More

  ಮುಳಬಾಗಿಲಿನಲ್ಲಿ ಜೆಡಿಎಸ್​-ಕಾಂಗ್ರೆಸ್​ ಹಣಾಹಣಿ

  ಕಾಂಗ್ರೆಸ್​ಗೆ ಕೊತ್ತೂರು ಬಲ l ಕ್ಷೇತ್ರ ಪಡೆಯಲು ಜೆಡಿಎಸ್​ ಉತ್ಸಾಹ l ಬಿಜೆಪಿಗೆ ಬೇಕಿದೆ ಎನರ್ಜಿ

  ವಿ.ಮುನಿವೆಂಕಟೇಗೌಡ ಕೋಲಾರ
  ಜಿಲ್ಲೆಯ ಮೂಡಲಬಾಗಿಲು ಎಂದೇ ಹೆಸರಾಗಿರುವ ಮುಳಬಾಗಿಲು ವಿಧಾನಸಭೆ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ಇನ್ನು 13 ದಿನಗಳಷ್ಟೇ ಬಾಕಿ ಇರುವುದರಿಂದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸಿ ಊರೂರು ಸುತ್ತುತ್ತಿದ್ದಾರೆ.
  ರಾಜಕೀಯ ಪಕ್ಷಗಳ ಪಾಲಿಗೆ ಮುಳಬಾಗಿಲು ಕ್ಷೇತ್ರ ಅದೃಷ್ಟದ ಬಾಗಿಲು ಇದ್ದಂತೆ. ಇಲ್ಲಿ ಬಿಜೆಪಿ, ಜೆಡಿಎಸ್​, ಕಾಂಗ್ರೆಸ್​ ಅಸ್ತಿತ್ವ ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ಆರಂಭಿಸಿವೆ. ಕೊನೇ ಗಳಿಗೆಯಲ್ಲಿ ಕಾಂಗ್ರೆಸ್​ ಟಿಕೆಟ್​ ಪಡೆದು ಬಂದಿರುವ ವಿ.ಆದಿನಾರಾಯಣ, ಬಿಜೆಪಿಯಿಂದ ಸೀಗೇಹಳ್ಳಿ ಸುಂದರ್​ ಮತ್ತು ಜೆಡಿಎಸ್​ನಿಂದ ಸಮೃದ್ಧಿ ಮಂಜುನಾಥ ಅಭ್ಯರ್ಥಿಗಳಾಗಿದ್ದಾರೆ. ಇವರ ಜತೆಗೆ ಎಎಪಿ ಮತ್ತು ಪೇತರರು ಸೇರಿ 12 ಮಂದಿ ಕಣದಲ್ಲಿ ಉಳಿದಿದ್ದಾರೆ.
  ಕಳೆದ ಚುನಾವಣೆಯಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಸಮೃದ್ಧಿ ಮಂಜುನಾಥ್​ ಮತ್ತೆ ಅಭ್ಯರ್ಥಿಯಾಗಿದ್ದಾರೆ. ೇತ್ರದಲ್ಲಿ ಕಳೆದ 5 ವರ್ಷಗಳಿಂದ ಜೆಡಿಎಸ್​ ಸಂಟನೆಯ ಜತೆಗೆ ಸಮಾಜಸೇವೆ ಮುಂದುವರಿಸಿಕೊಂಡು ಬಂದಿದ್ದಾರೆ. ಜಾತಿ ಪ್ರಮಾಣ ಪತ್ರ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವ ಕಾರಣ ಕೊತ್ತೂರು ಮಂಜುನಾಥ್​ ಮುಳಬಾಗಿಲಿನ ಬದಲಾಗಿ ಕೋಲಾರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದಾರೆ. ಕೊನೇ ಕ್ಷಣದಲ್ಲಿ ವಿ.ಆದಿನಾರಾಯಣ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದಾರೆ. ಆದಿನಾರಾಯಣ ಈ ಹಿಂದೆ ಜೆಡಿಎಸ್​ನಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದರು, ಆದರೆ ಆಗ ಮುನಿಆಂಜಿನಪ್ಪ ಅಡ್ಡಿಯಾದ ಕಾರಣ ಟಿಕೆಟ್​ ವಂಚಿತರಾಗಿದ್ದರು. ಜೆಡಿಎಸ್​ ಕಾರ್ಯಕರ್ತರ ಸಂರ್ಪಕವೂ ಆದಿ ನಾರಾಯಣ್​ಗೆ ಇದೆ.

  ಮೂವರು ಹೊರಗಿನ ಅಭ್ಯರ್ಥಿಗಳು: ಬಿಜೆಪಿಯ ಶೀಗೇಹಳ್ಳಿ ಸುಂದರ್​, ಜೆಡಿಎಸ್​ ಸಮೃದ್ಧಿ ಮಂಜುನಾಥ್​ ಮತ್ತು ಕಾಂಗ್ರೆಸ್​ನ ಆದಿನಾರಾಯಣ ಮೂವರು ಹೊರಗಿನ ಅಭ್ಯರ್ಥಿಗಳೇ ಆಗಿದ್ದಾರೆ. ಮೂವರೂ ರಿಯಲ್​ ಎಸ್ಟೇಟ್​ ಉದ್ಯಮಿಗಳೇ ಆಗಿದ್ದಾರೆ. ಸಮೃದ್ಧಿ ಮಂಜುನಾಥ್​ ಮುಳಬಾಗಿಲು ತಾಲೂಕಿನಲ್ಲಿಯೇ ವಾಸದ ಮನೆ ನಿರ್ಮಿಸಿಕೊಂಡಿದ್ದಾರೆ. ಆದಿ ನಾರಾಯಣಗೂ ಕ್ಷೇತ್ರ ಪರಿಚಿತವಾಗಿದೆ.

  ಮುಳಬಾಗಿಲಿನಲ್ಲಿ ಜೆಡಿಎಸ್​-ಕಾಂಗ್ರೆಸ್​ ಹಣಾಹಣಿ

  ಕಾಂಗ್ರೆಸ್​ನಿಂದ ಕೊನೇ ಕ್ಷಣದ ಹೋರಾಟ: ಕ್ಷೇತ್ರ ಹಳೆಯದಾದರೂ ಚುನಾವಣಾ ಅವಧಿ ಕಡಿಮೆ ಇರುವ ಕಾರಣ ಆದಿನಾರಾಯಣ ಬಿರುಸಿನಿಂದ ಸಂಚರಿಸುತ್ತಿದ್ದಾರೆ. ಅವರಿಗೆ ಕಾಂಗ್ರೆಸ್​ನ ಕೆ.ಎಚ್​.ಮುನಿಯಪ್ಪ ಹಾಗೂ ಕೊತ್ತೂರು ಮಂಜುನಾಥ್​ ಬಣ ಎರಡೂ ಒಂದಾಗಿ ಕೆಲಸ ಮಾಡುತ್ತಿವೆ. ಜತೆಗೆ ಮಾಜಿ ಸಚಿವ ದಿವಂಗತ ಆಲಂಗೂರು ಶ್ರೀನಿವಾಸ್​ ಸಹೋದರ ಆಲಂಗೂರು ಶಿವಣ್ಣ ಜೆಡಿಎಸ್​ನಲ್ಲಿ ಇದ್ದುಕೊಂಡೇ ಬೆಂಬಲ ಸೂಚಿಸಿರುವುದರಿಂದ ಅನುಕೂಲವಾಗಿದೆ. ಕೊತ್ತೂರು ಮಂಜುನಾಥ್​ ಪ್ರಭಾವವನ್ನು ಆದಿನಾರಾಯಣ ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

  ಜೆಡಿಎಸ್​ಗೆ ಸ್ಥಳಿಯ ಮುಖಂಡರ ಬಲ: ಕ್ಷೇತ್ರದಲ್ಲಿ ತಮ್ಮದೇ ಆದ ಪಡೆ ಹೊಂದಿರುವ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ಆನಂದ್​ ರೆಡ್ಡಿ ಜೆಡಿಎಸ್​ಗೆ ಸೇರ್ಪಡೆಯಾಗಿರುವುದು ಮತ್ತು ಬಲಿಜಿಗ ಸಮುದಾಯದ ಪ್ರಭಾವಿ ನಾಯಕ ಕಲ್ಪಳ್ಳಿ ಪ್ರಕಾಶ್​ ಬೆಂಬಲ ಸೂಚಿಸಿರುವುದು ಜೆಡಿಎಸ್​ ಅಭ್ಯರ್ಥಿ ಸಮೃದ್ಧಿ ಮಂಜುನಾಥ್​ ಬಲ ಹೆಚ್ಚಿಸಿದಂತಾಗಿದೆ. ಕ್ಷೇತ್ರದಲ್ಲಿ ಬಲಗೈ ಸಮುದಾಯದವರು ಮತ್ತು ಒಕ್ಕಲಿಗರು ಹೆಚ್ಚಾಗಿರುವುದರಿಂದ ಈ ಎರಡು ಸಮುದಾಯದವರು ಜೆಡಿಎಸ್​ ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ.

  ಬಿಜೆಪಿಗೆ ಸಂಟನೆ ಕೊರತೆ: ಬಿಜೆಪಿಯಿಂದ ಹೊಸಮುಖ ಶೀಗೇಹಳ್ಳಿ ಸುಂದರ್​ ಅಭ್ಯರ್ಥಿಯಾಗಿದ್ದಾರೆ. ಇವರಿಗೆ ಸಂಸದ ಎಸ್​.ಮುನಿಸ್ವಾಮಿ ಬೆಂಬಲ ಇದೆ. ಹಾಲಿ ಶಾಸಕ ಎಚ್​.ನಾಗೇಶ್​ ಪೇತರರಾಗಿ ಗೆಲುವು ಸಾಧಿಸಿದ ಬಳಿಕ ಬಿಜೆಪಿ ಸರ್ಕಾರದಲ್ಲಿ ಸಚಿವ ಮತ್ತು ನಿಗಮ ಮಂಡಳಿ ಅಧ್ಯಕ್ಷರಾಗಿದ್ದರೂ ಬಿಜೆಪಿ ಸಂಪರ್ಕ ಶಾಸಕರಿಗೆ ಕಡಿಮೆ ಇದ್ದ ಕಾರಣ ಸಂಟನೆ ಇಲ್ಲವಾಗಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ ಸಮಬಲ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ.


  ಸಮೃದ್ಧಿಗೆ ಬ್ರೇಕ್​ ಹಾಕಲು ಕೈ ಮುಂದು: ಜೆಡಿಎಸ್​ ಅಭ್ಯರ್ಥಿ ಸಮೃದ್ಧಿ ಮಂಜುನಾಥ್​ ನಾಗಾಲೋಟಕ್ಕೆ ಕಾಂಗ್ರೆಸ್​ ಅಭ್ಯರ್ಥಿ ವಿ.ಆದಿನಾರಾಯಣ ಬ್ರೇಕ್​ ಹಾಕಲು ಮುಂದಾಗಿದ್ದಾರೆ. ಕಳೆದ 5 ವರ್ಷಗಳಿಂದ ಕ್ಷೇತ್ರದಲ್ಲಿ ಸಮೃದ್ಧಿ ಮಂಜುನಾಥ್​ ತನ್ನದೇ ರೀತಿಯ ಹವಾ ಸೃಷ್ಟಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಕೊನೇ ಗಳಿಗೆಯಲ್ಲಿ ಟಿಕೆಟ್​ ನೀಡಿರುವುದರಿಂದ ಜೆಡಿಎಸ್​ ಮತ್ತು ಕಾಂಗ್ರೆಸ್​ನ ಎರಡೂ ಬಣಗಳ ಮುಖಂಡರನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಆದಿನಾರಾಯಣ ಮುಂದಾಗಿದ್ದಾರೆ. ಭೋವಿ ಜನಾಂಗಕ್ಕೆ ಸೇರಿದ ಆದಿನಾರಾಯಣ್​ಗೆ ಜನಾಂಗದ ಬೆಂಬಲವೂ ಇದೆ, ಎಡಗೈ ಜನಾಂಗದ ಬೆಂಬಲದ ಜತೆಗೆ ಮುಸ್ಲಿಂ ಜನಾಂಗದ ಬೆಂಬಲ ಪಡೆಯಲು ಮುಂದಾಗಿದ್ದಾರೆ.

  ಕಣದಲ್ಲಿರುವ ಅಭ್ಯರ್ಥಿಗಳು

  ಮುಖಬಾಗಿಲು ಎಸ್​ಸಿ ಮೀಸಲು ಕ್ಷೇತ್ರದಲ್ಲಿ ಅಂತಿಮ ಕಣದಲ್ಲಿ ವಿ.ಆದಿನಾರಾಯಣ (ಕಾಂಗ್ರೆಸ್​), ಸಮೃದ್ದಿ ಮಂಜುನಾಥ (ಜೆಡಿಎಸ್​), ಕೆ.ಸುಂದರ್​ ರಾಜ್​ (ಬಿಜೆಪಿ) ಎನ್​.ವಿಜಯಕುಮಾರ್​(ಎಎಪಿ), ಎಂ.ಆನಂದ್​ ಕುಮಾರ್​ (ಕೆಆರ್​ಎಸ್​) ಕೆ.ವಿ.ಮೂರ್ತಿ (ಸಾರ್ವಜನಿಕ ಆದರ್ಶ ಸೇನೆ) ಪಕ್ಷೇತರರಾಗಿ ಜಿ.ಎಂ.ಗೋವಿಂದಪ್ಪ, ಆರ್​.ಗೋವಿಂದು, ಕೆ.ನಾಗರಾಜ್​, ಜಿ.ಸಿ.ರಾಮಪ್ಪ ವೆಂಕಟೇಶಪ್ಪ, ಆರ್​. ಶ್ರೀಧರ್​ ಸ್ಪರ್ಧಿಸಿದ್ದಾರೆ.

  2018ರ ಚುನಾವಣೆಯ ಬಲಾಬಲ

  • ಎಚ್​.ನಾಗೇಶ್​ ಪಕ್ಷೇತರ 74213
  • ಸಮೃದ್ಧಿ ಮಂಜುನಾಥ್​ ಜೆಡಿಎಸ್​ 67498
  • ಅಮರೇಶ್​ ಬಿಜೆಪಿ 8411

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts