್ದು, ಮರಿಸ್ವಾಮಿ ಸಂಕಲನ ಚಿತ್ರಕ್ಕಿದೆ.

Leave a Reply

Your email address will not be published. Required fields are marked *