ಲಿಂಗಸುಗೂರು: ಪಟ್ಟಣದ ಗುಡದನಾಳ ಕ್ರಾಸ್ ಬಳಿ ಶುಕ್ರವಾರ ಮಧ್ಯರಾತ್ರಿ ನಾಲ್ಕೈದು ಜನ ಮುಸುಕುಧಾರಿಗಳು ಮಾರಕಾಸ್ತ್ರ ಸಹಿತ ಅಮರೇಶ ಪಾಕರೆಡ್ಡಿ ಎಂಬುವವರ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದು, ಈ ಕುರಿತ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಮನೆಯ ಸುತ್ತಮುತ್ತ ಸಿಸಿ ಕ್ಯಾಮರಾ ಅಳವಡಿಸಿರುವುದನ್ನು ಗಮನಿಸಿ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬಳಿಕ ಈ ತಂಡ ನಿವೃತ್ತ ಎಎಸ್‌ಐ ಭೀಮಾಶಂಕರ ಅವರ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಅಮರೇಶ ಪಾಕರಡ್ಡಿ ಬೆಳಗ್ಗೆ ಸಿಸಿ ಟಿವಿ ಗಮನಿಸಿದಾಗ ಕಳ್ಳತನ ಯತ್ನ ಬೆಳಕಿಗೆ ಬಂದಿದೆ. ಬಳಿಕ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಿಸಿ ಟಿವಿ ದೃಶ್ಯ ಪರಿಶೀಲಿಸಿ ಮನೆ ಸುತ್ತಮುತ್ತ ಹಾಗೂ ಪಟ್ಟಣದ ಹೊರವಲಯದಲ್ಲಿ ಪರಿಶೀಲನೆ ನಡೆಸಿದರು.