Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಮೂಕಿ ಚಿತ್ರದಲ್ಲಿ ಅನುಷ್ಕಾ-ಮ್ಯಾಡಿ

Friday, 08.06.2018, 3:02 AM       No Comments

‘ಬಾಹುಬಲಿ’ ಚಿತ್ರದ ಬಳಿಕ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಅನುಷ್ಕಾ ಶೆಟ್ಟಿ, ಇದೀಗ ಮತ್ತೊಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಈವರೆಗೂ ಮಾಡದ ಪಾತ್ರದತ್ತ ಮುಖ ಮಾಡಿದ್ದು, ಅದಕ್ಕಾಗಿ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ಬಾರಿ ಅವರು ಆಯ್ದುಕೊಂಡಿರುವುದು ಮೂಕಿ ಚಿತ್ರ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರವನ್ನು ‘ವಸ್ತಾಡು ನಾ ರಾಜು’ ಚಿತ್ರ ಖ್ಯಾತಿಯ ಹೇಮಂತ್ ಮಧುಕರ್ ನಿರ್ದೇಶಿಸಲಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಈವರೆಗೆ ಕೆಲವೇ ಕೆಲವು ಮೂಕಿ ಸಿನಿಮಾಗಳು ನಿರ್ವಣಗೊಂಡು ಹೆಸರು ಮಾಡಿವೆ. ಅವುಗಳಲ್ಲಿ ಇತ್ತೀಚೆಗೆ ಪ್ರಭುದೇವ ಮುಖ್ಯ ಭೂಮಿಕೆ ನಿಭಾಯಿಸಿದ್ದ ‘ಮರ್ಕ್ಯೂರಿ’ ಸಹ ತೆರೆಕಂಡಿತ್ತು. ಇದೀಗ ಟಾಲಿವುಡ್​ನಲ್ಲಿ ಮತ್ತೊಂದು ಮೂಕಿ ಪ್ರಯತ್ನವಾಗುತ್ತಿದ್ದು, ಕೊಂಚ ಬೇರೆ ರೀತಿಯಲ್ಲಿ ಮೇಕಿಂಗ್ ಮಾಡುವ ಉದ್ದೇಶ ನಿರ್ದೇಶಕರದ್ದು. ವಿಶೇಷವೆಂದರೆ, ಇಡೀ ಸಿನಿಮಾದ ಚಿತ್ರೀಕರಣ ಅಮೆರಿಕದಲ್ಲಿ ನಡೆಯಲಿದೆ. ನ್ಯೂಯಾರ್ಕ್​ನ ಸೀಟಲ್ ನಗರದಲ್ಲಿ ಶೂಟಿಂಗ್ ಸಾಗಲಿದ್ದು, ಹಾಲಿವುಡ್​ನ ಕೆಲ ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರಂತೆ! ಈಗಾಗಲೇ ಕೆಲವರನ್ನು ಭೇಟಿಯಾಗಿ ಕಥೆಯನ್ನೂ ಹೇಳಿಬಂದಿದ್ದಾರಂತೆ ನಿರ್ದೇಶಕ ಹೇಮಂತ್.

ಹಾಗಾದರೆ ಅನುಷ್ಕಾಗೆ ಜೋಡಿ ಯಾರಾಗುತ್ತಾರೆ? ಬಹುಭಾಷಾ ನಟ ಮಾಧವನ್ ಈ ಮೂಕಿ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಲಿದ್ದಾರಂತೆ. ಪ್ರಾಥಮಿಕ ಮೂಲಗಳ ಮಾಹಿತಿ ಪ್ರಕಾರ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ನಿರ್ವಣವಾಗಲಿದೆ.ಮತ್ತೊಂದು ಆಸಕ್ತಿಕರ ವಿಷಯ ಏನೆಂದರೆ, ಮೂಕಿ ಸಿನಿಮಾಗಳಿಗೆ ಭಾಷೆಯ ಹಂಗಿಲ್ಲ. ಅಂತಹ ಚಿತ್ರಗಳು ಎಲ್ಲ ಕಡೆಗೆ ಸಲ್ಲುತ್ತವೆ. ಕಥೆ ಗಟ್ಟಿಯಾಗಿದ್ದರೆ ಭಾಷೆಯ ಪರಿಧಿ ಮೀರಿ ವಿಶ್ವಾದ್ಯಂತ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇರುತ್ತದೆ. ಸದ್ಯ ಸ್ಕ್ರಿಪ್ಟ್ ಹಂತದಲ್ಲಿರುವ ಸಿನಿಮಾಕ್ಕೆ ಕೋನ ವೆಂಕಟ್, ಗೋಪಿ ಮೋಹನ್ ಚಿತ್ರಕಥೆ ಬರೆಯುತ್ತಿದ್ದಾರೆ. ಕಿರಣ್ ರೆಡ್ಡಿ, ಭರತ್ ಚೌಧರಿ ಬಂಡವಾಳ ಹೂಡುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಸೆಪ್ಟಂಬರ್ ವೇಳೆಗೆ ಸಿನಿಮಾ ಸೆಟ್ಟೇರಲಿದೆ.

Leave a Reply

Your email address will not be published. Required fields are marked *

Back To Top