ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ

Latest News

ನಷ್ಟ ಕಡಿಮೆ ಮಾಡಿದರೆ ಲಾಭ ಸಾಧ್ಯ

ಕೊಪ್ಪಳ: ದಾಳಿಂಬೆ ಬೆಳೆಯಲ್ಲಿ ರೈತರು ಶೇ.35 ನಷ್ಟ ಅನುಭವಿಸುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಂಡಲ್ಲಿ ಹೆಚ್ಚಿನ ಆದಾಯ ಪಡೆಯಬಹುದೆಂದು ಭಾರತೀಯ ದಾಳಿಂಬೆ ಬೆಳೆಗಾರರ ಸಂಘದ...

ಜನಜಾಗೃತಿ ಅಭಿಯಾನಕ್ಕೆ ಅಭಿನವ ಗವಿಶ್ರೀ ಚಾಲನೆ

ಕಾರಟಗಿ: ಪಟ್ಟಣದಲ್ಲಿ ಜೆಸ್ಕಾಂನಿಂದ ಹಮ್ಮಿಕೊಂಡಿದ್ದ ವಿದ್ಯುತ್ ಅಪಾಯಗಳನ್ನು ತಪ್ಪಿಸುವ ಸುರಕ್ಷತಾ ಜನಜಾಗೃತಿ ಅಭಿಯಾನಕ್ಕೆ ಗವಿಮಠದ ಅಭಿನವ ಗವಿಶ್ರೀಗಳು ಬುಧವಾರ ಚಾಲನೆ ನೀಡಿದರು. ಜೆಸ್ಕಾಂನ ಇಇ...

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಮತ್ತೆ ಪ್ರೂವ್ ಮಾಡಿದ ಕೇರಳದ ಈ ಅಜ್ಜಿಯ ವಯಸ್ಸೆಷ್ಟು ಗೊತ್ತೆ?

ತಿರುವನಂತಪುರಂ: ಓದಿಗೆ ವಯಸ್ಸಿನ ಮಿತಿಯಿಲ್ಲ. ಉತ್ಸಾಹ ಹಾಗೂ ಛಲ ಓದಿಗೆ ಮುಖ್ಯ ಎಂದು ಕೇರಳದ 105 ವರ್ಷ ವಯಸ್ಸಿನ ಅಜ್ಜಿಯೊಬ್ಬರು ನಿರೂಪಿಸಿದ್ದಾರೆ. ಕೇರಳ ಸರ್ಕಾರದ...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ ಮಾತ್ರವಲ್ಲ, ಅವಳೊಂದು ಸಂದೇಶ ಸಾರುತ್ತಿದ್ದಾಳೆ…

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​...

ಮನವಿಗಾರರ ಜತೆ ಪ್ರಧಾನಿ ಮಾತುಕತೆ ಅವಧಿ 20 ನಿಮಿಷ: ಕೃಷಿಕರ ಸಮಸ್ಯೆ ಕೊಂಡೊಯ್ದ ಪವಾರ್ ಜತೆಗೆ 50 ನಿಮಿಷದ ಮಾತುಕತೆ ಯಾಕೆ?

ನವದೆಹಲಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿದೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್​ಸಿಪಿ ನಾಯಕ ಶರದ್ ಪವಾರ್ ನಡುವಿನ...

ಶಿಗ್ಗಾಂವಿ: ಈ ಊರಲ್ಲಿ ಮುಸ್ಲಿಮರಿಲ್ಲ ಆದರೆ, ಮಸೀದಿಯಿದೆ. ಮುಸ್ಲಿಮರ ಹಬ್ಬವಾದ ಮೊಹರಂನ್ನು ಪ್ರತಿವರ್ಷ ಹಿಂದುಗಳೇ ಭಕ್ತಿಯಿಂದ ಆಚರಿಸುತ್ತಾರೆ.

ಬುಧವಾರ ತಾಲೂಕು ಹುಲಿಕಟ್ಟಿ ಗ್ರಾಮದಲ್ಲಿ ಪ್ರತಿವರ್ಷದಂತೆ ಅಲೆದೇವರ ಪ್ರತಿಷ್ಠಾಪನೆಯಿಂದ ಹಿಡಿದು ದೇವರ ಮೈದೊಳೆಯುವುದು, ದೇವರನ್ನು ಹೊರುವ ಕಾರ್ಯಗಳೆಲ್ಲವನ್ನು ಹಿಂದುಗಳೇ ನೆರವೇರಿಸಿದರು. ಈ ಗ್ರಾಮದಲ್ಲಿ ಹಿರಿಯರ ಕಾಲದಿಂದಲೂ 3ರಿಂದ 4 ತಲೆಮಾರುಗಳಿಂದ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಹಿಂದುಗಳೇ ಆಚರಿಸುತ್ತಿದ್ದಾರೆ.

ಆರಂಭದ ದಿನದಿಂದ ಅಲೆದೇವರನ್ನು ಹಿಡಿಯುವ ಹಿಂದುಗಳು ಪಕ್ಕದ ಹಳ್ಳಿಯ ಒಬ್ಬ ಮುಸ್ಲಿಂರನ್ನು ತಂದು ಇವರ ಸಹಾಯದಿಂದ ಮೂರ್ತಿಗಳನ್ನು ಸ್ವಚ್ಛಗೊಳಿಸಿ ಉಡಿ ತುಂಬಿ ಹೋಗುತ್ತಾರೆ. ನಂತರ ಅವರ ಮನೆಯಲ್ಲಿ ಒದಕಿ(ಘಾತೆ) ಮಾಡಿ ದೇವರನ್ನು ಮಸೀದಿಗೆ ತೆಗೆದುಕೊಂಡು ಹೋಗುವ ಪದ್ಧತಿ ಈಗಲೂ ಮುಂದುವರಿದಿದೆ. ಇನ್ನೊಂದು ವಿಶೇಷತೆ ಏನೆಂದರೆ ಈ ಹಬ್ಬದ ದಿನದಂದು ಹಬ್ಬವಿರುವ ಪತ್ರಿಮನೆಯಲ್ಲಿ ನೀರು ಕುಡಿಯದೇ ಉಪವಾಸ ಮಾಡುತ್ತಾರೆ ದೇವರು ಮೈದೊಳೆದ ನಂತರ ಭೋಜನ ಸ್ವೀಕರಿಸುತ್ತಾರೆ.

ಅನ್ನ ಸಂತರ್ಪಣೆ

ಸವಣೂರ: ಮುಸ್ಲಿಂ ಧರ್ಮಗುರು ಹಜರತ್ ಇಮಾಮೇ ಹುಸೇನರ ಜನ್ಮ ದಿನ ಹಾಗೂ ಮೊಹರಂ ಅಂಗವಾಗಿ ತಾಲೂಕಿನ ಗೋನಾಳ ಗ್ರಾಮದ ಶಾ ಕಲಿಮುಲ್ಲಾ ಖಾದ್ರಿ ಸಮಿತಿ, ಖಾನಕಾ (ಆಶ್ರಮ), ಗ್ರಾಮದ ಹಿಂದು, ಮುಸ್ಲಿಮರಿಂದ ಸೋಮವಾರ ಗ್ರಾಮದಲ್ಲಿ ಅನ್ನ ಸಂತರ್ಪಣೆ, ತಾಲೂಕು ಆಸ್ಪತ್ರೆ ರೋಗಿಗಳಿಗೆ ಹಣ್ಣು, ಹಾಲು ವಿತರಣೆ ಮಾಡಲಾಯಿತು. ಕಲಿಮುಲ್ಲಾಶಾ ಖಾದ್ರಿ ನೇತೃತ್ವ ವಹಿಸಿದ್ದರು. ಉಪತಹಸೀಲ್ದಾರ್ ಎಸ್.ಸಿ. ವಣಗೇರಿ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿ, ಹಿಂದು-ಮುಸ್ಲಿಮರು ಭಾವೈಕ್ಯದಿಂದ ಹಬ್ಬ ಆಚರಿಸುವ ಪದ್ಧತಿ ಅಳವಡಿಸಿಕೊಂಡಿರುವುದು ಶ್ಲಾಘನೀಯ ಎಂದರು. ತಾಲೂಕು ವೈದ್ಯಾಧಿಕಾರಿ ಶಂಕರಗೌಡ ಹಿರೇಗೌಡ್ರ, ಸಮಿತಿ ಅಧ್ಯಕ್ಷ ದಾದಾಪೀರ ಮುಕಾಶಿ, ಉಪಾಧ್ಯಕ್ಷ ಚನ್ನಬಸಪ್ಪ ಪಾಣಿಗಟ್ಟಿ, ಮಹೇಂದ್ರ ಬಡಿಗೇರ, ಗ್ರಾಮ ಲೆಕ್ಕಾಧಿಕಾರಿ ರವಿ ಮಾಚಕನೂರ, ಖಲಂದರ್ ದರವೇಶಿ, ದಾವಲಸಾಬ್ ತಾಳಿಕೋಟಿ, ಜಾಫರಸಾಬ್ ಗಜಬೀರನವರ, ಸಮಿತಿ ಪದಾಧಿಕಾರಿಗಳು, ಇತರರು ಇದ್ದರು.

ಅಗ್ನಿಕುಂಡದಲ್ಲಿ ಉಪ್ಪು ಹಾಕಿ ಪ್ರಾರ್ಥನೆ

ಅಕ್ಕಿಆಲೂರ: ಹಿಂದು ಮುಸ್ಲಿಮರ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಅಲೈ ದೇವರ ಪ್ರತಿಷ್ಠಾಪನೆ ಸಮಿತಿ ವತಿಯಿಂದ 6 ದಿನಗಳಿಂದ ಗ್ರಾಮದ 12 ಕಡೆಗಳಲ್ಲಿ ಇಮಾಮ ಹುಸೇನ, ಹಜರತ್ ಅಲಿ, ಬಿಬೀ ಪಾತೀಮಾ ಅಕ್ಬರ್ ಅಲಿ ಸೇರಿ ಹತ್ತಾರು ಸಂತ ದೇವರುಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಅಲೈ ದೇವರ ಮೆರವಣಿಗೆ ರಾತ್ರಿವರೆಗೂ ಜರುಗಿತು. ಅಲೈ ದೇವರನ್ನು ಹೊತ್ತವರು ಅಗ್ನಿ ತುಳಿದು ಮೆರವಣಿಗೆಯಲ್ಲಿ ಸಾಗಿದರು. ಸಾರ್ವಜನಿಕರು ಅಗ್ನಿಕುಂಡದಲ್ಲಿ ಉಪ್ಪು ಹಾಕಿ ಪ್ರಾರ್ಥಿಸಿದರು. ರಾತ್ರಿ ಕಲ್ಲಾಪುರ ವೃತ್ತದಲ್ಲಿ 12 ಕಡೆಗಳ ಅಲೈ ದೇವರುಗಳನ್ನು ಸೇರಿಸಲಾಯಿತು. ನಂತರ ಈಶ್ವರ ಕೆರೆಯಲ್ಲಿ ದೇವರ ಮೈತೊಳೆಯುವ ಕಾರ್ಯಕ್ರಮ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಅಲೈ ದೇವರ ಮೂರ್ತಿ ಮೆರವಣಿಗೆ

ಹಾವೇರಿ: ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ನಗರದಲ್ಲಿ ಬುಧವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.ನಗರದ ಎಲ್ಲ ಮಸೀದಿಗಳಲ್ಲಿ ಬೆಳಗ್ಗೆಯಿಂದಲೇ ಭಕ್ತಿ, ಭಾವದಿಂದ ಪೂಜೆ ಸಲ್ಲಿಸಲಾಯಿತು. ಮೊಹರಂ ಹಬ್ಬದ ಕೊನೆಯ ದಿನವಾದ ಬುಧವಾರ ಬೆಳಗ್ಗೆ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ ದೇವರುಗಳನ್ನು ಹೊತ್ತು ಪರಸ್ಪರ ಭೇಟಿ ಮಾಡುತ್ತ ಪಂಝಾಗಳ ಭವ್ಯ ಮೆರವಣಿಗೆ ಹೊರಡಿಸಲಾಯಿತು. ಹಿಂದು, ಮುಸ್ಲಿಂ ಬಂಧುಗಳು ನಗರದ ಸುಭಾಸ ಸರ್ಕಲ್​ನಲ್ಲಿ ಎಲ್ಲ ಮುಸ್ಲಿಂ ವಿಗ್ರಹಗಳನ್ನು ಒಗ್ಗೂಡಿಸಿ ಹಬ್ಬ ಆಚರಿಸಿದರು. ಲಾವಣಿಪದ, ಹೆಜ್ಜೆಮೇಳ, ಹೆಜ್ಜೆಪದ ಹಾಡುಗಳಿಗೆ ವಿವಿಧ ಭಂಗಿಯ ಹೆಜ್ಜೆ ಹಾಕುತ್ತ ದೇವರಗಳನ್ನು ನದಿಗೆ ಕಳುಹಿಸಿದರು. ಹಬ್ಬದ ಅಂಗವಾಗಿ ಭಕ್ತರು ಕೆಂಡ ಹಾಯ್ದು ಭಕ್ತಿ ಪರಾಕಾಷ್ಟೆ ಮೆರೆದರು. ನಗರದ ಕಾಗಿನೆಲೆ ಬಸ್​ನಿಲ್ದಾಣ, ಸುಭಾಸ ವೃತ್ತ, ನಾಗೇಂದ್ರನಮಟ್ಟಿ, ಎಸ್​ಬಿಎಂ ಬ್ಯಾಂಕ್ ಪಕ್ಕ ಮತ್ತು ವಿವಿಧ ಭಾಗಗಳಲ್ಲಿ ಹಟೇಲ್ ಭಾಷಾ, ಬೀಬಿ ಫಾತಿಮಾ, ಇಮಾಮಿಹುಸೇನ್, ಮೌಲಾಲಿ, ಇಮಾಮಿಹಸನ್ ದೇವರುಗಳ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

- Advertisement -

Stay connected

278,627FansLike
573FollowersFollow
610,000SubscribersSubscribe

ವಿಡಿಯೋ ನ್ಯೂಸ್

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬಳಸಿದ ಪರಿಸರಸ್ನೇಹಿ ಕಾರು...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...