ಚಿತ್ರದುರ್ಗ: ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇ.4 ಮೀಸಲು ನೀಡುವ ವಿಧೇಯಕಕ್ಕೆ ಒಪ್ಪಿಗೆ ನೀಡದಂತೆ ವಿಶ್ವ ಹಿಂದು ಪರಿ ಷತ್, ಬಜರಂಗದಳದ ಕಾರ‌್ಯಕರ್ತರು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರಿಗೆ ಬುಧವಾರ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ಸದನದಲ್ಲಿ ಮುಸ್ಲಿಂರಿಗೆ ಮೀಸಲು ಮಸೂದೆ ಅಂಗೀಕರಿಸಿದೆ. 2 ಕೋಟಿ ರೂ.ವರೆಗಿನ ಸಿವಿಲ್ ವರ್ಕ್ಸ್ ಗುತ್ತಿಗೆ ಮತ್ತು 1 ಕೋಟಿ ರೂ.ವರೆಗಿನ ಸರಕು ಮತ್ತು ಸೇವಾ ಗುತ್ತಿಗೆಯಲ್ಲಿ ಮುಸ್ಲೀಮರಿಗೆ ಶೇ.4 ಮೀಸಲು ನೀಡುವ ಕೆಟಿಟಿಪಿ ಕಾಯಿದೆ ತಿದ್ದುಪಡಿಯನ್ನು ರಾಜ್ಯಸಚಿವ ಸಂಪುಟ ಅನುಮೋದಿಸಿದೆ.
ಧರ್ಮ, ಜಾತಿ ಆಧರಿಸಿ ತಾರತಮ್ಯಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಸಂವಿಧಾನ ರಚನೆ ಸಂದರ್ಭದಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿ ವಿರೋಧಿಸಿದ್ದರು. ವಿವಿಧ ರಾಜ್ಯಗಳಲ್ಲಿ ಈಗಾಗಲೇ ನಡೆದಿರುವ ಧರ್ಮಾಧಾರಿತ ಮೀಸಲಾತಿ ಪ್ರ ಯತ್ನಗಳನ್ನು ನ್ಯಾಯಾಲಯಗಳು ತಿರಸ್ಕರಿಸಿವೆ. ಹೀಗಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಈ ಮೂಲಕ ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
ಸುಪ್ರೀಂಕೋರ್ಟ್ ಕೂಡ ಧರ್ಮ ಆಧಾರಿತ ಮೀಸಲಾತಿ ರದ್ದುಗೊಳಿಸಿದೆ. ಮೀಸಲಾತಿ ಪ್ರಯೋಜನಗಳಿಗಾಗಿ 77 ಸಮುದಾಯ ಗಳನ್ನು ಒಬಿಸಿ ಎಂದು ವರ್ಗೀಕರಿಸಿದ್ದ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಆದ್ದರಿಂದ ಧ ರ್ಮಾಧಾರಿತ ಮೀಸಲಾತಿ ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುವುದರಿಂದ, ಯಾವುದೇ ಕಲ್ಯಾಣ ಉದ್ದೇಶವಿಲ್ಲದ ಅಸಾಂವಿಧಾನಿಕ, ರಾಷ್ಟ್ರೀಯ ಸಮಗ್ರತೆ, ಏಕತೆ ಮತ್ತು ಸಾರ್ವಭೌಮತೆಗೆ ಅಪಾಯ ಉಂಟುಮಾಡುವ ಮಸೂದೆ ಅಂಗೀಕಾರ ಮಾಡದಂತೆ ಕಾರ‌್ಯಕರ್ತ ರು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.
ಬಜರಂಗದಳದ ನಗರ ಸಂಯೋಜಕ್ ದೀಪಕ್‌ರಾಜ್, ನಗರ ಸಹ ಸಂಯೋಜಕ್ ಕಿಶೋರ್, ಗ್ರಾಮಾಂತರ ಸಹ ಸಂಯೋಜಕ ದರ್ಶನ್ ಯೋಗಿ, ದರ್ಶನ್ ತಮಟಕಲ್ಲು ಮತ್ತಿತರರು ಇದ್ದರು.
